ನಾನು ನಿಮ್ಮ ಬ್ರಾಹ್ಮಾನಂದಂ | Nanu Nimma Brahmanandam (ಜೀವನಚರಿತ್ರೆ)

Rs. 337.00
Sale price  Rs. 337.00 ಸಾಮಾನ್ಯ ಬೆಲೆ  Rs. 375.00
ಉತ್ಪನ್ನದ ಮಾಹಿತಿಗೆ ತೆರಳಿ
ನಾನು ನಿಮ್ಮ ಬ್ರಾಹ್ಮಾನಂದಂ | Nanu Nimma Brahmanandam (ಜೀವನಚರಿತ್ರೆ)

ನಾನು ನಿಮ್ಮ ಬ್ರಾಹ್ಮಾನಂದಂ | Nanu Nimma Brahmanandam (ಜೀವನಚರಿತ್ರೆ)

Rs. 337.00
Sale price  Rs. 337.00 ಸಾಮಾನ್ಯ ಬೆಲೆ  Rs. 375.00

ಮಾರಾಟಗಾರರು : BEETLE BOOK SHOP

ಕೆಲವೊಮ್ಮೆ ಮನುಷ್ಯನ ಮುಖವೇ ಒಂದು ಜೀವಂತ ಭೂಪಟ. ಅಲ್ಲಿ ಸಾವಿರಾರು ಹಾದಿಗಳು, ಗಲ್ಲಿಗಳು, ನೂರಾರು ಕವಲುಗಳು ಮತ್ತು ನಗುವಿನ ತಿರುವುಗಳು. ತೆಲುಗು ಬೆಳ್ಳಿತೆರೆಯ ಮೇಲೆ ಬ್ರಹ್ಮಾನಂದಂ ಎಂಬ ಮಾಂತ್ರಿಕ ಪ್ರತ್ಯಕ್ಷನಾದರೆ ಸಾಕು, ನಮ್ಮೊಳಗೆ ಕಚಗುಳಿಯ ಸಾವಿರಾರು ರೂಪಗಳು ಅನಾವರಣಗೊಳ್ಳುತ್ತವೆ. ಬ್ರಹ್ಮಾನಂದಂ ಎಂದರೆ ಕೇವಲ ಅಬ್ಬರದ ನಗುವಲ್ಲ. ಅದು ನಮ್ಮ ಬೇಸರ, ವಿಷಾದ, ಮಬ್ಬಿನ ಮಧ್ಯೆ ಅರಳುವ ಒಂದು ಸಣ್ಣ ಆಶಾವಾದ. ಅವರ ಕಣ್ಣಿನ ಒಂದು ಮಿಟುಕು, ಹುಬ್ಬಿನ ಒಂದು ಏರಿಳಿತ ಅಥವಾ ತುಟಿಗಳ ಆ ವಿಚಿತ್ರ ವಕ್ರತೆ-ಇವೆಲ್ಲವೂ ಶಬ್ದಗಳಿಲ್ಲದ ಕವಿತೆಗಳಂತೆ. ಸೋಲಿನಲ್ಲೂ ಒಂದು ಸೊಬಗಿದೆ ಎಂದು ತೋರಿಸಿಕೊಟ್ಟ ಈ ಕಲಾವಿದ, ಸೋಲನ್ನೇ ಅತಿ ದೊಡ್ಡ ಹಾಸ್ಯವನ್ನಾಗಿ ಪರಿವರ್ತಿಸಿ ಗೆದ್ದವರು. ಈ ಪುಸ್ತಕವು ಕೇವಲ ಒಬ್ಬ ನಟನ ಬದುಕಿನ ದಾಖಲೆಯಲ್ಲ. ಇದು ಅನಾಮಿಕ ಮೌನವೊಂದು ಅಭಿನಯದ ಮೂಲಕ ಹೇಗೆ ಅಸಂಖ್ಯಾತ ಜನರ ಕ್ಷಣಗಳನ್ನು ಬೆಳಗಬಲ್ಲದು ಎಂಬುದರ ಕಥನ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಮುಖವನ್ನೇ ರಂಗಭೂಮಿಯಾಗಿಸಿಕೊಂಡು ಜಗತ್ತನ್ನು ಗೆದ್ದ ಪರಿಯಿದು. ತೆಲುಗು ಚಿತ್ರರಂಗದ ಈ ಅಪ್ರತಿಮ ಪ್ರತಿಭೆ ಕೇವಲ ನಗಿಸಲಿಲ್ಲ. ಮನುಷ್ಯನ ಅಸಹಾಯಕತೆ, ಹತಾಶೆ ಮತ್ತು ಮುಗ್ಧತೆಯನ್ನು ಹೇಗೆ ಸಂಭ್ರಮಿಸಬೇಕು ಎಂಬುದನ್ನು ಕಲಿಸಿಕೊಟ್ಟರು. ಬ್ರಹ್ಮಾನಂದಂ ತೆರೆಯ ಮೇಲೆ ಬಂದಾಗಲೆಲ್ಲ ನಮ್ಮ ನೆಚ್ಚಿನ ಗೆಳೆಯ ಬಂದಂಥ ಆಪ್ತತೆ. ಅವರ ವಿಶಿಷ್ಟವಾದ ನಡಿಗೆ, ಅನಿರೀಕ್ಷಿತವಾಗಿ ಕುಸಿಯುವ, ಹುಯ್ದಾಡುವ ಮುಖಭಾವಗಳು-ಇವೆಲ್ಲವೂ ನಮ್ಮೊಳಗಿನ ಭಾರವನ್ನು ನಗುವಿನ ಮೂಲಕವೇ ಕರಗಿಸಿಬಿಡುತ್ತವೆ. ಈ ಕೃತಿಯಲ್ಲಿ ಬ್ರಹ್ಮಾನಂದಂ ತಮ್ಮ ವೃತ್ತಿಜೀವನದ ಮೈಲಿಗಲ್ಲುಗಳನ್ನಷ್ಟೇ ಪಟ್ಟಿ ಮಾಡಿಲ್ಲ. ಬದಲಿಗೆ, ಒಬ್ಬ ಸಾಮಾನ್ಯ ಶಿಕ್ಷಕನಾಗಿದ್ದವ ತೆಲುಗು ಚಿತ್ರರಂಗದ ಅನಿವಾರ್ಯ ಶಕ್ತಿಯಾಗಿ ಬೆಳೆದ ಪರಿಯನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಸಾವಿರಾರು ಪಾತ್ರಗಳ ಮೂಲಕ ಬ್ರಹ್ಮಾನಂದಂ ನಮಗೆ ನೀಡಿದ 'ಕಾಮಿಡಿ ಟೈಮಿಂಗ್'ನ ಹಿಂದೆ ಅಡಗಿರುವ ಅವರ ಏಕಾಂತದ ಸಾಧನೆ ಮತ್ತು ಜೀವನಪ್ರೀತಿ ಇಲ್ಲಿ ಹರಳುಗಟ್ಟಿದೆ. ಬದುಕು ಕೆಲವೊಮ್ಮೆ ಗಂಭೀರವಾದ ನಾಟಕದಂತೆ ಕಂಡರೂ, ಅದರ ನಡುವೆ ಬ್ರಹ್ಮಾನಂದಂ ತೆರೆ ಮೇಲೆ ಬಂದು ಹೋದರೆ ಸಾಕು, ಭಾರವಾದ ಮನಸ್ಸು ಹಗುರವಾಗುತ್ತದೆ. ಈ ಪುಸ್ತಕವನ್ನು ಓದುವುದು ಎಂದರೆ ಅಂಥದೇ ಒಂದು ಹಗುರ ಭಾವಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು. ಇಲ್ಲಿ ಬಣ್ಣದ ಮಾತುಗಳಿಲ್ಲ, ಬದಲಿಗೆ ಬಣ್ಣದ ಲೋಕದಲ್ಲಿ ಅಪ್ಪಟ ಮನುಷ್ಯನಾಗಿ ಉಳಿದ ಕಲಾವಿದನೊಬ್ಬನ ಅಂತರಂಗದ ಮಿಡಿತವಿದೆ. ನಗಿಸುವ ಜೀವಿಯ ಬದುಕಿನ ಕಟು-ಕಹಿ ಸತ್ಯಗಳಿವೆ. ಹಾಸ್ಯನಟನಾಗಿ ತಾರಾಮೌಲ್ಯ ಗಿಟ್ಟಿಸಿಕೊಂಡ ಕಲಾವಿದನ ಮೇರು ಸಾಧನೆಯ ಮೆರವಣಿಗೆಯನ್ನು ಇಲ್ಲಿ ಕಾಣಬಹುದು.

ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕ, ವಿಶ್ವವಾಣಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು