Free Shipping Charge on Orders above ₹300

Shop Now

Artificial Intelligence, Saralagannadalli Sale -10%
Rs. 153.00Rs. 170.00
Vendor: BEETLE BOOK SHOP
Type: PRINTED BOOKS
Availability: 24 left in stock

ದೂರದ ಬೆಟ್ಟ ಕೆಲವರಿಗೆ ನುಣ್ಣಗೆ, ಕೆಲವರಿಗೆ ಕರಿಗತ್ತಲ ಘೇಂಡಾಮೃಗ. ಅದು ನುಣ್ಣಗೂ ಇಲ್ಲ, ಘೇಂಡಾಮೃಗವೂ ಅಲ್ಲವೆಂಬ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕ.  ಪುಸ್ತಕದ ಮುಖ್ಯಭಾಗದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ- ಅದು ಯಾಕೆ, ಅದು ಹೇಗೆ, ಅದರಿಂದೇನು ಉಪಯೋಗ, ಅದರಿಂದೇನು ತೊಂದರೆ ಮುಂತಾಗಿ ಅತ್ಯಂತ ಸರಳಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ.  ಇನ್ನುಳಿದ ಎರಡು ಭಾಗಗಳಲ್ಲಿ ಇನ್ನುಳಿದ ತಂತ್ರಜ್ಞಾನಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸಲಾಗಿದೆ.  ಇದು ಇಂಟರ್ನೆಟ್ ತಡಕಿದರೆ ಸಿಗುವ ಮಾಹಿತಿಗಿಂತ ವಿರಳ; ಪಠ್ಯಪುಸ್ತಕಗಳನ್ನು ಜಾಲಾಡಿದರೆ ಸಿಗುವ ಮಾಹಿತಿಗಿಂತ ಸರಳ. ತಂತ್ರಜ್ಞಾನವೆಂದರೆ ಕಬ್ಬಿಣದ ಕಡಲೆಯೆಂಬ ಭಯವನ್ನು ಹೋಗಲಾಡಿಸಿ ಸುಲಿದ ಬಾಳೆಹಣ್ಣಿನಂದದಿ ಒಲವು ಮೂಡಿಸುವ ಪ್ರಯತ್ನ. ಹಗಲಿಡೀ ಮೈಮುರಿದು ದುಡಿದು ಇಳಿಸಂಜೆ ಊರ ಮುಂದಿನ ಅರಳಿಕಟ್ಟೆಯ ಮೇಲೆ ವಿರಾಮದಿಂದ ಕುಳಿತಾಗ ಮೂಡುವ ಲೋಕಜ್ಞಾನದ ಸಂವಾದ. ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಹಿರಿಯರು, ಕಿರಿಯರು, ಖುದ್ದು ಟೆಕ್ಕಿಗಳೂ ಓದಬಹುದೆಂದು ನನ್ನ ನಂಬಿಕೆ.  ತಂತ್ರಜ್ಞಾನವೆಂದರೆ ಅದರಲ್ಲಿಯೂ ಮಾತೃಭಾಷೆಯಲ್ಲಿ ತಂತ್ರಜ್ಞಾನವೆಂದರೆ ಬೆನ್ನು ತೋರಿಸಿ ಓಡುವ ಬದಲು, ಬನ್ನಿ ಓದಿನ ಸುಖ ಅನುಭವಿಸಿ. ತಂತ್ರಜ್ಞಾನವನ್ನು ಬಾಗಿಲು ಕಾಯುವ  ಸಾಕುನಾಯಿಯನ್ನಾಗಿ ಮಾಡಿಕೊಳ್ಳಿ. 

ಇಲ್ಲಿನ ಬಹುತೇಕ ಲೇಖನಗಳು ವಿಜಯಕರ್ನಾಟಕ, ಸಮಾಜಮುಖಿ, ಮುಂತಾದೆಡೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ, ಅಥವಾ ಶಿಬಿರ, ಕಾರ್ಯಗಾರ, ಕಾಲೇಜು ಮುಂತಾದೆಡೆ ಕೊಟ್ಟ ಉಪನ್ಯಾಸದ ಪಠ್ಯರೂಪದ್ದಾಗಿವೆ.

Guaranteed safe checkout

Artificial Intelligence, Saralagannadalli
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading