ಮನಸ್ಸು ಭಾರವಾದಾಗ, ರಸ್ತೆ ಬದಿಯ ಫುಟ್‌ಪಾತ್ ಮೇಲೆ ಒಬ್ಬರೇ ನಡೆಯುವಾಗ, ಯೋಚನೆಗಳು ಕಾಡುವಾಗ, ಮಾತು ಹೊರಬರಲು ಒದ್ದಾಡುವಾಗ, ರಾತ್ರಿ ನಿದ್ರೆ ಬರದೇ ಇದ್ದಾಗ, ಯಾವುದಾದರೊಂದು ಸಮಾಧಾನದ ಆಸರೆ ನೆರವಾದರೆ ಅಷ್ಟೇ ಸಾಕು. ಸಮಸ್ಯೆಗಳನ್ನು ಪರಿಹರಿಸಲು ಅಲ್ಲ, ಕಷ್ಟಗಳನ್ನು ದೂರ ಮಾಡಲು ಅಲ್ಲ, ಆದ ಗಾಯಕ್ಕೆ ಔಷಧ ಹಚ್ಚಲೂ ಅಲ್ಲ! ನಮ್ಮೊಳಗೇ ಇರುವ ಉತ್ತರವನ್ನು ನಮ್ಮ ಮುಂದಿಡಲು, ನಮ್ಮೊಳಗೇ ಇರುವ ಸಾಮರ್ಥ್ಯದ ಅರಿವು ಮೂಡಿಸಲು, ಹೆಗಲ ಮೇಲೆ ಕೈಯಿಟ್ಟು ಪ್ರೀತಿಯ ಮಾತನಾಡಲು, ಜತೆಗೆ ಕುಳಿತು ಒಂದು ಗುಟುಕು ಕಾಫಿ ಕುಡಿಯುತ್ತ ನಮ್ಮ ಕಥೆ ಕೇಳಲು, ನೆಮ್ಮದಿ ಎಷ್ಟು ಮುಖ್ಯ ಎಂದು ಹೇಳಲು ಯಾರಾದರೂ ಇರಲಿ ಎಂದೆನಿಸುತ್ತದೆ. ಅಂತಹ ಸಂದರ್ಭದಲ್ಲೂ ಯಾರೂ ಸಿಗದಿದ್ದಾಗ, ಒಂಟಿ ಎಂದೆನಿಸಿದಾಗ, ಕರೆ ಮಾಡಿದ ಸ್ನೇಹಿತರ ಸಂಖ್ಯೆ ನಾಟ್ ರೀಚೆಬಲ್ ಆದಾಗ ಈ ನೆಮ್ಮದಿ ನಿಮ್ಮದೇ ಎನ್ನುವುದನ್ನು ಮರೆಯಬೇಡಿ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.