SONTAK BELTU KATTIKONDU - Beetle Book Shop

ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00
ಉತ್ಪನ್ನದ ಮಾಹಿತಿಗೆ ತೆರಳಿ
SONTAK BELTU KATTIKONDU - Beetle Book Shop

ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00

ಮಾರಾಟಗಾರರು : BEETLE BOOK SHOP

ಭಾರತಿಯ ಬರಹಗಳು ನನಗೆ ಇಷ್ಟವಾಗುವುದು ಅವುಗಳ ಸರಳತೆಗೆ ಮತ್ತು ಓದುತ್ತಾ ಹೋದ ಹಾಗೆ ಅವುಗಳು ಕೊಡುವ ಅಷ್ಟೇನೂ ಸರಳವಲ್ಲದ ಹೊಳಹುಗಳಿಗೆ. ಇದೊಂದು ತರಹ ಕಾಲದ ಕೋಲ್ಮಿಂಚಲ್ಲಿ ಹೊಳೆಯುವ ಕಾಡೊಳಗಿನ ಕಾಲು ದಾರಿಯ ಹಾಗಿರುವ ಬರವಣಿಗೆ. ಮೇಲ್ಮೈ ಮಟ್ಟದಲ್ಲಿ ಸರಳ ಅನಿಸಿದರೂ ಓದುತ್ತಾ ಹೋದ ಹಾಗೆ ಆವರಿಸುವ ನಗು, ನಿಟ್ಟುಸಿರು, ವಿಷಾದ, ಇತಿಹಾಸದ ವ್ಯಂಗ್ಯ ಸತ್ಯಗಳು, ಮನುಷ್ಯ ಜೀವನದ ಅಸಂಗತ ತಮಾಷೆಗಳು ಎಲ್ಲವೂ ದೊಡ್ಡ ಮಟ್ಟದ ಬರವಣಿಗೆಯೊಂದು ದನಿ ಎತ್ತರಿಸಿ ಹೇಳಿದಷ್ಟೇ ಪರಿಣಾಮವನ್ನು ನಿರುದ್ದಿಶ್ಯವಾಗಿ ಹೇಳಿಬಿಡುತ್ತದೆ. ಉದಾಹರಣೆಗೆ ಇಸ್ರೇಲಿನ ಮೃತ ಸಮುದ್ರದ ಕುರಿತ ಬರಹ ಬಹಳ ಸರಳವಾಗಿ ಅಂತಾರಾಷ್ಟ್ರೀಯ ಧಾರ್ಮಿಕ ಸಾಮಾಜಿಕ ರಾಜಕೀಯ ಕ್ರೌರ್ಯವನ್ನು ಒಂದು ಸಣ್ಣ ಕಥೆಯಷ್ಟೇ ಸಣ್ಣದಾಗಿ ಆದರೆ ಗಹನವಾಗಿ ಹೇಳಿಬಿಡುತ್ತದೆ. ಮುಳುಗದ ಉಪ್ಪು ಸಾಗರದಲ್ಲಿ ತೇಲಲು ಹೋದ ಪ್ರವಾಸಿಗರು ಮೈಯೆಲ್ಲಾ ತುರಿಸಿಕೊಂಡು ಒದ್ದಾಡುವ ವಿವರಗಳು ಇತಿಹಾಸದ ಒಂದು ವ್ಯಂಗ್ಯವನ್ನು ಏನೂ ಹೇಳದೆಯೂ ಎಷ್ಟೊಂದು ಹೇಳಿಬಿಡುತ್ತದೆ. ರಷ್ಯಾ ದೇಶಕ್ಕೆ ಪಯಣ ಹೊರಟ ಸೋಮವಾರ ಶನಿವಾರಗಳಂದು ಮಾಂಸಾಹಾರ ಸೇವಿಸದ ದೇಸೀ ಪ್ರವಾಸಿಗಳು, ಮುಖ ನೋಡಲು ಬಿಡದ ಶ್ರೀರಂಗನಿಗೇ ರೋಪು ಹಾಕಿ ಮುಖ ತಿರುಗಿಸಿ ಪ್ರೀತಿ ಕೊಡುವವರ ಹತ್ತಿರ ಹೋಗಬೇಕು, ಮುಖ ತಿರುಗಿಸಿಕೊಳ್ಳುವವರ ಸಹವಾಸ ನಮಗ್ಯಾಕೆ ಎಂದು ವಾಪಾಸಾಗುವ ಲೇಖಕಿ, ಮೈಕೆಲ್ ಏಂಜೆಲೋನನ್ನು ಮೈಕೆಲ್ ಜಾಕ್ಸನ್ ಎಂದು ಬುರುಡೆ ಬಿಡುವ ಕನ್ನಡಿಗ ಕರಿಯಪ್ಪನವರು ಪ್ರವಾಸವೊಂದರ ಸಣ್ಣ ವಿವರಗಳಲ್ಲಿ ಅನಾವರಣಗೊಳ್ಳುವ ಎಷ್ಟೊಂದು ಮನುಷ್ಯ ಮುಖಗಳು ಮತ್ತು ಮುಂದೊಂದು ದಿನ ಕಥೆಯಾಗಬಹುದಾಗದ್ದಿ ಸನ್ನಿವೇಶಗಳು. ಆದರೆ ಭಾರತಿ ಮುಂದೊಂದು ದಿನ ಇವೆಲ್ಲವನ್ನೂ ಬಳಸಬಹುದು ಎಂಬ ದುರಾಸೆಯಿಲ್ಲದೆ ಬಿಡುಬೀಸಾಗಿ ಎಲ್ಲವನ್ನೂ ಇಲ್ಲೇ ಹೇಳುತ್ತಾ ಮುಂದಕ್ಕೆ ಹೋಗಿದ್ದಾರೆ.

ಸಾಯಲು ಹೆದರುವುದಿಲ್ಲ ಎಂದು ಹೇಳುವುದು ಬಹಳ ಸುಲಭ. ಆದರೆ ಕರೆಯಲು ಬಂದದ್ದಿ ಸಾವನ್ನು ಎದುರಿಸಿ ಮುಗುಳ್ನಗುತ್ತಾ ಹೊರಬರುವುದು ಬಹಳ ಗಹನ ವಿಷಯ. ಹಾಗೆ ಬಂದಾದ ಮೇಲೆ ಅದುವರೆಗೆ ಬಹಳ ಘನವಾಗಿ ಕಾಣಿಸುತ್ತದ್ದಿ ಸಂಗತಿಗಳೆಲ್ಲವೂ ಮಕ್ಕಳಾಟದಂತೆ ಕಾಣಿಸುತ್ತವೆ. ಹಾಗೆ ಎದುರಿಸಿ ಬಂದ ಭಾರತಿಯ ಬರವಣಿಗೆಗೆ ಬಂದಿರುವ ಲೋಕದೃಷ್ಟಿ ಇಲ್ಲಿಯ ಎಲ್ಲ ಬರವಣಿಗೆಯಲ್ಲೂ ಇವೆ ಮತ್ತು ಬಹಳ ಸಲೀಸಾಗಿ ಓದಿಸಿಕೊಂಡು ಹೋಗುತ್ತವೆ.

-      ಅಬ್ದುಲ್ ರಶೀದ್, ಲೇಖಕರು

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು