Your cart is empty now.
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಸಾಂಸ್ಕೃತಿಕ ಸತ್ಯಗಳನ್ನು ಶೋಧಿಸುತ್ತ ಬಂದ ಮಹಾರಾಷ್ಟ್ರ "ಸಂಶೋಧಕ ತಪಸ್ವಿ” ಶ್ರೀ ರಾ.ಚಿಂ. ಢೇರೆಯವರ ಸಾಹಿತ್ಯವನ್ನು, ನಮ್ಮ ನಾಡಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ಅವರ ಶ್ರೀ ವಿಠಲ, ಖಂಡೋಬಾ, ಲಜ್ಜಾಗೌರಿ, ದತ್ತ ಸಂಪ್ರದಾಯ, ನಾಥ ಸಂಪ್ರದಾಯ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಒಂದು ನಿರ್ದಿಷ್ಟ "ಸಾಂಸ್ಕೃತಿಕ ಯೋಜನೆ"ಯ ಅಂಗವಾಗಿ ಈ ಗ್ರಂಥ ರೂಪುಗೊಂಡಿದೆ.
ನಾವು ಬರೆಯುತ್ತ ಬಂದ ರಾಜಕೀಯ ಗಡಿಗೆರೆಗಳನ್ನು ಧಿಕ್ಕರಿಸಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಸಂಚರಿಸುತ್ತಲಿರುವ ಧಾರ್ಮಿಕ ಸಂಪ್ರದಾಯಗಳು ಎರಡೂ ರಾಜ್ಯಗಳ ಸಂಘರ್ಷವನ್ನು ಸ್ನೇಹವನ್ನಾಗಿಸಲು ನೆರವಾಗಬೇಕೆಂಬುದು ಈ ಯೋಜನೆಯ ಹಿಂದಿರುವ ಆಶಯ. ನಮ್ಮ ವಿದ್ವಾಂಸರು ಈ ಗ್ರಂಥ ಗವಾಕ್ಷಿಗಳ ಮೂಲಕ ಆ ಪ್ರದೇಶದ ಹೊಸ ಲೋಕಗಳನ್ನು ಅವಲೋಕಿಸಬೇಕೆಂಬ ಆಶಯವೂ ಇಲ್ಲಿದೆ.
ಧಾರ್ಮಿಕ ಕ್ಷೇತ್ರದಲ್ಲಿ ಅವಧೂತ (ನಾಥ), ಆಚಾರ್ಯ, ಅನುಭಾವಿ- ಹೀಗೆ ಮೂರು ಸಂಪ್ರದಾಯಗಳು ಕಂಡುಬರುತ್ತವೆ. 12ನೇ ಶತಮಾನಕ್ಕೆ ಮೊದಲು ಕರ್ನಾಟಕದ ತುಂಬ ಅಸ್ತಿತ್ವದಲ್ಲಿದ್ದ ಅವಧೂತ, ಆಚಾರ್ಯ ಸಂಪ್ರದಾಯಗಳನ್ನು ಹಿಂದೆ ಸರಿಸಿ ಹುಟ್ಟಿಬಂದುದು ಶರಣರ ಅನುಭಾವ ಸಂಪ್ರದಾಯ. ಹೀಗಾಗಿ ಶರಣ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಆ ಮೊದಲಿನ ಅವಧೂತ ಸಂಪ್ರದಾಯದ ಅಭ್ಯಾಸ ಕನ್ನಡಿಗರಿಗೆ ಅವಶ್ಯವಿದೆ. ಈ ಅವಶ್ಯಕತೆಯನ್ನು ಈಡೇರಿಸುವುದು ಪ್ರಸ್ತುತ ಅನುವಾದದ ಉದ್ದೇಶವಾಗಿದೆ.
- ಎಂ.ಎಂ. ಕಲಬುರ್ಗಿ
(ಬೆನ್ನುಡಿಯಿಂದ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.