Your cart is empty now.
ಶ್ರೀಧರ ಬಳಗಾರರ ಈ ಸಂಕಲನ ಕನ್ನಡದ ಇತ್ತೀಚಿನ ಮಹತ್ವದ ಕಥಾ
ಸಂಕಲನ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಿರ್ಮುಖಿಯಾಗಿ ತುಸು ಬಳಲಿದಂತೆ
ಕಾಣುತ್ತಿರುವ ಕಥಾಲೋಕಕ್ಕೆ ಈ ಅಂತರಂಗ ಮುಖಿ ಕತೆಗಳು ಹೊಸ ಚೈತನ್ಯವನ್ನು
ಕೊಡುತ್ತವೆ ಎಂದು ನಾನು ನಂಬಿದ್ದೇನೆ. ಬಲು ಸೂಕ್ಷ್ಮವಾದ, ಚಿತ್ರವತ್ತಾದ
ವಿವರಗಳು, ಅಷ್ಟೇ ಜೀವಂತವಾದ ಕಾವ್ಯದಂತಹ ಭಾಷೆ, ಅನಗತ್ಯವಾದುದನ್ನು
ಹೇಳಬಾರದೆನ್ನುವ ಎಚ್ಚರ, ಲಂಬಿಸಬಹುದಾದ ಅವಕಾಶಗಳಿದ್ದಾಗಲೂ ಅದನ್ನು
ಅಲ್ಲೇ ನಿಲ್ಲಿಸುವ ಸಂಯಮ ಈ ಎಲ್ಲವೂ ಬಳಗಾರರನ್ನು ನಮ್ಮ ಕಾಲದ ಅತ್ಯುತ್ತಮ
ಮತ್ತು ಮಹತ್ವದ ಕತೆಗಾರರನ್ನಾಗಿಸಿವೆ. ಬಳಗಾರರಿಗೆ ಅಭಿನಂದನೆಗಳು.
-ಎಂ. ಎಸ್. ಆಶಾದೇವಿ
(ಮುನ್ನುಡಿಯಿಂದ)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.