ಹೆಚ್ಚುವರಿ ಮಾಹಿತಿ
ವಿವರಣೆ
1) ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಯಾವಾಗ ಆರಂಭ ಗೊಂಡವು , ಗೊತ್ತೇ ? 2) ದೇಶದ ಮೊದಲ ಖಾಸಗಿ ವಾಹಿನಿ ನಮ್ಮ ಮೈಸೂರಿನ ಕಥೆ ಗೊತ್ತೇ ? 3) ಮೈಸೂರು ಬೆಂಗಳೂರಾಗಿದ್ದು, 19 ವರ್ಷ ಸ್ಥಗಿತಗೊಂಡಿದ್ದು, ಪುನರಾರಂಭ ಗೊಂಡದ್ದು ತಿಳಿದಿದೆಯೇ ? 4) ದೊರೆಸ್ವಾಮಿ ಆಯ್ಯಂಗಾರ್, ಆರ್.ಕೆ ಶ್ರೀಕಂಠನ್ , ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್ ಕೃಷ್ಣಮೂರ್ತಿ, ಎಚ್ ಕೆ ನಾರಾಯಣ, ಪದ್ಮಚರಣ ಮೊದಲಾದ ಸಂಗೀತ ಮಾಂತ್ರಿಕರು ಆಕಾಶ ವಾಣಿಯಲ್ಲಿ 30 ವರ್ಷಗಳಿಗೂ ಮೀರಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಲ್ಲಿರಾ ? 5) ಆಕಾಶವಾಣಿ 1954 ರಲ್ಲೇ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಂಗೀತ ಕಛೇರಿ ಏರ್ಪಡಿಸುತ್ತಿತ್ತು ಅಂದರೆ ಆಶ್ಚರ್ಯ ಆಗುತ್ತದೆಯೇ? 6) ಧ್ವನಿಪರೀಕ್ಷೆ ಹೇಗೆ ನಡೆಯುತ್ತಿತ್ತು, ಅದಕ್ಕೆ ನಿಯಮಾವಳಿಗಳು ರೂಪುಗೊಂಡ ಬಗೆ ಎಂಥ ಚೆಂದ ಗೊತ್ತೇ ? 7) ಆಕಾಶವಾಣಿ ರೂಪಕ , ಆಕಾಶವಾಣಿ ನಾಟಕ ಲೋಕದಲ್ಲಿ ಸಂಚರಿಸಿದ್ದೀರಾ.. 8) ವಿಜ್ಞಾನ ಸರಣಿಗಳನ್ನು , ಸರಳ ವಾಗಿ ರೂಪಿಸಿ, ದೇಶದಲ್ಲೇ ಖ್ಯಾತಿ ಪಡೆದ ಬೆಂಗಳೂರು ಆಕಾಶವಾಣಿ ಪ್ರಯೋಗಗಳು.. ಅಬ್ಬಾ....! 9) ಕೃಷಿ ಪಾಠ ಶಾಲೆಯಲ್ಲಿ ಹಸು ಕರು ಎತ್ತು ಎಮ್ಮೆ ಕೋಳಿ ಬಹುಮಾನ ಕೊಟ್ಟರು. ರೈತರಿಗೆ ಬೋರೆವೆಲ್ ತೋಡಿಸಿಕೊಟ್ಟರು. ಕೇಳಿದ್ದೀರಾ? 10) ಆಕಾಶವಾಣಿ ಚಿತ್ರಗೀತೆ ಆಧಾರಿತ ಕಾರ್ಯಕ್ರಮ ಗಳನ್ನು ಉದ್ಘೋಷಕರು ಪಾಳಿಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಅವರ ಅನಿಸಿಕೆಗಳು ಮನದ ಮಾತು ಕೇಳಿದ್ದೀರಾ.... ............ ಇಂಥಹ ಹತ್ತು ಹಲವು ವಿಚಾರಗಳನ್ನು ಹೊತ್ತು ತರುತ್ತಿದೆ, "ನುಡಿತೇರನೆಳೆದವರು, ಬಾನುಲಿ ಕಲಿಗಳು" ಪುಸ್ತಕ. 1940 ರಿಂದ 1990 ರ ಅವಧಿಯಲ್ಲಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ದಿಗ್ಗಜ ಪ್ರಸಾರಕರ ವ್ಯಕ್ತಿಚಿತ್ರಗಳನ್ನು ಪರಿಚಯಿಸುತ್ತಿದೆ "ನುಡಿ ತೇರ ನೆಳೆದವರು" ಪುಸ್ತಕ. ಕರ್ನಾಟಕದ ಆಕಾಶವಾಣಿ ಕೇಂದ್ರಗಳಲ್ಲಿ ನಡೆದ ಕೆಲಸಗಳ ಸ್ಥೂಲ ದಾಖಲೀಕರಣ! ಕರುನಾಡ ಕೊರಳಿನ ಕಥೆಗಳು ! ! ಪ್ರಯೋಗಗಳು, ಪರಿಕಲ್ಪನೆಗಳು !! ಇಂಥ ಒಂದು ಪ್ರಯತ್ನ , ದೇಶದಲ್ಲಿ ಮೊದಲು ಎಂದಿದ್ದಾರೆ ಹಲವಾರು ಪರಿಣತರು. ಬನ್ನಿ, ನುಡಿ ತೇರ ಎಳೆದ ದಿಗ್ಗಜರಿಗೆ ನಮಸ್ಕಾರ ಮಾಡೋಣ. ಕನ್ನಡ ಭಾಷೆಗೆ , ಸಂಗೀತ , ಸಾಂಸ್ಕೃತಿಕ ಲೋಕಕ್ಕೆ ಆಕಾಶವಾಣಿ ನೀಡಿದ ಕೊಡುಗೆಗಳನ್ನು ಸ್ಮರಿಸೋಣ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.