ಹೆಚ್ಚುವರಿ ಮಾಹಿತಿ
ವಿವರಣೆ
ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ತಲಸ್ಪರ್ಶಿಯಾಗಿ ಶೋಧಿಸುವ ಜಾಯಮಾನ ಬಿ.ಜಿ.ಎಲ್, ಸ್ವಾಮಿಯವರದು, ಪ್ರಧಾನ ಅಧ್ಯಯನ
ಕ್ಷೇತ್ರವಾದ ಸಸ್ಯವಿಜ್ಞಾನದಲ್ಲಂತೂ ಅವರದು ಅಚ್ಚಳಿಯದ ಹೆಜ್ಜೆಗುರುತು. ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಹೆಗ್ಗಳಿಕೆ ಇವರದು. ಸಸ್ಯವಿಜ್ಞಾನದ ಸಂಶೋಧಕರು ಕೆಲವು ಸಸ್ಯ ಪ್ರಭೇದಗಳಿಗೆ ಸ್ವಾಮಿಯವರ ಹೆಸರನ್ನು ನೀಡಿ ಸ್ಮರಿಸಿದ್ದಾರೆ. ಕನ್ನಡದಲ್ಲಿ ಅವರು ಮಾಡಿರುವ ಕೆಲಸ ಅಷ್ಟೇ ಅಗಾಧವಾದುದು. ಸೆಂಟ್ರಲ್ ಕಾಲೇಜಿನ ದಿನಗಳ ನೆನಪನ್ನು ಹಸಿರಾಗಿಸುವ 'ಪಂಚಕಲಶಗೋಪರ', ಅಧಿಕಾರದ ಕೊರಳು ಪಟ್ಟಿಯನ್ನು ಕಟ್ಟಿಕೊಂಡವರೊಂದಿಗೆ ಹೆಣಗಾಡಿ ಪಡೆದ ಅನುಭವಗಳನ್ನು ನಿರೂಪಿಸುವ 'ಕಾಲೇಜುರಂಗ' ಮತ್ತು 'ಕಾಲೇಜುತರಂಗ', ಸಸ್ಯವಿಜ್ಞಾನದ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುವ 'ದೌರ್ಗಂಧಿಕಾಪಹರಣ', 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟ 'ಹಸುರು ಹೊನ್ನು ಮುಂತಾದ ಕೃತಿಗಳು ಸ್ವಾಮಿಯವರ ಪ್ರತಿಭೆಗೆ ದ್ಯೋತಕವಾಗಿದೆ. ಈ ಕೃತಿಗಳು ಕನ್ನಡಕ್ಕೆ ಹೊಸ ಪರಿಭಾಷೆಯನ್ನು ತಂದುಕೊಟ್ಟಿವೆ. ಈಗಲೂ ಅವುಗಳಿಗೆ ಅಪಾರ ಬೇಡಿಕೆ ಇದೆ.
ಕನ್ನಡ ನುಡಿ, ಪ್ರಬುದ್ಧ ಕರ್ನಾಟಕ, ಜೀವನ, ಕೊರವಂಜಿ, ಮಾನವಿಕ ಕರ್ಣಾಟಕ, ಸಾಧನೆ, ಪ್ರಜಾವಾಣಿ, ಜನಪ್ರಿಯ ವಿಜ್ಞಾನ ಮುಂತಾದ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸ್ವಾಮಿಯವರ ವಿವಿಧ ಬಗೆಯ ಕನ್ನಡ ಬರಹಗಳು ಪ್ರಕಟವಾಗಿದ್ದವು. ಈ ಪೈಕಿ ಕೆಲವು ಲೇಖನಗಳು ಸಸ್ಯಮರಾಣ ಮತ್ತು ಸಸ್ಯಜೀವಿ – ಪ್ರಾಣಿಜೀವಿ ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಉಳಿದವನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಮೂಲಕ ಅವರ ಜನ್ಮಶತಾಬ್ದಯ ಸಂದರ್ಭದಲ್ಲಿ ಸ್ವಾಮಿಯವರಿಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ನಿರ್ಧರಿಸಿದುದರ ಫಲಶ್ರುತಿ ನಿಮ್ಮ ಕೈಯಲ್ಲಿದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.