Dhavati ( Novel ) - Beetle Book Shop

ಧವತಿ ( ಕಾದಂಬರಿ )

Rs. 120.00
Sale price  Rs. 120.00 ಸಾಮಾನ್ಯ ಬೆಲೆ  Rs. 120.00
ಉತ್ಪನ್ನದ ಮಾಹಿತಿಗೆ ತೆರಳಿ
Dhavati ( Novel ) - Beetle Book Shop

ಧವತಿ ( ಕಾದಂಬರಿ )

Rs. 120.00
Sale price  Rs. 120.00 ಸಾಮಾನ್ಯ ಬೆಲೆ  Rs. 120.00

ಮಾರಾಟಗಾರರು : Beetle Book Shop

ಸಾವಿರಾರು ವರ್ಷಗಳಿಂದ ಹರಿದು ಬಂದಯಾವುದೇ ಭಾಷೆಯ ನುಡಿಗಟ್ಟುಗಳಲ್ಲಿ ನಿರಂತರವಾಗಿ ಬಿಚ್ಚಿಕೊಳ್ಳುತ್ತಾ ಹೋಗುವ ಜ್ಞಾನ, ವಿವೇಕಗಳನ್ನು ಕಂಡು ಮನೋವಿಜ್ಞಾನಿ ಸಿಗಂಡ್ ಫ್ರಾಯ್ಡ್ ವಿಸ್ಮಯಗೊಳ್ಳುತ್ತಾನೆ. ಗಂಗಪ್ಪ ತಳವಾರ ಬರೆದ 'ಧಾವತಿ' ಕಾದಂಬರಿಯೊಳಗೆ ಕೋಲಾರ ಸೀಮೆಯ ಸುತ್ತಮುತ್ತಲ ಆಡುಮಾತಿನಲ್ಲಿ ಚಿಮ್ಮುವ ಬಾಳಿನ ಅನುಭವಗಳು, ಚಿತ್ರಗಳು ಹಾಗೂ ನೋಟಗಳನ್ನು ಕಂಡಾಗ ಫ್ರಾಯ್ಡ್ ವಿಸ್ಮಯ ನನ್ನ ಅರಿವಿಗೂ ಬರತೊಡಗಿತು. ತನ್ನ ತಾರುಣ್ಯವನ್ನು ಕೋಲಾರದ ಆದಿಮ ಬೆಟ್ಟದ ಸುತ್ತ ಕಳೆದಿರುವ ಅಸಲಿ ದನಿಯ ಕವಿ ಗಂಗಪ್ಪ ಬರೆದ ಈ ಪುಟ್ಟ ಕಾದಂಬರಿ ಕನ್ನಡ ಕಥಾಲೋಕಕ್ಕೆ ಇನ್ನೂ ಪರಿಚಯವಿರದ ಸ್ತ್ರೀಲೋಕವನ್ನು ಸಿದ್ಧ ಅನುಕಂಪದ ಗಡಿ ಮೀರಿ ಸಹಜವಾಗಿ ಗ್ರಹಿಸಲೆತ್ನಿಸಿದೆ. ಚಿಂದಿಯಾದ ಚಂದ್ರಿಯ ದಾರುಣ ಬದುಕಿನ ಏರುಪೇರು, ಅವಮಾನ, ಅವಳ ಕಣ್ಣು, ದೇಹ, ಆತ್ಮ, ಲಯ, ಮಾತು, ಮನೋಲೋಕಗಳ ಜೊತೆಗೇ ಸಾಗುವ ಕಾದಂಬರಿಕಾರ ಅವಳ ಮೈ ಮನಗಳ ಲಯಗಳಲ್ಲಿ ಬೆರೆತು ಬರೆಯುವ ರೀತಿ ಅನನ್ಯವಾಗಿದೆ.

ಕನ್ನಡ ಸಾಹಿತ್ಯ ಕಂಡ ಹಲವು ಚಳುವಳಿಗಳ ಗುರುತನ್ನು ಉಳಿಸಿಕೊಂಡೂ, ಆ ಮಾದರಿಗಳಾಚೆಗೆ ದಾಟಿ ಕತೆ ಹೇಳುವ ಕಾತರ ತೋರುವ 'ಧಾವತಿ' ಕಾದಂಬರಿ ವಿವಿಧ ದ್ರಾವಿಡ ಭಾಷೆಗಳು ಬೆರೆಯುವ ಸೀಮೆಯ ವಿಶಿಷ್ಟ ನುಡಿಗಟ್ಟಿಗಳಿಗೆ ಮಾತ್ರವೇ ದಕ್ಕಬಲ್ಲ ಲೋಕ ಸತ್ಯಗಳತ್ತ ಕೈ ಚಾಚಿದೆ; ಆ ಲೋಕದಿಂದಲೇ ಒಡಮೂಡಿದ ಶಕ್ತ ಕಾದಂಬರಿಕಾರನ ಹುಟ್ಟನ್ನು ಇಲ್ಲಿನ ಪುಟ ಪುಟವೂ ಸಾರುತ್ತದೆ. ತಮ್ಮ ಪಾತ್ರಗಳ ಸಾಮಾಜಿಕ ಭಿತ್ತಿಯ ಒಳಹೊರಗಿನಲ್ಲಿ ಇನ್ನಷ್ಟು ಆಳವಾಗಿ ತೊಡಗಿ, ಭಾಷೆಯ ಜೀವಂತಲಯಗಳ ಜೊತೆಗೆ ಬೆಸುಗೆಯರಿಯದಂತೆ ಬೆರೆವ ಕಲೆ ದಕ್ಕಿದ ದಿನ ಗಂಗಪ್ಪ ಕನ್ನಡದ ಮಹತ್ವದ ಕಾದಂಬರಿಕಾರರಾಗಬಲ್ಲರು.

- ನಟರಾಜ್ ಹುಳಿಯಾರ್

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು