Free Shipping Charge on Orders above ₹300

Shop Now

Badukina Beragu ( critical Essays On Sujnanamurthy's Life and his Translations ) Sale -12%
Rs. 352.00Rs. 400.00
Vendor: BEETLE BOOK SHOP
Type: PRINTED BOOKS
Availability: 9 left in stock
ಬಿ. ಸುಜ್ಞಾನಮೂರ್ತಿಯವರ ಬಗ್ಗೆ ಬರೆಯುವುದೆಂದರೆ ಕೇವಲ ಒಬ್ಬ ವ್ಯಕ್ತಿಯ ಪರಿಚಯ ಎಂದು ನಾನು ಭಾವಿಸಿಲ್ಲ. ಅವರದೇ ಒಂದು ವಿಶಿಷ್ಟ ವ್ಯಕ್ತಿತ್ವ; ಅವರದೇ ವಿಶಿಷ್ಟ ವಿಚಾರತ್ವ, ವ್ಯಕ್ತಿ, ವ್ಯಕ್ತಿತ್ವ, ವಿಚಾರತ್ವಗಳು ಅಂತರ್‌ಸಂಬಂಧಿಯಾದ್ದರಿಂದ ಸುಜ್ಞಾನಮೂರ್ತಿಯವರನ್ನು ಮೂರೂ ನೆಲೆಗಳಲ್ಲಿ ಕಾಣುವ ಕಣೋಟ ಬೇಕಾಗುತ್ತದೆ. ಹಾಗೆ ನೋಡಿದರೆ, ಸುಜ್ಞಾನಮೂರ್ತಿಯವರಲ್ಲೇ ಈ ಮುಪ್ಪುರಿ ಕಣೋಟವಿದೆ. ವ್ಯಕ್ತಿಯಾಗಿ  ಸುಜ್ಞಾನಮೂರ್ತಿಯವರು ಸದಾ ಚಟುವಟಿಕೆಯ ಚಿಲುಮೆ. ಒಪ್ಪಿಕೊಂಡ ಕೆಲಸಗಳನ್ನು ಉತ್ಸಾಹದಿಂದ ಮಾಡುವ ಉಮೇದು ಇವರಲ್ಲಿ ಸದಾ ಚಿಮ್ಮುತ್ತಿರುತ್ತದೆ. ಹೀಗಾಗಿ ಉತ್ಸಾಹವೇ ಈ ವ್ಯಕ್ತಿಯ ಮುಖ್ಯ ವ್ಯಕ್ತಿತ್ವವೂ ಆಗುತ್ತದೆ. ಆದರೆ ವ್ಯಕ್ತಿತ್ವವೆನ್ನುವುದು ಭಾವತೀವ್ರ ಉತ್ಸಾಹಕ್ಕಷ್ಟೇ ಸೀಮಿತವಲ್ಲ. ಸುಜ್ಞಾನಮೂರ್ತಿಯವರ ವ್ಯಕ್ತಿತ್ವಕ್ಕಂತೂ ಭಾವತೀವ್ರ ಸೀಮಿತರೇಖೆ ಅನ್ವಯಿಸುವುದಿಲ್ಲ. ಯಾಕೆಂದರೆ ಇವರ ಉತ್ಸಾಹದಲ್ಲಿ ವಿವೇಕ ಮತ್ತು ವಿಚಾರಗಳು ಅಂತರ್ಗತವಾಗಿರುವುದರಿಂದ ವಿಶೇಷ ವ್ಯಕ್ತಿತ್ವ ರೂಪುಗೊಂಡಿದೆ.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪನಿರ್ದೆಶಕರಾಗಿದ್ದ ಸುಜ್ಞಾನಮೂರ್ತಿಯವರು ವೃತ್ತಿ ಮತ್ತು ಪ್ರವೃತ್ತಿಯನ್ನು ಏಕಕಾಲಕ್ಕೆ ಪ್ರತ್ಯೇಕವೂ ಏಕವೂ ಆಗಿಸಿಕೊಂಡ ಪ್ರತಿಭಾಶಾಲಿ. ಪ್ರಸಾರಾಂಗದ ಪ್ರಕಟಣೆಗಳ ಹೊಣೆಗಾರಿಕೆ ಇವರ ವೃತ್ತಿಯಾಗಿತ್ತು. ಅಲ್ಲಿ ಬಹುಪಾಲು ಸಂಶೋಧನಾತ್ಮಕ ಮತ್ತು ಶಾಸ್ತ್ರೀಯ ಶಿಸ್ತಿನ ಕೃತಿಗಳು ಪ್ರಕಟವಾಗುವುದು ಸಹಜ ಸಂಗತಿ. ವೃತ್ತಿಕಾರಣಕ್ಕೆ ಇಂತಹ ಕೃತಿಗಳ ಪ್ರಕಟಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸುಜ್ಞಾನಮೂರ್ತಿಯವರ ಪ್ರವೃತ್ತಿ ಅನುವಾದ; ಅದೂ ಬಹುಪಾಲು ವಿಚಾರವಾದ ಕೇಂದ್ರಿತ ಕೃತಿಗಳ ಅನುವಾದ. ತಮ್ಮ ಪ್ರವೃತ್ತಿಗೂ ವೃತ್ತಿಗೂ ಧಕ್ಕೆಯಾಗದಂತೆ 'ಏಕನಿಷ್ಠೆ' ಯಿಂದ ಏಕವಾಗಿಯೂ 'ಕೃತಿ ಮಾದರಿಗಳಲ್ಲಿ' ಪ್ರತ್ಯೇಕವಾಗಿಯೂ ಉಳಿದು ಬೆಳೆದ ಸುಜ್ಞಾನಮೂರ್ತಿ ಕನ್ನಡ ವಿಶ್ವವಿದ್ಯಾಲಯದ ಒಂದು 'ವಿಸ್ಮಯ'ವಾಗಿ ನನಗೆ ಕಾಣಿಸುತ್ತಾರೆ. ಸುಜ್ಞಾನಮೂರ್ತಿ ಮುಚ್ಚುಮರೆ ಇಲ್ಲದ ಮಾತುಗಾರ; ಶಿಸ್ತುಬದ್ಧ ಕೆಲಸಗಾರ. ಅವರಿಗೆ ಶುಭಹಾರೈಕೆಗಳು.

ಪ್ರೊ. ಬರಗೂರು ರಾಮಚಂದ್ರಪ್ಪ

Guaranteed safe checkout

Badukina Beragu ( critical Essays On Sujnanamurthy's Life and his Translations )
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading