Your cart is empty now.
ಲೇಖಕರು : ಡಾ ಜಯಪ್ರಕಾಶ್ ಶೆಟ್ಟಿ ಎಚ್
ಜಯಪ್ರಕಾಶ್ ಅವರ ಪಂಪನೋದು ಎನ್ನುವ ಈ ಕೃತಿ ಕನ್ನಡಕ್ಕೆ ಅಪರೂಪದ ಕೊಡುಗೆ. ಇಪ್ಪತ್ತನೇ ಶತಮಾನದ ಮತ್ತು ಮುಂದಿನ ಶತಮಾನಗಳ ಯಾವ ಯಾವ ಅರಿವ, ಅಭೀಪ್ಸೆ ಮತ್ತು ಸಂಕಟಗಳನ್ನು ಪಂಪನ ಕಾವ್ಯಗಳು ಹೊತ್ತು ತಿರುಗುತ್ತಿವೆಯೋ ಎಂಬಂತೆ ಈ ಕೃತಿಯಲ್ಲಿ ಪಂಪನ ಓದು ತನ್ನ ವೈವಿಧ್ಯತೆಯಲ್ಲಿ ಮೈತಳೆದಿದೆ. ಈ ಅರ್ಥದಲ್ಲಿ ಪಂಪನ ಕಾವ್ಯ ಕಾಲಜ್ಞಾನ ಆಧುನಿಕ ಕನ್ನಡದ ಚಿಂತನೆಯಲ್ಲಿ ಒಂದು ಕೃಷಿಯನ್ನು ಹೀಗೆ ಸಂಪೂರ್ಣವಾಗಿ ಓದಿನ ಕಡೆಯಿಂದ ನೋಡಿ, ಓದಿನ ವೈವಿಧ್ಯತೆಯ ಸ್ವರೂಪವನ್ನು, ಮಿತಿಯನ್ನು, ಗುಣಾತ್ಮಕತೆಯನ್ನು
ಹೀಗೆ ಹಲವು ದೃಷ್ಟಿಗಳಿಂದ ಗಮನಿಸಿದ ಇನ್ನೊಂದು ಕೃತಿಯನ್ನು ನಾನು ಗಮನಿಸಿಲ್ಲ. ಪಶ್ಚಿಮದ ಚಿಂತನೆಯ ಮಾದರಿಗಳು ಪಂಪನ ಓದಿನಲ್ಲಿ ಪ್ರಧಾನವಾಗಿ ಪ್ರಭಾವಿಸಿದ ಬಗೆಯಿಂದ ಪಂಪ ನಮ್ಮ ಕೈಗೆ ದಕ್ಕದೇ ಹೋಗಿದ್ದಾನೆ ಎಂದು ಚಿಂತಿಸುವ ಹಾಗೆ ಈ ಕೃತಿ ಮಾಡುತ್ತದೆ. ಹಾಗಾದರೆ ಸುವರ್ಣ ಮಾಧ್ಯಮ ಯಾವುದು? ಈ ಕೃತಿಯ ವಸ್ತು, ಭಾಷೆಯ ಮೂಲಕ ರೂಪುಗೊಂಡ ಆಕೃತಿಯನ್ನು ವಿಭಿನ್ನ ವಿಧಾನದಲ್ಲಿ ಪರಿಶೀಲಿಸುವುದೇ? ಈ ಪ್ರಶ್ನೆಯು ಈ ಕೃತಿಯ ಒಳಗೆ ಇದೆ ಅಥವಾ ನಮ್ಮ ಕಾಲದ ಅರಕೆಗಳನ್ನು ಪೂರೈಸುವ ಭಾಗವಾಗಿಯೇ ಓದು ಪ್ರಧಾನವಾಗಿ ಮುಂದುವರಿಯುವುದೇ..? ಈ ಸಂದೇಹವೂ ಈ ಪುಸ್ತಕದ ಒಡಲಲ್ಲಿ ಉಳಿದಿದೆ. ಹೀಗಾಗಿ ಕನ್ನಡಕ್ಕೆ ಇನ್ನೊಂದು ವಿಶಿಷ್ಟವಾದ ಕೃತಿಯಾಗಿ ರೂಪ ತಳೆದಿದೆ.
- ಬಸವರಾಜ ಕಲ್ಕುಡಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.