Your cart is empty now.
ಭಾರತವು ವಿಶ್ವಗುರುವಾಗಿ ಬಿಂಬಿತಗೊಳ್ಳುತ್ತಿರುವ ಇಂದಿನ ಜಾಗತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನನ್ನನ್ನು ಒಂದು ಸಂಶಯ ಕಾಡತೊಡಗಿತ್ತು. ಇಪ್ಪತ್ತೊಂದನೇ ಶತಮಾನ ಪ್ರಾರಂಭವಾದ ಮೇಲೆ ಜನಿಸಿದ ಮಕ್ಕಳನ್ನು ಮತ್ತು ಎಳೆವಯಸ್ಕರನ್ನು ಈ ಬೆಳವಣಿಗೆಯ ಔಚಿತ್ಯ ಹಾಗೂ ಸೂಚ್ಯಾರ್ಥ ಮತ್ತು, ಆ ಅರ್ಹತೆ ಗಳಿಸಲು ಅಳತೆಗೋಲು ಏನಿರಬಹುದು ಎಂಬ ಬಗ್ಗೆ ಪ್ರಶ್ನಿಸಿದರೆ ಅವರಲ್ಲಿ ಸೂಕ್ತ ಉತ್ತರ ಇದ್ದೀತೆ ಎಂಬ ಸಂಶಯ. ಆ ಸಂಶಯದ ಬೆನ್ನಲ್ಲಿಯೇ ಕಂಡ ಒಂದು ಕೊರತೆ ಎಂದರೆ ನಮ್ಮ ಮಕ್ಕಳಲ್ಲಿ ಈ ವಿಚಾರಗಳ ಬಗ್ಗೆ ತಿಳಿಹೇಳುವ, ನಮ್ಮ ದೇಶದ ಹಲವು ಬೋಧಕರ, ಧಾರ್ಮಿಕ ಮತ್ತು ಆಧ್ಯಾತ್ಮ ಪ್ರವರ್ತಕರ ಮುಖ್ಯ ಬೋಧನೆಗಳನ್ನು, ಅವರ ವೈಚಾರಿಕತೆಯ ವ್ಯಾಪ್ತಿಯನ್ನು, ಸರಳಭಾಷೆಯಲ್ಲಿ ಒಂದೆಡೆ ಕಟ್ಟಿಕೊಡುವ ಪ್ರಕಟಣೆಗಳ ಅಭಾವ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪ್ರಭು ಅವರು 'ಬಹುತ್ವ ಭಾರತ ಕಟ್ಟಿದವರು' ಪುಸ್ತಕದ ಕರಡು ಪ್ರತಿಯನ್ನು ಕಳುಹಿಸಿಕೊಟ್ಟಾಗ, ಅಲ್ಲಿನ ಹನ್ನೊಂದೂ ಜೀವನ್ಮುಕ್ತರ ಬಗ್ಗೆ ಓದುತ್ತಿದ್ದಂತೆ, ಒಂದು ತೃಪ್ತಬಾವ ಮೂಡತೊಡಗಿತ್ತು. ನನ್ನಲ್ಲಿ ಮೂಡಿದ್ದ ಕೊರತೆಯ ಭಾವವನ್ನು ನೀಗಿಸಿದ್ದಾರೆ ಎನಿಸಿತ್ತು. ವಾಲ್ಮೀಕಿ, ಬುದ್ದ ಮೊದಲಾಗಿ, ಬಸವಣ್ಣ, ಅಲ್ಲಮ, ಅಕ್ಕಮ್ಮನವರ ಮೂಲಕ ಹಾದು, ಸರ್ವಜ್ಞ, ಶಾರಾದಾದೇವಿ, ವಿವೇಕಾನಂದ.. ಕೊನೆಗೆ ಜಿಡ್ಡು, ನಾರಾಯಣ ಗುರು ಮತ್ತು ದಲೈ ಲಾಮವರೆಗೆ, ಭಾರತದ ಹನ್ನೊಂದು ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಜೀವನವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಕಥಾನಕದಂತೆ ರಚಿಸಿರುವುದು ವಿಶೇಷವಾದ ನೆಮ್ಮದಿ ತಂದಿದೆ. ಎಲ್ಲರ ಮನೆಯ ಗ್ರಂಥಭಂಡಾರದಲ್ಲೂ ಎಲ್ಲರ ಕೈಗೂ ಸದಾ ಎಟುಕುವಂತೆ ಇರಬೇಕಾದ ಕೃತಿ ಇದು.
- ಕೆ ಎನ್ ಗಣೇಶಯ್ಯ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.