Your cart is empty now.
ಮೆರವಣಿಗೆ ನಮ್ಮ ದೇಶದಲ್ಲಿ ಧಾರ್ಮಿಕ ಮೆರವಣಿಗೆಗಳು ಹಲವು ಬಗೆಯ ಕಲಹಗಳಿಗೆ ಏಕೆ ಕಾರಣವಾಗುತ್ತವೆ? ಏಕೆ ಹಿಂಸೆಗೆ ಕಾರಣವಾಗುತ್ತವೆ? ಈ ಮೆರವಣಿಗೆಯಲ್ಲಿ ಏನು ಹೊಕ್ಕುತ್ತದೆ?... ಆವು ಸಂತೋಷದಾಯಕ ವಾಗುವ ಬದಲು ಭೀತಿಯ ನೆರಳಲ್ಲಿ ಏಕೆ ಮುನ್ನಡೆಯುತ್ತವೆ? ಮೆರವಣಿಗೆಗಳ ಶ.ದ್ದೆಯ ಸ್ವರೂಪ ಹೇಗಿರುತ್ತದೆ. ಯಾರು ಅದನ್ನು ತೀಕ್ಷ್ಯ- ಹರಿತಗೊಳಿಸುತ್ತಾರೆ?... ಮೊದಲಿಗೆ ತಟಸ್ಥವಾಗಿ ಗ್ರಹಿಸುವ, 'ಎಚ್ಚರ, ಮುಂದಿನ ಕೂಗು ಕೇಳಿ' ಎಂಬ ಸಂದೇಶವನ್ನು ನೀಡುತ್ತ ಜಾಗ್ರತೆಯ ಮುನ್ನೆಚ್ಚರಿಕೆ ನಿಲುವು ತಾಳುವ ಕಾದಂಬರಿಯಿದು... ಮರಾಠಿ ಸಾಹಿತ್ಯದಲ್ಲಿ ಮೊಟ್ಟ ಮೊದಲಿಗೆ ಇಂಥ ವಿಷಯ ಅವತರಿಸುತ್ತದೆ. + + + ಲೇಖಕರಾದ ಉತ್ತಮ ಕಾಂಬಳೆಯವರು ಮರಾಠಿ ಪತ್ರಿಕೆ 'ಸಕಾಳ' ಸಮೂಹದ ಮುಖ್ಯ ಸಂಪಾದಕರು. ಕವಿತೆ, ಕಥೆ, ಕಾದಂಬರಿ, ವೈಚಾರಿಕತೆ - ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಅತೀ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಜೀವನ ಸಾಧನೆಗೆ ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ. 31 ಮೇ. 1956ರಲ್ಲಿ ರೈತಾಪಿ ಕುಟುಂಬದಲ್ಲಿ ಜನ್ಮ, 84ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಹಲವು ಕೃತಿಗಳು ಕನ್ನಡ ಹಾಗೂ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡಿವೆ. + + + ಕೃತಿಯ ಅನುವಾದಕರು ಚಂದ್ರಕಾಂತ ಪೋಕಳೆ, ಧಾರವಾಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸೇವೆ. ಅನುವಾದಕರಾಗಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.