Your cart is empty now.
2017 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ
ಕನ್ನಂಬಾಡಿ ಕಟ್ಟೆ ಕಟ್ಟುವ ಮೊದಲು ಕಾವೇರಿಗೆ ಎಷ್ಟು ಅಣೆಕಟ್ಟೆ ಕಟ್ಟಲಾಗಿತ್ತು? ಕಟ್ಟಿದವರು ಯಾರಾರು? ಯಾವಾಗ? ಕಾವೇರಿ ಡಿಸ್ಕೂಟ್ ಅಂದರೆ ಏನು..? ಜಲಾಶಯಗಳ ನೀರಿನ ಪ್ರಮಾಣವೆಷ್ಟು..? ನೀರಿನ ಹಂಚಿಕೆಯ ಪ್ರಮಾಣ ಕಾಲದಿಂದ ಕಾಲಕ್ಕೆ ಹೇಗೆ ಬದಲಾಗುತ್ತಾ ಹೋಯಿತು..? ಕನ್ನಂಬಾಡಿಯ ಹಿಂದಿನ ಇತಿಹಾಸವೇನು.? ತನ್ನ ಕುಟುಂಬದ ವಡವೆ ಮಾರಿ ಕನ್ನಂಬಾಡಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಯಾಕೆ ಪ್ರಸಿದ್ಧಿ ಪಡೆಯಲಿಲ್ಲ..? ಕನ್ನಂಬಾಡಿ ಕಟ್ಟುವ ಸಂದರ್ಭದಲ್ಲಿ ಕೇವಲ ಒಂದು ವರ್ಷ ಚೀಫ್ ಇಂಜಿನಿಯರ್ ಆಗಿ ಬಂದ ವಿಶ್ವೇಶ್ವರಯ್ಯನವರು ಹೇಗೆ ಖ್ಯಾತಿ ಪಡೆದರು? ನಿಜಕ್ಕೂ ಕನ್ನಂಬಾಡಿ ಕಟ್ಟೆಯ ಮೂಲನಕ್ಷೆ ಯಾರದು..? ಯಾಕೆ ಅವರ ಹೆಸರು ದಾಖಲಾಗಲಿಲ್ಲ? ಕನ್ನಂಬಾಡಿ ಕಟ್ಟಲು ವಿಶ್ವೇಶ್ವರಯ್ಯ ಅವರಂತೆ ಇನ್ನೆಷ್ಟು ಜನ ಚೀಫ್ ಇಂಜಿನೀಯರ್ಗಳು ಕೆಲಸಮಾಡಿದ್ದರು..? ಅವರೆಲ್ಲರ ಹೆಸರುಗಳು ಯಾಕೆ ಪ್ರಸಿದ್ದಿಗೆ ಬರಲಿಲ್ಲ..? ಇದರ ಹಿಂದಿನ ರಾಜಕಾರಣವೇನು..? ಇಂದಿನ ಪ್ರಸ್ತುತ ಕಾವೇರಿ ಸಮಸ್ಯೆ ಏನು..? ಕರ್ನಾಟಕಕ್ಕೆ ಆದ ಸತತ ಅನ್ಯಾಯವೇನು..? ಎಂಬುದಕ್ಕೆ ಉತ್ತರಗಳನ್ನು ಪುರಾವೆಗಳ ಸಮೇತ ಎಳೆಎಳೆಯಾಗಿ ಅರಸು ಅವರು ತೆರೆದಿಟ್ಟಿದ್ದಾರೆ. ಎಲ್ಲವನ್ನೂ ಸರಳ ಸುಂದರ ಶೈಲಿಯಲ್ಲಿ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡೇ ನಿರೂಪಿಸಿದ್ದಾರೆ.
ಕನ್ನಂಬಾಡಿ ಕಟ್ಟೆಯೇ ತನ್ನ ಬಗ್ಗೆ ವಿನಾಕಾರಣ ಹರಡುತ್ತಾ ಬಂದಿರುವ ಸುಳ್ಳುಗಳನ್ನು ಸ್ಫೋಟಿಸುತ್ತಾ ತನ್ನ ಆತ್ಮಕಥೆಯನ್ನು ಹೇಳುತ್ತಾ ಹೋಗುವ ಶೈಲಿ ಮನಮುಟ್ಟುವಂತಿದೆ. ಒಂದು ಐತಿಹಾಸಿಕ ಗಂಭೀರ ದಾಖಲೆ ಜನಪ್ರಿಯ ಕಾದಂಬರಿ ಓದುವಂತೆ ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತದೆ.
-ಸಿ.ಎಸ್. ದ್ವಾರಕಾನಾಥ್ ವಕೀಲರು ಮತ್ತು ಮಾಜಿ ಅಧ್ಯಕ್ಷರು,
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.