Your cart is empty now.
ಹದಿನಾರು ವರ್ಷಗಳ ಫಸಲು ಇಲ್ಲಿರುವ ಒಂಬತ್ತು ಕಥೆಗಳು. ಈ ಕಥೆಗಳು ಒಮ್ಮೆ ಪಾತ್ರಗಳಾಗುತ್ತ ಪಾತ್ರಗಳು ಒಮ್ಮೆ ಕಥೆಗಳಾಗುತ್ತ ಕಥೆಗಳು ಪಾತ್ರಗಳನ್ನು ಮೀರುತ್ತ ಪಾತ್ರಗಳು ಕಥೆಗಳನ್ನು ಮೀರುತ್ತ ಸಾಗುವುವು.
ಸಾಗುವ ದಾರಿಯಲ್ಲೆದುರಾಗುವ ಸಮಯ, ಸಂದರ್ಭ, ಸನ್ನಿವೇಶಗಳಲ್ಲಿ ತುಮಕೂರು ಸೀಮೆ ಮಾದಿಗರ ಕೇರಿಯ ನುಡಿ ಬಾಡಿನೆಸರಿನ ಗಮಲ ಎಲ್ಲೆಡೆ ಹರಡುವುದು.
ಕಥನದೊಳಗೆ ಹಾಸ್ಯ ಕಾರುಣ್ಯಗಳು ಹಾಸುಹೊಕ್ಕಾಗಿ ಮಾಸ್ತಿಯವರ ಗೊರೂರರ ಹಾದಿ ಹಿಡಿದು ಹೊರಟಂತೆ ಕಂಡರೂ ರವಿಕುಮಾರ್ ತಲುಪುವ ತಾಣ ಮಾತ್ರ ದೇವನೂರು.
ನಡುವೆ ಅನಂತಮೂರ್ತಿ, ಆಲನಹಳ್ಳಿಯವರಂತಹ ನವ್ಯರ ಸೆಳೆತಕ್ಕೆ ನಲುಗದೆ ಛಾಪು ಮೂಡಿಸಿರುವುದೊಂದಗ್ಗಳಿಕೆಯು. 'ಕಿರುಬುನ್ನಲ್' ಕಥೆ ಅದಾಗಲೇ ಕಥಾಸ್ಪರ್ಧೆಯೊಂದರ ಪ್ರಥಮ ಬಹುಮಾನ ಪಡೆದು ಇಂಗ್ಲಿಶ್ ಮತ್ತಿತರ ನುಡಿಗಳಿಗೆ ದಾಟಿರುವುದು.
'ಅವು ಅಂಗೇ...!' ಇದನ್ನು ಮೀರಿಸಿದರೆ ಅಚ್ಚರಿಯೆನಿಸದು. ಜಮೀನ್ದಾರಿಕೆಯ ಗಂಡಾಳಿಕೆಯ ಲೋಕದ ಜಾತಿ ಲಿಂಗ ತಾರತಮ್ಯಗಳ ನಡುವೆಯೇ ಕಂಡರೂ ಕಾಣದಂತೆ ಹೋಗುವ ಕಡೆಗಣಿಸಲ್ಪಟ್ಟ ಜನರಿಲ್ಲಿ ಎದ್ದು ಕಾಣುವುದು ಮತ್ತೊಂದಗ್ಗಳಿಕೆ.
ಕುತೂಹಲವೊಂದೇ: ಬಂಡವಾಳಶಾಹಿ/ ನವಉದಾರವಾದಿ ಹೊತ್ತಿನ ಮಾದಿಗರ ಬದುಕಿನ ವಾಸ್ತವವನ್ನು ನೀಹ ಹೇಗೆ ಕಥೆಯಾಗಿಸಬಹುದು?
- ಶಶಿಕುಮಾರ್ ( ಅಲ್ಬರ್ಟ್ ವಿಶ್ವವಿದ್ಯಾಲಯ, ಕೆನಡಾ )
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.