Your cart is empty now.
ಸಾಸಿವೆ ತಂದವಳು' ಎನ್ನುವ ಶೀರ್ಷಿಕೆಯೇ ನಮ್ಮನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಏಕೆಂದರೆ, ಸಾವಿಲ್ಲದ ಮನೆಯಿಲ್ಲ ಎಂಬುದನ್ನು ತಿಳಿದು ಸಾಸಿವೆ ತರಲಾರದೆ ಹೋದವಳು ಕಥೆ ಇಲ್ಲಿ ಇನ್ನೊಂದು ಅರ್ಥವನ್ನೇ ಪಡೆಯುವಂತೆ ಬಳಕೆಯಾಗಿದೆ. ಏಕಕಾಲದಲ್ಲಿ ಅಂತರಂಗದ ಅನಿಸಿಕೆಯ ಸತ್ಯಗಳನ್ನೂ, ಬಹಿರಂಗದಲ್ಲಿ ಓದುಗನಿಗಾಗಿ ಕೊಡಬೇಕಾದ ವಿವರಗಳನ್ನೂ ಒಟ್ಟಾಗಿ ಹಿಡಿದಿಡುವ ಗದ್ಯ ಇಲ್ಲಿ ಅಪೂರ್ವವಾದದ್ದು. ಈ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ಗದ್ಯ ಕೃತಿಗಳಲ್ಲಿ ಇದೂ ಒಂದು.
ತನ್ನ ಅಂತರಂಗದ ಅಸಹನೀಯವಾದ ಯಾತನೆಯ ಕತೆಯನ್ನೂ, ಜೊತೆಗೆ ಅದನ್ನು ಗೆದ್ದು ನಿಲ್ಲುವ ಜೀವನೋತ್ಸಾಹದ ದಿವ್ಯ ಕ್ಷಣಗಳನ್ನೂ ಒಟ್ಟಾಗಿ ಸೆರೆ ಹಿಡಿದಿರುವ ಈ ಬರವಣಿಗೆ ವಾಸ್ತವಿಕವೂ ಹೌದು, ಒಂದು ಕಥೆಯಂತೆ ಅಥವಾ ಕವಿತೆಯಂತೆ ಅಪಾರವಾದ ಕಾಲ್ಪನಿಕ ಶಕ್ತಿಯನ್ನು ಪಡೆದ ಸಾಹಿತ್ಯ ಕೃತಿಯೂ ಹೌದು.
ಈ ಕ್ಯಾನ್ಸರಿನಂತಹ ಒಂದು ಖಾಯಿಲೆಯನ್ನು ಗೆಲ್ಲುವ ಪ್ರಯತ್ನದಲ್ಲಿ ಗೆಲುವು-ಸೋಲು ಎರಡೂ ಒಟ್ಟೋಟ್ಟಿಗೇ ಎದುರಾಗುವ ಭರವಸೆಯೂ ಇದೆ, ಸಂಕಟವೂ ಇದೆ. ಇದನ್ನು ಬರೆಯುವಾಗ ಬರಹಗಾರ್ತಿಗೆ ಜೀವನದ ಪ್ರೀತಿ ಇರಬೇಕು. ಆದರೆ ಅದು ಆತ್ಮರತಿಯಾಗಕೂಡದು ಅಥವಾ ಆತ್ಮ ಮರುಕದ ಉತ್ಕಟತೆಯಲ್ಲಿ ಸಾಯಬೇಕೆಂಬ ಅಪೇಕ್ಷೆ ಯೂ ಆಗಕೂಡದು. ಭಾರತಿ ಇದನ್ನು ಅಪೂರ್ವವೆಂಬಂತೆ ಸಾಧಿಸಿದ್ದಾಳೆ.
ಈ ಕೃತಿ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕಾದಷ್ಟು ಮುಖ್ಯವೆಂದು ನನಗೆ ಅನ್ನಿಸಿದೆ. ಕ್ಯಾನ್ಸರ್ ರೋಗದಿಂದ ಬಳಲುವ ಯಾರಿಗಾದರೂ ಇದೊಂದು ನೈತಿಕ ಶಕ್ತಿಯನ್ನು, ಜೊತೆಗೆ ಹೇಗೆ ಔಷಧೋಪಚಾರಗಳನ್ನು ಪಡೆಯಬೇಕೆಂದು ಒಟ್ಟಾಗಿ ಕಲಿಸುವ ಪಾಠವಾಗಿದೆ
-ಯು ಆರ್ ಅನಂತಮೂರ್ತಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.