ಹೆಚ್ಚುವರಿ ಮಾಹಿತಿ
ವಿವರಣೆ
ಗ್ರಾಮ ಜಗತ್ತಿನಿಂದ ನಗರದ ಕಾರ್ಪೋರೇಟ್ ಜಗತ್ತಿನ ಕಡೆಗೆ ವಲಸೆ ಹೋಗಿರುವ ಸಂವೇದನಾಶೀಲ ಲೇಖಕರಿಂದ ಸಾಹಿತ್ಯ ಕಣಜಕ್ಕೆ ಹೊಸ ಫಸಲು ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ. ಕವಿ ಕತೆಗಾರರಾಗಿ ಈಗಾಗಲೇ ನಮಗೆಲ್ಲ ಪರಿಚಿತರಾಗಿರುವ ಆನಂದ ಕುಂಚನೂರ ಅವರು ತಮ್ಮ 'ನಿರೂಪ' ಎನ್ನುವ ಕಥಾ ಸಂಕಲನದ ಮೂಲಕ ಹೊಸ ಫಸಲನ್ನು ಒಕ್ಕಿ ತಂದಿದ್ದಾರೆ. ಇಲ್ಲಿನ ಫಸಲು ಈ ಹಿಂದೆ ನಮ್ಮ ಕಥಾಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗ್ರಾಮ ನಗರಗಳ ಮುಖಾಮುಖಿಯ ನಿರೂಪಣೆಗಿಂತ ಹೆಚ್ಚು ಆಳವೂ ಸಂಕೀರ್ಣವೂ ಆಗಿ ದಾಖಲಾಗುತ್ತಿದೆ. ಗ್ರಾಮದ ಸಹಜಕ್ಕೆ ನಗರದ ಕೃತಕತೆಯನ್ನು ಮುಖಾಮುಖಿಯಾಗಿಸುವ ಮಿತಿಯನ್ನು ದಾಟಿ ಎರಡೂ ಲೋಕಗಳ ವಾಸ್ತವದ ಚಹರೆಗಳನ್ನು ಅನಾವರಣಗೊಳಿಸುವ ಕೆಲಸವನ್ನು ಆನಂದ ಕುಂಚನೂರ ಅವರು ಇಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಅವರು ಗ್ರಾಮ ಹಾಗೂ ನಗರಗಳನ್ನು binary opposition ಗಳನ್ನಾಗಿ ಮಾತ್ರ ಗ್ರಹಿಸದೆ ಎರಡರಲ್ಲೂ ನಿರಂತರವಾಗಿ ಚಲನಶೀಲವಾಗಿರುವ ಪಲ್ಲಟಗಳನ್ನು ಮತ್ತು ಅವು ಸೃಷ್ಟಿಸುವ ಚಿಕ್ಕಟ್ಟುಗಳನ್ನು ಪಾತಾಳಗರಡಿ ಹಾಕಿ ಅವರು ಹೆಕ್ಕಿ ತೆಗೆದಿದ್ದಾರೆ.
ಕರ್ನಾಟಕದ ಮೆಂಚೆಸ್ಟರ್ ಎಂದು ಹೆಸರಾಗಿರುವ ಮಗ್ಗಗಳ ಅರೆನಗರ ರಬಕವಿ-ಬನಹಟ್ಟಿಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಔಷಧಿ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ ಅವರು ಎರಡೂ ಲೋಕಗಳನ್ನು ನಿಷ್ಪಕ್ಷಪಾತದ ಕಣ್ಣುಗಳಿಂದ ಗ್ರಹಿಸಿ ಈ ಸಂಕಲನದ ಅಷ್ಟೂ ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಆನಂದ ಕುಂಚನೂರ ಅವರು ರಬಕವಿ-ಬನಹಳ್ಳಿ ಪರಿಸರದ ದ್ರಾಕ್ಷಾಣಿ ಹಾಗೂ ಬೆಂಗಳೂರು ಪರಿಸರದ ಮಧುರಾ ಇಬ್ಬರ ಸಂಕಟಗಳನ್ನು ನಿರ್ಮಮಕಾರದಿಂದ ಚಿತ್ರಿಸಿರುವುದನ್ನು ಗಮನಿಸಿದರೆ ಹೊಸ ಕಥಾಯಾನದಲ್ಲಿ ಅವರು ಗಟ್ಟಿಯಾದ ಹೆಜ್ಜೆಗಳನ್ನಿಡುತ್ತಿರವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇಲ್ಲಿನ ಕಥಾನಿರೂಪಣೆ ಆಕರ್ಷಕವಾಗಿದೆ. ಅತಿಯಾದ ತಂತ್ರಗಾರಿಕೆಯ ಭಾರದಿಂದ ಇಲ್ಲಿನ ಕತೆಗಳು ಬಳಲುವುದಿಲ್ಲ. ಗದ್ಯ ಹಾಗೂ ಕಾವ್ಯ ಎರಡರ ಶಕ್ತಿಯನ್ನು ಹದವರಿತು ಆಹ್ವಾನಿಸಿಕೊಂಡಿರುವ ಇಲ್ಲಿನ ಭಾಷೆ ಹೃದ್ಯವಾಗಿದೆ.
ಚನ್ನಪ್ಪ ಕಟ್ಟಿ ಕತೆಗಾರರು, ಸಿಂದಗಿ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.