Your cart is empty now.
ಸಮಾಜದೊಳಗಿನ ಆರ್ಥಿಕ ಹಾಗೂ ರಾಜಕೀಯ ಸಂಘರ್ಷಗಳು ಒಂದು ಕಡೆ. ವೈಚಾರಿಕ ಕ್ಷೇತ್ರದೊಳಗಿನ ತಿಕ್ಕಾಟಗಳು ಒಂದು ಕಡೆ. ಇವುಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುವ ಕೆಲಸ ಸುಲಭವೇನಲ್ಲ. ಏಕೆಂದರೆ, ಈ ಸಂಬಂಧ ಬಹಳ ಜಟಿಲವಾಗಿರುತ್ತದೆ, ತೊಡಕಿನದಾಗಿರುತ್ತದೆ. ಅದು ಸರಳವಾಗಿ ಇರುವುದಿಲ್ಲ. ಸ್ಪಷ್ಟವಾಗಿ ಕಾಣಿಸುವುದೂ ಇಲ್ಲ. ವಿವಿಧ ವರ್ಗಗಳ ಹಿತಾಸಕ್ತಿಗಳನ್ನೂ ತಾತ್ವಿಕ ಕ್ಷೇತ್ರದಲ್ಲಿ ಅವುಗಳನ್ನು ಪ್ರತಿನಿಧಿಕರಿಸುವ ಸಿದ್ಧಾಂತಗಳನ್ನೂ ಒಂದಕ್ಕೊಂದು ಜೋಡಿಸುವ ಸರಪಳಿಯಲ್ಲಿ ಹಲವಾರು ಸೂಕ್ಷ್ಮಾತಿಸೂಕ್ಷ್ಮ ಕೊಂಡಿ-ಕೊಳಿಕೆಗಳಿರುತ್ತವೆ. ಅವನ್ನು ಬಿಡಿಸಿ ಬಿಡಿಸಿ ನೋಡಬೇಕಾಗುತ್ತದೆ... ವಿಷಯವನ್ನು ಗ್ರಹಿಸಲು ಸುಲಭವಾಗಬೇಕೆಂದು ಈ ಪುಸ್ತಕದಲ್ಲಿ ಋಗ್ವದದ ಆರಂಭದ ಕಾಲ, ಮುಖ್ಯ ಉಪನಿಷತ್ತುಗಳ ಕಾಲ ಮತ್ತು ಗುಪ್ತ ಸಾಮ್ರಾಜ್ಯದ ಕಾಲ ಎಂದು ವಿಂಗಡಿಸಲಾಗಿದೆ. ಆಯಾ ಕಾಲದ ಸಮಾಜ ವ್ಯವಸ್ಥೆಯ ವಿವರಣೆಯನ್ನೂ ಅಗತ್ಯವಿರುವಷ್ಟು ಕೊಡಲಾಗಿದೆ. ಇದರೊಂದಿಗೆ ಭೌತಿಕವಾದೀ ತತ್ವ ಮತ್ತು ಹಿಂದೂ ಧರ್ಮ ಶಾಸ್ತೋಕ್ತ ತತ್ವ ಇವೆರಡನ್ನೂ ಪರಾಮರ್ಶೆ ಮಾಡಲಾಗಿದೆ. ಇವೆರಡೂ ಬೇರೆ ಬೇರೆ; ಆದರೆ ಅನ್ನೋನ್ಯ ಸಂಬಂಧಪಟ್ಟ ತಾತ್ವಿಕ ವಿಚಾರ ಸರಣಿಗಳು ಎಂದು ನಿರೂಪಿಸಲಾಗಿದೆ. ಬಹುಮುಖ ಪ್ರತಿಭೆಯ ಎಸ್. ಜಿ. ಸರ್ದೇಸಾಯಿ (1907-1996) ವಿದ್ಯಾರ್ಥಿ ದೆಸೆಯಲ್ಲೇ ಕಾಲೇಜು ಪತ್ರಿಕೆಗಳ ಸಂಪಾದಕ, 1929-30ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮರಾಠಿ ಪತ್ರಿಕೆ 'ಕ್ರಾಂತಿ'ಯ ಸಂಪಾದಕ. 1931-34 ಮುಂಬಯಿ ಗಿರಣಿ ಕಾಮಗಾರಿ ಯೂನಿಯನ್ನಿನ ಕಾರ್ಯದರ್ಶಿ. 1934ರಲ್ಲಿ ಗಿರಣಿ ಕಾರ್ಮಿಕರ ಮುಷ್ಕರದ ಸಂಬಂಧ ಎರಡೂವರೆ ವರುಷ ಕಠಿಣ ಸಜೆ. 'ವರ್ಲ್ಡ್ ಮಾರ್ಕ್ಸಿಸ್ಟ್ ರಿವ್ಯೂ' ಮತ್ತು ಪಕ್ಷದ ಮರಾಠಿ ಮುಖಪತ್ರ 'ಯುಗಾಂತರ' ಇವುಗಳ ಸಂಪಾದಕರೂ ಆಗಿದ್ದ ಸರ್ದೇಸಾಯಿಯವರು ಹಲವಾರು ವೈಚಾರಿಕ ಕೃತಿಗಳನ್ನು ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ರಚಿಸಿದ್ದಾರೆ. ಖ್ಯಾತ ಲೇಖಕ, ವಿದ್ವಾಂಸ ಗೌರೀಶ ಕಾಯ್ಕಿಣಿ ಅವರು ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.