Your cart is empty now.
ಇಂಡಿಯಾದಂಥ ದೇಶದಲ್ಲಿ ಇಡಿಯಾಗಿ ಜಾತಿಗಳೆಲ್ಲ ಒಂದೊಂದು ವರ್ಗವಾಗಿ ಪರಿಗಣಿತವಾಗಿರುವಾಗ ಅತ್ಯಂತ ಮೇಲು ಸ್ಥಾನದಲ್ಲಿರುವ ಪುರೋಹಿತವರ್ಗ ಎಲ್ಲ ಉಳಿದ ವರ್ಗದವರನ್ನು ತನ್ನ ಹತೋಟಿಯಲ್ಲಿಯೇ ಇಟ್ಟುಕೊಳ್ಳುತ್ತ ಬಂದಿದೆ. ಅವರ ನಂತರದ ಕ್ಷತ್ರಿಯ, ವೈಶ್ಯ, ಶೂದ್ರಲ್ಲಿ ಮೇಲುವರ್ಗವಾದ ಲಿಂಗಾಯತ, ಒಕ್ಕಲಿಗ, ರೆಡ್ಡಿ ಇತ್ಯಾದಿ ಜಾತಿಗಳು ಸಾಮಾಜಿಕ ವಿಧಾನಗಳಲ್ಲಿ ಇನ್ನೂ ಬ್ರಾಹ್ಮಣರ ಹತೋಟಿಯಲ್ಲಿದ್ದು ಒಂದು ರೀತಿಯ ಮಾನಸಿಕ ಹಿಂಸೆಗೆ ಒಳಗಾಗಿರುವರು ಎಂದು ಅನಿಸಿದರೂ, ಇವರೆಲ್ಲ ಆರ್ಥಿಕವಾಗಿ ಭದ್ರವಾಗಿರುವವರು ಎಂಬುದನ್ನು ಸ್ಕೂಲವಾಗಿ ಒಪ್ಪಿಕೊಳ್ಳಲೇಬೇಕು. ಹಾಗಿರುವುದರಿಂದಲೇ ಇತಿಹಾಸದುದ್ದಕ್ಕೂ ಬುದ್ಧಿಯನ್ನೆ ನೆಚ್ಚಿಕೊಂಡುಬಂದಿರುವ ಪುರೋಹಿತವರ್ಗ, ಬದುಕಿನ ಪ್ರಶ್ನೆ ಬಂದಾಗ ಮೇಲೆ ಹೇಳಿದ ಜಾತಿಗಳ ಜೊತೆ ಒಂದಲ್ಲ ಒಂದು ರೀತಿಯ ಒಪ್ಪಂದಕ್ಕೆ ಬಂದಿದ್ದಾರೆ.
ದೇವಯ್ಯ ಹರವೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.