Your cart is empty now.
ಮಾನವೀಯತೆಯ ಹಾದಿಯ ಪಯಣಿಗ
ಮಂಜುನಾಥ ಅದ್ದೆ ನಮ್ಮ ನಡುವಣ ಸಾಮಾಜಿಕ ನ್ಯಾಯದ ಪ್ರತಿನಿಧಿ, ಸಾಂಸ್ಕೃತಿಕ ಎಚ್ಚರದ ಗುರುತು. ಶ್ರದ್ದೆ ಮತ್ತು ಸಾಹಸಗಳ ಸಂಗಾತಿ. ಸಂಕಟದ ಕಾಲದಲ್ಲಿ ನೆನಪಾಗುವ ಆಸರೆ. ದಿಕ್ಕುಗಾಣದ ಯುವ ಮನಸ್ಸುಗಳ ಭರವಸೆ. ಮಣ್ಣಿನ ನಂಟು ಬಿಡದ ರೈತ. ಲೋಕದ ಡೊಂಕನ್ನು ತಿದ್ದುವ ಹಠವಾದಿ. ಮಾನವೀಯತೆಯ ಹಾದಿಯ ಪಯಣಿಗ.
ಎದೆಯ ದನಿಯಂತೆ ನಡೆವ ಅದ್ದೆ ಒಳಿತಿನ ರಾಯಭಾರಿ. ಅದ್ದೆಯ ಬದುಕಿಗೆ ಎಂದೂ ಬತ್ತದ ತಲಪರಿಗೆಯೇ ರೂಪಕ.
ಇಪ್ಪತ್ತನೆಯ ಶತಮಾನದ ಕನ್ನಡ ಸಮಾಜ ರೂಪಿಸಿಕೊಂಡು ಆರಾಧಿಸಿದ ಸಾಂಸ್ಕೃತಿಕ ನಾಯಕ ರಾಜಕುಮಾರ್ ಅವರನ್ನು ಕುರಿತು ಆಳವಾದ ಅಧ್ಯಯನ ಮಾಡಿ ಡಿ.ಲಿಟ್. ಪದವಿ ಗಳಿಸಿ ಸಂಶೋಧಕರಿಗೆ ಅಚ್ಚರಿಯನ್ನು ಹುಟ್ಟಿಸಿದವನು. ಸಂವಿಧಾನದ ಆಶಯಗಳ ಸಮರ್ಥಕನಾದ ಅದ್ದೆಯ ನಡೆ ನುಡಿಗಳು ಮುಂದಿನ ತಲೆಮಾರುಗಳಿಗೆ ಮಾದರಿ ಎನ್ನುವ ಅಚಲ ನಂಬಿಕೆ ನನ್ನದು.
ಕೆ.ವೈ.ನಾರಾಯಣಸ್ವಾಮಿ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.