Your cart is empty now.
ನೀವು ಬೇರುಬಿಟ್ಟ ನೆಲ, ಬದುಕುತ್ತಿರುವ ಬದುಕು ಯಾವುದೂ ನಿಮ್ಮದಲ್ಲ' ಎನ್ನುತ್ತಿರುವ ಬಹುಸಂಖ್ಯಾತರ ದನಿಗಳು ತೀವ್ರವಾಗುತ್ತಿರುವ ಹೊತ್ತಿನಲ್ಲಿ ಈ ನೆಲ-ಜನ-ಮನದೊಂದಿಗೆ ಬೆರೆತು ಅಸ್ತಿತ್ವ ರೂಪಿಸಿಕೊಂಡ ಕವಿಗೆ `ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು' ಎಂದು ಬೇಡುವುದಲ್ಲದೇ ಬೇರೆ ಮಾರ್ಗವಿದೆಯೇ?
'ಇಲ್ಲಿ ತುರುಸಿನ ಸ್ಪರ್ಧೆಯಿರುವುದು/ ಬಡ ಅಮ್ಮಂದಿರ ಮಡಿಲು/ ಬರಿದು ಗೊಳಿಸುವುದರಲ್ಲಿ ಮಾತ್ರ' ಎಂದು ಅರ್ಥ ಮಾಡಿಕೊಂಡ ನಂತರ ಈ ಕವಿಗೆ ನವಿರು ರೇಷಿಮೆ ಭಾವಗಳನ್ನು ತನ್ನ ಕವಿತೆಯ ಸಾಲುಗಳಲ್ಲಿ ತರಲು ಶತ ಪ್ರಯತ್ನ ಮಾಡಿದರೂ ಸಾಧ್ಯವೇ?
ಮನುಷ್ಯತ್ವದ ಬೇರುಗಳು ಅಲುಗಾಡುತ್ತಿರುವ ಸಮಾಜದಲ್ಲಿ ನೋಯುವವರು-ಬೇಯುವವರು, ಅವಮಾನ, ಸಂಕಷ್ಟ ಎದುರಿಸುವವರು ಇಲ್ಲಿನ ಸೂಕ್ಷ್ಮ ಸಂವೇದನೆಯ ಜೀವಗಳು. ಫಾತಿಮಾ ಕವಿತೆಗಳನ್ನು ಕಟ್ಟರುವುದು ಈ ಸಂವೇದನೆಯಿಂದಲೇ. ಆದ್ದರಿಂದಲೇ ಇಲ್ಲನ ನವಿರು ರೇಷಿಮೆ ಭಾವ ಆಳಕ್ತಿಆಯುತ್ತಾ ಇರಿಯ ತೊಡಗುತ್ತವೆ. ಈ ಇರಿತ ಎಷ್ಟು ತೀವ್ರವಾಗಿದೆ ಎಂದರೆ ಮತ್ತೆ ಮತ್ತೆ ಈ ರೀತಿಯ ಇರಿತಕ್ಕೊಳಗಾದ ಕವಿ ಮನುಷ್ಯತ್ವದ ಇಬ್ಬನಿಯನ್ನು ಎಲ್ಲರ ಮನದಲ್ಲೂ ಅರಆಸಲು ತನ್ನ ಸಾಲುಗಳನ್ನೇ ಹತಾರವಾಗಿ ಮಾಡಿಕೊಳ್ಳುವಷ್ಟು..
'ಚಂಡಿ ಚಾಮುಂಡಿ ಭದ್ರಕಾಆ/ ಫಾತಿಮಾ ಖತೀಜಾ ಆಷಾ/ಬೆತ್ತಹೆಮ್ಮಿನ ಮೇರಿ/ಅಷ್ಟೇಕ ನನ್ನೂರಿನ ಅಬ್ಬಕ್ಕ ಪಕ್ಕದ ಚೆನ್ನಮ್ಮ/ ದೂರದ ರಝಿಯಾ, ಲಕ್ಷ್ಮಿಯರು/ ಬೆನ್ನ ಹಿಂದಿಂದ/ ತಿವಿಯುತ್ತಿರುವಂತ ದಟ್ಟ ಅನುಭವ' ಇವರೆಲ್ಲರನ್ನು ಬೆನ್ನಿಗಿಟ್ಟುಕೊಂಡು ಆ ಬಲದ ಮೇಲೆ ತನ್ನ ಸೃಜನಾತ್ಮಕವಾದ ಹೋರಾಟ ಕಟ್ಟುತ್ತಿರುವ ಫಾತಿಮಾಳ ಆಗ್ರಹ “ಅವಳ ಕಾಲು ಸೋಲದಿರಲಿ ಎಂದೆಂದಿಗೂ...
ಅಕ್ಷತಾ ಹುಂಚದಕಟ್ಟೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.