Your cart is empty now.
ಲೇಖಕರು: ಪರ್ವೀನ್ ಸುಲ್ತಾನಾ , Parvin Sultana
ಪರ್ವೀನ್ ಸುಲ್ತಾನಾ ನಮ್ಮ ಶರಣ-ಸೂಫಿ ಸಂತರ ನಾಡಿನ ಸಹಜ ಪ್ರತಿಭೆ. ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕಲಿಯುವ ಮತ್ತು ಕಲಿಸುವ ಎರಡರಲ್ಲೂ ಸೈ ಎನಿಸಿಕೊಂಡ ಭರವಸೆಯ ಕವಯಿತ್ರಿ. ತನ್ನ ಪರಿಶ್ರಮ ಪ್ರಯತ್ನಗಳನ್ನು ನಂಬಿಕೊಂಡು ಅಕಾಡೆಮಿಕ್ ವಲಯದೊಳಗೂ ಗುರುತಿಸಿಕೊಂಡು ಈಗ ತುಂಬ ಅಪರೂಪದ ಕೃತಿಯೊಂದನ್ನು ಕನ್ನಡಿಗರ ಕೈಗೆ ಇಡುತ್ತಿರುವುದು ಪ್ರಶಂಸನೀಯ. ಶರಣರ ನಾಡಿನ ಸೂಫಿ ಮಾರ್ಗ ಎಂಬ ಕೃತಿಯು ವರ್ತಮಾನದ ಕಲುಷಿತ ರಾಜಕಾರಣದ ಅಪಸವ್ಯಗಳಿಗೆ ಸಮರ್ಥವಾದ ಉತ್ತರ ನೀಡಬಲ್ಲ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಧರ್ಮಾಂಧರ ಕಣ್ಣು ತೆರೆಯಿಸಬಲ್ಲ ಕೃತಿ. ಕಲಬುರಗಿ, ಬೀದರ - ಇವು ಶರಣ ಮತ್ತು ಸೂಫಿಗಳ ಆಡುಂಬೊಲ. ಇಲ್ಲಿನ ಬಸವಾದಿ ಶರಣರ ಚಳುವಳಿಯು ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯೆಂದು ಗುರುತಿಸಲಾಗಿರುವಂತೆಯೇ ಇಲ್ಲಿನ ಸೂಫಿ ಪಂಥಗಳು ಭಾರತದ ದಾರ್ಶನಿಕ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿವೆ ಎಂಬುದು ಒಂದು ವಿಶೇಷ.
ಶರಣರ ನಾಡಿನ ಸೂಫಿ ಪರಂಪರೆಯ ಬಗ್ಗೆ ವಿಸ್ತ್ರತವಾದ ಅಧ್ಯಯನಗಳು ನಡೆದಿಲ್ಲ. ಈ ಕೊರತೆಯನ್ನು ಪರ್ವೀನ್ ಸುಲ್ತಾನಾ ಅವರ ಶರಣರ ನಾಡಿನ ಸೂಫಿ ಮಾರ್ಗ * ತಕ್ಕ ಮಟ್ಟಿಗೆ ನೀಗಿಸುವ ಪ್ರಯತ್ನ ಮಾಡಿದೆ-ಎಂಬುದು ಹರ್ಷದಾಯಕವಾದ ಸಂಗತಿ.
ಉರ್ದು ಮತ್ತು ಕನ್ನಡದ ನಡುವೆ ಸೇತುವೆಯಾಗಿ ಪರ್ವೀನ್ ಅವರು ತಮ್ಮ ಜಿಜ್ಞಾಸೆಯನ್ನು ಉತ್ತರೋತ್ತರವಾಗಿ ವರ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಲೆಂದು ಹಾರೈಸುತ್ತೇನೆ.
ಡಾ. ಮೀನಾಕ್ಷಿ ಬಾಳಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.