Your cart is empty now.
ಬಿಡಿ ಬಂಡವಾಳಗಳ ಸಂಚಾರಪಥಗಳು, ಒಂದಕ್ಕೊಂದು ಹೆಣೆದುಕೊಳ್ಳುತ್ತವೆ. ಇದೆಯೆಂದರೆ ಮತ್ತೊಂದು ಒಂದು ಇದೆಯೆಂದೇ ಅರ್ಥ. ಒಂದರ ಅವಶ್ಯಕತೆಗೆ ಮತ್ತೊಂದು ಕಾರಣವಾಗುತ್ತದೆ. ಹೀಗೆ ಹೆಣೆದುಕೊಳ್ಳುವುದರಲ್ಲೇ ಒಟ್ಟು ಸಾಮಾಜಿಕ ಬಂಡವಾಳದ ಚಲನೆಯು ರೂಪವನ್ನು ಪಡೆಯುತ್ತದೆ. ಸರಕುಗಳ ಸಾಮಾನ್ಯ ಚಲಾವಣೆಯ ವಿಷಯದಲ್ಲಿ ಒಂದು ಸರಕಿನ ಒಟ್ಟು ರೂಪಾಂತರೀಕರಣವು, ಒಟ್ಟು ಸರಕುಗಳ ರೂಪಾಂತರೀಕರಣಗಳ ಸರಣಿಯಲ್ಲಿ ಒಂದು ಕೊಂಡಿಯಾಗಿ ಕಾಣಿಸಿದಂತೆಯೇ, ಬಂಡವಾಳದ ರೂಪಾಂತರೀಕರಣವೂ ಸಹ ಸಾಮಾಜಿಕ ಬಂಡವಾಳದ ರೂಪಾಂತರೀಕರಣದ ಸರಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ಕೊಂಡಿಯಾಗಿ ..໖໖ ಬಂಡವಾಳಗಳ ಚಲಾವಣಾ ಪ್ರಕ್ರಿಯೆಯನ್ನು (ಒಟ್ಟಾರೆಯಾಗಿ ಇದೊಂದು ಪುನರುತ್ಪಾದನಾ ಪ್ರಕ್ರಿಯೆಯ ರೂಪವೇ ಆಗಿದೆ) ಒಟ್ಟು ಸಾಮಾಜಿಕ ಬಂಡವಾಳದ ಭಾಗಾಂಶಗಳಾಗಿ ಅಧ್ಯಯನ ಮಾಡಬೇಕು. ಅಂದರೆ ಈ ಒಟ್ಟು ಸಾಮಾಜಿಕ ಬಂಡವಾಳದ ಚಲಾವಣಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಬೇಕು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.