Your cart is empty now.
ಹೂ ಆಯುವ ಪುಟ್ಟ ದೇವತೆ ಮತ್ತೆ ಅಲ್ಲಿಯೇ ಇದ್ದಳು. ಕಾಲು ಚಾಚಿ ಕುಳಿತುಕೊಂಡು ಲಂಗದ ಬಟ್ಟೆಯಲ್ಲಿ ತುಂಬಿಕೊಂಡ ಹೂವುಗಳನ್ನು ನಿಧಾನವಾಗಿ ಮಗುಚುತ್ತಿದ್ದಳು. ಕಾಲಿನ ಸಪ್ಪಳ ಮಾಡಿದೆ. ನಿಧಾನವಾಗಿ ತಲೆಯೆತ್ತಿದಳು. ಅವಳ ಕಣ್ಣಿನಿಂದ ಹೂಗಳು ಉದುರಲಾರಂಭಿಸಿದವು. ಅವಳು ಅದನ್ನು ಅಂಗದಲ್ಲಿ ತುಂಬುತ್ತ ನೆಲದ ಮೇಲೆಲ್ಲ ಹರಡುತ್ತ 'ಹೂ ಕಟ್ಟಬೇಕು ದಾರ ಇದೆಯಾ?' ಎಂದಳು. 'ಅಯ್ಯೋ' ದಾರ ಇಲ್ಲವಲ್ಲ. ಮಾಸ್ಕ್ ಇದೆ. ಬೇಕುಂದ್ರೆ ಅದರ ದಾರ ಹರಿದುಕೊಡುತ್ತೇನೆ' ಎಂದೆ. 'ನೂ ಅದು ಬೇಡ' ಎಂದು ಮುಖ ಸಿಂಡರಿಸಿದಳು. 'ಮತ್ತೇನು ಬೇಕು?' ಎಂದೆ. ನಿನ್ನ ಮೈಯ ಸರ ಕೊಡು, ನಿನ್ನ ಕರುಳು ಕೊಡು. ಹೂ ಪೋಣಿಸಲು ' ಎಂದಳು. ಅಷ್ಟೆ ತಾನೆ ನಾನು ರೆಡಿ' ಎಂದೆ. 'ಹೌದಾ ಕೊಡು ಹಾಗಾದರೆ' ಎನ್ನುತ್ತ ಕೈ ಚಾಚಿದಳು. ಕೊಡುವ ಉತ್ಸಾಹವನ್ನೇನೋ ತೋರಿದ್ದೆ. ಆದರೆ ನರ ಕೊಡುವುದು ಹೇಗೆ ಕರುಳು ಕೀಳುವುದು ಹೇಗೆ ಎಂದು ಗೊಂದಲವಾಯಿತು. ನಾನು
ಗೊಂದಲದಲ್ಲಿದ್ದಾಗಲೇ ಅವಳಿದ್ದ ಜಾಗದಲ್ಲಿ ಏನೋ ಸದ್ದಾಯಿತು. ನೋಡ ನೋಡುತ್ತಿದ್ದಂತೆಯೇ ಅಲ್ಲಿದ್ದ ಹೂಗಳೆಲ್ಲ ಕಣ್ಮರೆಯಾಗಿ ಅವಳು ಮಾತ್ರ ಉಳಿದಳು. ಮರುಕ್ಷಣವೇ ಹೂವಿನ ಗುಪ್ಪೆಯಿದ್ದ ಜಾಗದಲ್ಲಿ ಅವಳೇ ಒಂದು ಹೂವಾಗಿ ಮೂಡಿ ಗಾಳಿಯಲ್ಲಿ ತೇಲುತ್ತ ತೇಲುತ್ತ ಸಾಗಿ ರಸ್ತೆಯಂಚಿಗೆ ತಲುಪಿ ತಿರುವಿಗೆ ಹೊರಳಿ ತಟಕ್ಕನೆ ಕಣ್ಮರೆಯಾದಳು.
- 'ಪುಟ್ಟ ದೇವತೆಯ ಪಾರಿವಾಳ ಕತೆಯ ಆಯ್ದಭಾಗ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.