ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು ದೈವಿಕತೆ, ಆಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಆಳಿದ ಕತೆ, ಆಳದವರ ಕತೆ, ಕಳೆದು
ಉಳಿದವರ ಕತೆ, ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟಿಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಟನ್, ಜಾರ್ಜ್ ಎವರೆಸ್ಟ್, ಅಂಡೋವಾ, ಥಾಮಸ್ ಚಾರ್ಜ್ ಮಾಂಟೆಮರಿ
ಮತ್ತು ನೈನ್‌ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ
ಶರ್ಮರು ಹೇಳುತ್ತಾರೆ.
ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಅದು.
ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ.
ಸುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು
ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದಂಬರಿ ಅನಾವರಣ ಮಾಡುತ್ತದೆ.
ಈಗಾಗಲೇ ಪುನರ್ವಸು ಮತ್ತು ಚೆನ್ನಭೈರಾದೇವಿ ಕಾದಂಬರಿಗಳ ಮೂಲಕ ಕನ್ನಡದ ಬಹುಮುಖ್ಯ ಕಾದಂಬರಿಕಾರ ಎಂದೆನಿಸಿಕೊಂಡಿರುವ ಗಜಾನನ ಶರ್ಮರು ಈ ಕಾದಂಬರಿಯಲ್ಲಿ ಮತ್ತೊಂದು ಎತ್ತರವನ್ನು ತಲುಪಿದ್ದಾರೆ. ಈ ಕಾದಂಬರಿಯ ಓದು
ನನ್ನನ್ನು ಮಾನವಂತನನ್ನಾಗಿ ಹೃದಯವಂತನನ್ನಾಗಿಯೂ ಮಾಡಿದೆ. ಓದಿದ
ನಿಮಗೂ ಆದೇ ಆಗಲಿದೆ.
-ಜೋಗಿ