Your cart is empty now.
ಈ ಪುಸ್ತಕವನ್ನು ಓದುತ್ತಿರುವ ನೀವು ವಿದ್ಯಾರ್ಥಿಯೋ, ಕೆಲಸ ಮಾಡುತ್ತಿದ್ದೀರೋ, ಬಿಸಿನೆಸ್ ಮಾಡುತ್ತಿದ್ದೀರೋ, ನಿವೃತ್ತರೋ ಗೊತ್ತಿಲ್ಲ. ಆದರೆ ನಾನು ಈ ಪುಸ್ತಕವನ್ನು ಬರೆದಿರುವುದು ಬಿಸಿನೆಸ್ಸಿನಲ್ಲಿ ತೊಡಗಲು-ಗೆಲ್ಲಲು ಹಾತೊರೆಯುತ್ತಿರುವ ಕನ್ನಡಿಗರಿಗೆ. ಬಿಸಿನೆಸ್ ಮಾಡುವ ಇಚ್ಛೆ ಇದ್ದೂ ಯಾವುದೊ ಕಾರಣಕ್ಕೆ ಮುಂದುವರೆಯದೇ ಉಳಿದಿರುವವರು, ಬಿಸಿನೆಸ್ ಮಾಡುತ್ತಿದ್ದರೂ ಅಂದುಕೊಂಡ ಮಟ್ಟದ ಬೆಳವಣಿಗೆ ಕಾಣದೆ ಇರುವವರು; ಕನ್ನಡಿಗರು ಬಿಸಿನೆಸ್ಸಿನಲ್ಲಿ ಹೆಚ್ಚಾಗಿ ತೊಡಗುವುದರ ಪ್ರಾಮುಖ್ಯತೆ ಏನೆಂದು ತಿಳಿಯ ಬಯಸುವವರು; ಅಥವಾ ಬಿಸಿನೆಸ್ ಬಗ್ಗೆ ಕೆಲವು ಋಣಾತ್ಮಕ ಕತೆಗಳನ್ನು ಕೇಳಿ ಪೂರ್ವಗ್ರಹ ಬೆಳೆಸಿಕೊಂಡು ಆ ಗೊಂದಲದಲ್ಲೇ ಸಿಲುಕಿ ಮುನ್ನಡೆಯಲು ಆಗದೇ ಇರುವವರು, ಕನ್ನಡಿಗರ ಬಿಸಿನೆಸ್ ಸುತ್ತ ಚಿಂತನೆಯಲ್ಲಿ ಸ್ಪಷ್ಟತೆ ಮತ್ತು ಹೊಸಮಾರ್ಗಗಳನ್ನು ಕಂಡುಕೊಳ್ಳಲು ಬಯಸುವವರಿಗೆ ಈ ಪುಸ್ತಕ ಹೊಸ ಚಿಂತನೆಗಳನ್ನು ನೀಡಬಲ್ಲದು ಎಂದು ನಂಬಿದ್ದೇನೆ.
- ವಲ್ಲೀಶ್ ಕುಮಾರ್ ಎಸ್
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.