Free Shipping Charge on Orders above ₹300

Shop Now

Anaamadheya Geerugalu Sale -10%
Rs. 108.00Rs. 120.00
Vendor: BEETLE BOOK SHOP
Type: PRINTED BOOKS
Availability: 7 left in stock

“ಆಳಿದವರೇ ಮುಖ ಮರೆಸಿಕೊಳ್ಳಿ
ನನ್ನ ದೇಹದಲ್ಲೆಲ್ಲಾ
ನೀವಿಟ್ಟ ಗೀರುಗಳಿವೆ”
ಇದು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರಾದ ನಿಜಾಮ್ ಗೊಳಿಪಡ್ಪು, ಸಜೀಪನಡುರವರ “ಅನಾಮಧೇಯ ಗೀರುಗಳು” ಕವನಸಂಕಲನದ ಸಾಲುಗಳು. ಇವರ ಅನಾಮಧೇಯ ಗೀರುಗಳು ಕವನ ಸಂಕಲನಕ್ಕೆ ೨೦೨೪ರ ಪ್ರತಿಷ್ಟಿತ, ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ಕೊರಕಿದ್ದಕ್ಕೆ ಅಭಿನಂದನೆಗಳು. ಕೇವಲ ಪಿಯುಸಿ ಓದಿ ಕೂಲಿಕೆಲಸ ಮಾಡುತ್ತಿರುವ ಚಿಕ್ಕ ವಯಸ್ಸಿನ ಪೋರ ಇಂತಹ ಕವಿತೆಗಳನ್ನು ಬರೆಯಬಲ್ಲನೆ ಎಂದು ನನಗೆ ಒಂದು ಕ್ಷಣ ಅನಿಸಿದ್ದುಂಟು. ಎಕೆಂದರೆ ನಿಜಾಮರವರ ಕವಿತೆಗಳು ಬಹಳ ಎತ್ತರದ ಕವಿತೆಗಳಾಗಿವೆ. ಪಾಬ್ಲೋ ನೆರೋದನು ಒಂದು ಪಕ್ಷಿಯ ಸಾವನ್ನು ನೋಡಿ ಬರೆದ ಮಾರ್ಮಿಕ ಕವಿತೆಯನ್ನು ನೋಡಿ ಅವರ ತಂದೆಯೂ ಈ ಪೋರ ಇಂತಹ ಕವಿತೆ ಬರೆಯಬಲ್ಲನೇ ಎಂದು ಅಂದುಕೊAಡಿದ್ದರAತೆ.
ಇವರು ಅವಿಜ್ಞಾನಿ ಹೆಸರಿನಲ್ಲಿ ಬರೆಯುತ್ತಿದ್ದ ಇವgÄ ಕನ್ನಡದ ಹೊಚ್ಚ ಹೊಸ ಪ್ರತಿಭೆ. ಇವರ ಬದುಕು, ಭವಣೆ, ಇಕ್ಕಟ್ಟು, ಸಂಕಷ್ಟ, ಸಂಭ್ರಮಗಳ ನಡುವೆ ಜೀಕಿದ ಜೀವನವೇ ಇವರ ಕಾವ್ಯವಾಗಿದೆ. ಇಲ್ಲಿಯ ಬಹುತೇಕ ಕವಿತೆಗಳು ಇಂತಹ ಜೀವನ ತತ್ವದ ಪಡಿಯಚ್ಚಾಗಿವೆ. ಹಲವಾರು ತಲ್ಲಣದ ಕ್ಷಣಗಳನ್ನು ಅವರು ನೋವಿನಾಳದ ಕೋಳವೆಯೊಳಗಿಂದ ನುಡಿಯುತ್ತಾರೆ. ಇವರ ಕವಿತೆಗಳಲ್ಲಿ ಒಂದು ಭಿನ್ನವಾದ ಲೋಕವಿದೆ. ಅದನ್ನು ಮುಸ್ಲಿಂ ಸಂವೇದನೆ ಎಂಬ ಚೌಕಟ್ಟಿಗೆ ಕೂಡಿಸಲಾಗದು. ಬದುಕಿನ ನೋವಿನ, ತಲ್ಲಣದ ಕ್ಷಣಗಳನ್ನು ಮತ್ತು ಬದುಕಿನ ವಿಶಾದ, ನಿಟ್ಟುಸಿರಿನ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಹಿಡಿದಿಟ್ಟಿದ್ದಾರೆ. ನಿಜಾಮರವರ ಕವಿತೆಗಳಲ್ಲಿ ಬುಧ್ಧಿ, ಭಾವ, ತರ್ಕ, ಶಬ್ದ, ಅರ್ಥಗಳೆಲ್ಲವೂ ಕರಗಿ ನೀರಾಗಿ ಸಂವೇದನಾ ಸ್ವರೂಪದಲ್ಲಿ ಹರಿವ ನದಿಯಾಗಿವೆ. ಇವರ ಕಾವ್ಯ ಸಹಜವಾಗಿ ಹರಿಯುತ್ತದೆ.
ಇವರ ಪ್ರಥಮಕೃತಿ “ಅನಾಮಧೇಯ ಗೀರುಗಳು” ಇವರಿಗೆ ಪ್ರಶಸ್ತಿಯನ್ನೂ ಸಹ ತಂದುಕೊಟ್ಟಿರುವುದಕ್ಕೆ ಅಭಿನಂದನೆಗಳು. ಈ ಮಹತ್ವದ ಕವಿಯನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದೂ ಆಗಿದೆ. ಅವರಿಂದ ಇನ್ನೂ ಮಹತ್ವದ ಕೃತಿಗಳು ಹೊರಬರಲೆಂಬ ಹಾರೈಕೆಗಳೊಂದಿಗೆ.

ಡಾ.ಕೆ.ಷರೀಫಾ
ಬೆAಗಳೂರು.

Guaranteed safe checkout

Anaamadheya Geerugalu
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading