SAALUGALA NADUVE - Beetle Book Shop

Between the lines | ಸಾಲುಗಳ ನಡುವೆ

Rs. 199.00
Sale price  Rs. 199.00 ಸಾಮಾನ್ಯ ಬೆಲೆ  Rs. 225.00
ಉತ್ಪನ್ನದ ಮಾಹಿತಿಗೆ ತೆರಳಿ
SAALUGALA NADUVE - Beetle Book Shop

Between the lines | ಸಾಲುಗಳ ನಡುವೆ

Rs. 199.00
Sale price  Rs. 199.00 ಸಾಮಾನ್ಯ ಬೆಲೆ  Rs. 225.00

ಮಾರಾಟಗಾರರು : BEETLE BOOK SHOP

ಅನಿರುದ್ಧ ಜತ್ಕರ್‌ ಅವರು ಹಲವು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಕಲಾವಿದರು, ಗಾಯಕರು, ನಿರ್ದೇಶಕರು ಮತ್ತು ಉತ್ತಮ ಓದುಗರು ಎಂದು ನಮಗೆ ತಿಳಿದಿತ್ತು. ಆದರೆ ಅವರು ಬರೆಯುತ್ತಾರೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಅನಿರುದ್ಧ ಅವರ ಬರಹಗಳು ಅನೇಕ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಅನಿರುದ್ಧ ಅವರು ಮೂಲತಃ ಭಾವಜೀವಿಗಳು. ಸಮಾಜದಲ್ಲಿ ಯಾವುದೇ ವಿಘಟನೆ ಕಂಡುಬಂದರೂ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ತನ್ನ ನಿಲುವಿಗೆ ಬದ್ಧರಾಗಿರುತ್ತಾರೆ. ತಾನು ನಂಬಿದ ಸಿದ್ಧಾಂತವನ್ನು ಯಾವತ್ತೂ ಬಿಟ್ಟು ಹೋಗುವುದಿಲ್ಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಯಾರ ಕುರಿತೂ ಅವಹೇಳನಕಾರಿಯಾಗಿ ಮಾತಾಡುವುದಿಲ್ಲ ಅನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತು. ಅವರ ವೈಚಾರಿಕ ಪ್ರಭೆ ಕೂಡ ಅವರ ಮಾತು ಮತ್ತು ವರ್ತನೆಗಳಲ್ಲಿ ಹೊರಹೊಮ್ಮುತ್ತಿರುತ್ತದೆ.

ಇದೀಗ ಅವರು ಬರೆದಿರುವ ಲೇಖನಗಳನ್ನೆಲ್ಲ ಒಟ್ಟಾಗಿಸಿ ತಂದಿರುವ "ಸಾಲುಗಳ ನಡುವೆ" ಸಂಕಲನದ ಶೀರ್ಷಿಕೆಯೇ ಅರ್ಥಪೂರ್ಣವಾಗಿದೆ. ಇಂಗ್ಲಿಷಿನಲ್ಲಿ "ರೀಡ್ ಬಿಟ್ವೀನ್ ದಿ ಲೈನ್ಸ್" ಅಂದರೆ ಅಲ್ಲಿ ಏನು ಬರೆದಿದೆಯೋ ಅದಷ್ಟನ್ನೇ ಅಲ್ಲದೇ, ಆ ಮಾತುಗಳ ಹಿಂದೆ ಅಡಗಿರುವುದನ್ನೂ ಗ್ರಹಿಸು ಅಂತ ಅರ್ಥ. ಒಳ್ಳೆಯ ಓದುಗ ಯಾವತ್ತೂ ಸಾಲುಗಳ ನಡುವೆ ಇರುವುದನ್ನೂ ಓದಬಲ್ಲ. ಎಲ್ಲ ಲೇಖಕರ ಬರಹಗಳಲ್ಲೂ ಅಂಥ ಅಂತರ್ಗತವಾದ ವಿಶೇಷ ಅರ್ಥ ಹೊರಡಿಸುವ ಸಾಲುಗಳಿರುತ್ತವೆ.

ಪುನೀತ್ ನಿರ್ಗಮಿಸಿದ ಸಂದರ್ಭದಲ್ಲಿ ವಿದೇಶದಿಂದ ಮರಳಿದ ಅವರ ಮಗಳನ್ನು ಸಮೂಹ ನಡೆಸಿಕೊಂಡ ರೀತಿ, ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಪಾಠ, ಕುರುಡರ ನಗರಿಯಲ್ಲಿ ಕನ್ನಡಿ ಮಾರುವವನ ಅಂತರಂಗ, ಸತ್ಯಜಿತ್ ರೇ ಜಗತ್ತಿಗೆ ಒಂದು ಬೆಳಕಿಂಡಿ, ಎಂ ಎಸ್ ಸತ್ಯು ಸಮೀಪಚಿತ್ರ, ಚಿತ್ರಕತೆಯ ದೈವಿಕ ಅನುಭವ, ಸಲೀಂ ಜಾವೇದ್ ಕುರಿತ ಮೆಚ್ಚುಗೆ- ಹೀಗೆ ವೈವಿಧ್ಯಮಯ ಸಂಗತಿಗಳನ್ನೆಲ್ಲ ಈ ಕೃತಿಯಲ್ಲಿ ಅನಿರುದ್ಧ ದಾಖಲಿಸುತ್ತಾ ಹೋಗಿದ್ದಾರೆ.

ಪ್ರತಿಭೆ ಮತ್ತು ಒಳನೋಟ, ವಿನಯ ಮತ್ತು ವೈವಿಧ್ಯ ಇರುವ ಈ ಸಂಕಲನದ ಹಲವು ಬರಹಗಳು ಅನಿರುದ್ಧ ಅವರನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಅವರ ಆಸಕ್ತಿಯ ವಿಸ್ತಾರವನ್ನೂ ತೋರುತ್ತವೆ.

ಈ ಪುಸ್ತಕಕ್ಕಾಗಿ ಅನಿರುದ್ಧ ಜತ್ಕರರನ್ನು ಅಭಿನಂದಿಸುತ್ತಾ, ಗ್ರಂಥಲೋಕಕ್ಕೆ ಅವರನ್ನು ಸ್ವಾಗತಿಸುತ್ತಿದ್ದೇನೆ.

-ಜೋಗಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು