ಹೆಚ್ಚುವರಿ ಮಾಹಿತಿ
ವಿವರಣೆ
ಚರಿತ್ರೆಯ ನೆನಪುಗಳು ಬೇರೆ ಬೇರೆ ವ್ಯಕ್ತಿಗಳ ಮೇಲೆ ಮಾಡುವ ಪರಿಣಾಮಗಳು ವೈವಿಧ್ಯಮಯವಾಗಿರುತ್ತವೆ. ಚರಿತ್ರೆಯ ಅಗತ್ಯ ಕೂಡಾ ಹೀಗೆಯೇ. ಭೂತವನ್ನು ಕೆದಕಿ ನೋಡುವುದು ಕೆಲವರಿಗೆ ಕೇವಲ ಒಂದು ಹವ್ಯಾಸ; ಹೊಸ ಕಲಿಕೆಯ ಉತ್ಸಾಹ; ಕುತೂಹಲವನ್ನು ತಣಿಸಿಕೊಳ್ಳುವ ಒಂದು ಸಂದರ್ಭ. ಮತ್ತೆ ಕೆಲವರಿಗೆ ತಾವು ಇಂದು ನಂಬುವ, ಎಂದೋ ಇದ್ದಿರಬಹುದಾದ ಮೌಲ್ಯಗಳನ್ನು ಆರಾಧಿಸುವ ಅವಕಾಶ. ಇನ್ನೂ ಕೆಲವರಿಗೆ ಚರಿತ್ರೆ ಎಂಬುದು ಎಂದೂ ವಾಸಿಯಾಗಲಾರದ ಒಂದು ಹುಣ್ಣು. ಅದರ ನೆನಪೇ ಅವರಿಗೆ ಅಪ್ರಿಯ. ಹೀಗೆ ವ್ಯಕ್ತಿಗಳ ನೆನಪನ್ನೂ, ಸಮುದಾಯ ಸಂಸ್ಕೃತಿಗಳ ನೆನಪುಗಳನ್ನೂ ಬೇರೆ ಬೇರೆ ರೀತಿಗಳಲ್ಲಿ ಉದ್ದೀಪಿಸುವ ಚರಿತ್ರೆಯ ಸ್ವರೂಪವನ್ನು ಕೊಂಚ ಬಗೆದು ನೋಡುವುದು ಆನಂದ ಕುಂಚನೂರ ಅವರ 'ಆಸಂಗಿ ಅಗಸಿ ಬಾಗಿಲು' ಕತೆಯ ಮುಖ್ಯ ಆಶಯ ಎನ್ನಬಹುದು. ಈಚೆಗೆ ಬರೆಯುತ್ತಿರುವ ಆನಂದ ಕುಂಚನೂರ ಅವರು ತಮ್ಮ ಆರಂಭಿಕ ಪ್ರಯತ್ನಗಳಲ್ಲಿಯೇ ತೋರುತ್ತಿರುವ ಮಹತ್ವಾಕಾಂಕ್ಷೆ ಮೆಚ್ಚುವಂಥದು. ಅಷ್ಟೇ ಅಲ್ಲ, 'ರಚನೆ'ಗಾಗಿ ಅವರು ನಡೆಸುತ್ತಿರುವ ಸೃಜನಶೀಲ ಹುಡುಕಾಟವೂ ತಮ್ಮ ಅನುಭವ ಮತ್ತು ಅಭಿವ್ಯಕ್ತಿಗೆ ಹತ್ತಿರವಾಗಿರುವ ಸ್ಥಳೀಯ ಭಾಷೆಯನ್ನು ಒಂದು ಹದದಲ್ಲಿ ಬಳಸಿರುವ ಕ್ರಮವೂ ಗಮನ ಸೆಳೆಯುವಂತಿವೆ.
ಟಿ.ಪಿ. ಅಶೋಕ
('ಆಸಂಗಿ ಆಗಸಿ ಬಾಗಿಲು' ಕತೆಗಾಗಿ ಬರೆದ ವಿಮರ್ಶೆಯಿಂದ)
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.