Super God Sannayya - Beetle Book Shop

ಸೂಪರ್ ಗಾಡ್ ಸಣ್ಣಯ್ಯ | Super God Sannayya

Rs. 149.00
Sale price  Rs. 149.00 ಸಾಮಾನ್ಯ ಬೆಲೆ  Rs. 165.00
ಉತ್ಪನ್ನದ ಮಾಹಿತಿಗೆ ತೆರಳಿ
Super God Sannayya - Beetle Book Shop

ಸೂಪರ್ ಗಾಡ್ ಸಣ್ಣಯ್ಯ | Super God Sannayya

Rs. 149.00
Sale price  Rs. 149.00 ಸಾಮಾನ್ಯ ಬೆಲೆ  Rs. 165.00

ಮಾರಾಟಗಾರರು : BEETLE BOOK SHOP

ಇವನು ಗೆಳೆಯನಲ್ಲ..!ನನ್ನದೇ ಆಗಿದ್ದ ಅದೊಂದು ಕಾಲವಿತ್ತು. ಕನ್ನಡದ ದಿನಪತ್ರಿಕೆಗಳು ದೀಪಾವಳಿಗೋ, ಯುಗಾದಿಗೋ ನಡೆಸುತ್ತಿದ್ದ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡ ಸಣ್ಣ ಕತೆಗಳನ್ನು ಹುಡುಕಿಕೊಂಡು ಓದುತ್ತಿದ್ದ ಕಾಲ ಅದು. ಅಂತಹಾ ಕಥಾ ಸ್ಪರ್ಧೆಗಳಲ್ಲಿ ಪ್ರಥಮವೋ, ದ್ವಿತೀಯವೋ ಬಹುಮಾನ ಗೆದ್ದ ಕತೆಗಳ ಜೊತೆಯಲ್ಲಿ ಅದನ್ನು ಬರೆದವರ ಹೆಸರುಗಳೂ ಕೆಲಕಾಲ ನೆನಪಿನಲ್ಲಿ ಉಳಿಯುತ್ತಿದ್ದವು. ಆದರೆ, ಅಂತಹ ಯಾವುದೇ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯದೆಯೂ, ನೆನಪಿನಲ್ಲಿ ಉಳಿದಿರುವ ಕೆಲವೇ ಹೊಸಬರ ಹೆಸರುಗಳಲ್ಲಿ ಪಕ್ಕನೆ ನೆನಪಾಗುವ ಒಂದು ಅಪರೂಪದ ಹೆಸರು ಈ ‘ಹೃದಯಶಿವ’. ಅದಕ್ಕೆ ಕಾರಣ, ಕನ್ನಡ ಚಿತ್ರಲೋಕವನ್ನೇ ನಿದ್ರೆಯಿಂದ ಎಬ್ಬಿಸಿದ್ದ ‘ಮುಂಗಾರು ಮಳೆ’ ಸಿನಿಮಾದ – ‘ಇವನು ಗೆಳೆಯನಲ್ಲ...’ ಎಂಬ ಹಾಡಿನ ಎದೆ ಕಲಕಿದ್ದ, ಕಣ್ಣಂಚು ತೋಯಿಸಿದ್ದ ನಾಲ್ಕು ಸಾಲುಗಳು.
ಈ ಸಂಕಲನದ ಎಲ್ಲ ಹದಿನೈದು ಕತೆಗಳ ಮೂಲವನ್ನು ಕೆದಕಲು ನಾನು ಇಳಿಯುವುದಿಲ್ಲ. ಇಲ್ಲಿನ ಬಹುಪಾಲು ಕತೆಗಳು ಗ್ರಾಮೀಣ ಹಿನ್ನೆಲೆಯವು. ಬಳಸಿದ ಭಾಷೆಯೂ ಅದೇ ಗುಂಪಿನದ್ದು. ‘ಒಂದೂರಲ್ಲಿ ಒಬ್ಬ ಗೌಡ ಇದ್ದನಂತೆ, ಆ ಗೌಡನಿಗೆ ಒಬ್ಬಳೇ ಹೆಂಡ್ರು ಅಂತೆ. ಅವಳನ್ನು ಕಂಡ್ರೆ ಗೌಡನಿಗೆ ಬೋ ಪ್ರೀತಿಯಂತೆ...’ ಈ ಬಗೆಯ, ಯಾರನ್ನೂ ಕೆಣಕದ ಸರಳ ದಾಟಿಯ ಭಾಷೆಯ ಬಳಕೆಯೇ ಹೆಚ್ಚು. ಇಂದಿನ ಗ್ರಾಮೀಣ ಹಿನ್ನೆಲೆಯ ಕತೆಗಳೆಂದರೆ, ನಮ್ಮ ಸುತ್ತಲ ಬದುಕಿನಲ್ಲಿ ಓದುಗರು ಕಾಣುವ ಮತ್ತು ಕಾಣಬಯಸುವ ಜಾತಿ-ಧರ್ಮಗಳ ಸರಸ-ವಿರಸ, ಸಂಬಂಧ-ಸಂಘರ್ಷಗಳಲ್ಲಿ ನಿರೂಪಕನಿಗೆ ಆಸಕ್ತಿಯಿದ್ದಂತಿಲ್ಲ. ಈ ಸಂಕಲನದ,  ‘ಸೂಪರ್ ಗಾಡ್ ಸಣ್ಣಯ್ಯ’ದಲ್ಲಿರುವ ಕತೆಗಳೂ ನನ್ನ ಈ ಮಾತಿಗೆ ಮತ್ತೊಂದು ಸಾಕ್ಷಿ. ಎಲ್ಲ ಜಾತಿ-ಧರ್ಮಗಳ ಗೊಂದಲಗಳನ್ನೂ ಕೆಣಕಲು ಸಾಕಷ್ಟು ಕೆಸರುಗುಂಡಿಗಳುಳ್ಳ ಈ ಸಂಕಲನದ ಬಹುಪಾಲು ಕತೆಗಳು ಬೆಳೆಯುತ್ತಾ ಹೋದಂತೆ, ಅನಿರೀಕ್ಷಿತ ಘಟನೆಯೊಂದು ಘಟಿಸಿಯೇಬಿಡುತ್ತದೆ ಎಂಬ ಅನುಮಾನದ ಮೂಲಕ ಸಾಮಾನ್ಯ ಓದುಗನನ್ನು ಕೆರಳಿಸುತ್ತಲೇ, ಓದುಗನ ನಿರೀಕ್ಷೆಯನ್ನು ಸುಳ್ಳು ಮಾಡುವ ಮೂಲಕ ಗೆದ್ದುಬಿಡುತ್ತವೆ. ‘ಹೃದಯಶಿವ’ ಅವರ ಕತೆಗಳ ಒಳಗುಟ್ಟುಗಳನ್ನು ಓದಿಯೇ ಅಸ್ವಾದಿಸಬೇಕು.
ಮುಖ್ಯವಾಗಿ, ಸಿನಿಮಾ ಮಾಧ್ಯಮದ ಹಲವು ವಿಭಾಗಗಳಲ್ಲಿ ಪಳಗಿರುವ ಈ ಕೆ ಎಂ ಶಿವಣ್ಣ-ಯಾನೆ-ಕೆಬ್ಬರೆ ಮಂಚೇಗೌಡ ಶಿವಣ್ಣನೆಂಬ ಈ ಕನ್ನಡದ ಕಂದ, ಕನ್ನಡದ ಓದುಗರೆಲ್ಲರ ‘ಹೃದಯಶಿವ’ನಾಗಲಿ ಹಾಗೂ ‘ಇವನು ಗೆಳೆಯನಲ್ಲ..’ ಎಂಬ ಮಾತು ಬಲು ಬೇಗ ಸುಳ್ಳಾಗಲಿ ಎಂದು ಹಾರೈಸುವೆ.

-ಬೊಳುವಾರು ಮಹಮದ್ ಕುಂಞಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು