ಹೆಚ್ಚುವರಿ ಮಾಹಿತಿ
ವಿವರಣೆ
ಒಬ್ಬ ಕಥೆಗಾರ, ಅವನೊಳಗೊಬ್ಬ ಚಿತ್ರಗಾರ. ಅವನ ಕಥೆಗಳ ಅಪೂರ್ವ ಅಭಿಮಾನಿ ಚಾರುಲತಾಳಿಂದ ತನ್ನ ಪೋರ್ಟ್ ರೇಟ್ ಮಾಡಿಕೊಡುವಂತೆ ಬರುವ ಕೋರಿಕೆ. ಅವಳ ವಿಶಿಷ್ಟ ವ್ಯಕ್ತಿತ್ವ ಹಾಗೂ ತನ್ನ ಕಥನಕ್ರಮದ ಮೇಲೆ ಅವಳ ಅಭಿಪ್ರಾಯ, ಸಲಹೆಗಳಿಂದಾದ ಸತ್ಪರಿಣಾಮಗಳ ದೆಸೆಯಿಂದ ಮೋಡಿಗೊಳಗಾದವನಂತೆ ಅವಳನ್ನು ಕಾಣಲು ಅತೀವ ಆತುರದಲ್ಲಿ ಅವಳೂರಿನೆಡೆಗೆ ಹೊರಡುವ ಕಥೆಗಾರ, ಮಳೆ ಕಾಡೀತೆಂದು ಅವಳು ಎಚ್ಚರಿಸಿದರೂ ಲೆಕ್ಕಿಸದೇ ಬೈಕ್ ನಲ್ಲಿ ಹೊರಟು, ಅವಳೆಣಿಕೆಯಂತೇ ಮಳೆಯ ಆರ್ಭಟಕ್ಕೆ ಸಿಕ್ಕಿ ಒಬ್ಬಳು ಅಜ್ಜಿಯ ಹೊಟೇಲಿಗೆ ಬರುವುದು, ಅವಳ ಸೊಸೆ ರತ್ನಾಳ ಕ್ಷಣಕ್ಷಣಕ್ಕೂ ಆಸಕ್ತಿ ಕೆರಳಿಸುವ ವಿಶೇಷ ವ್ಯಕ್ತಿತ್ವ.. ಅಚಾನಕ್ಕಾಗಿ ಅವನಿಗೆ ಒದಗಿಬರುವ ಇವರಿಬ್ಬರ ಮುತುವರ್ಜಿಯೊಳಗೆ ಅವನ ಮುಂದಿನ ಪಯಣವನ್ನು ತಡೆಹಿಡಿಯುವಂಥ ಅವರಿಬ್ಬರ ವರ್ತನೆಗಳು, ಚಾರುಲತಾಳನ್ನು ನೋಡಹೋಗುವುದಕ್ಕೆ ಅಡ್ಡಿಯೊಡ್ಡುತ್ತಿದ್ದಾರೇನೋ ಅನಿಸಿ ಕಾಡುವ ಗೊಂದಲದಲ್ಲೇ ಸಾಗುವ ಆ ತುಂಡು ದಿನ, ಮತ್ತೊಂದು ಪೂರಾ ರಾತ್ರಿ, ಅಷ್ಟರಲ್ಲಿ ಅಜ್ಜಿ ಹೇಳುವ ಮಾಂತ್ರಿಕ ಕಥೆಯೊಳಗೆ ಒಂದೂರಿನ ರಾಜಕುಮಾರ ಅಲೆಯರಸ ಇನ್ನೊಂದೂರಿನ ಹೆಣ್ಣು ಮಲೆಯರಸಿ... ಜೀವ ತಳೆದಂತೆ ಮಾತಾಡುವ ಮಳೆ, ಗಾಳಿ, ನೀರು.
ಕಥೆಗಾರನ ಪಯಣದುದ್ದಕ್ಕೂ ಪದೇಪದೇ ಕೇಳಿಸುವ ನಿಗೂಢ ಆರ್ತನಾದ...! ಚಾರುಲತಾ ಪದೇಪದೇ ಹೇಳುತ್ತಿದ್ದ ಈರತ್ತಯ್ಯನ ಕಟ್ಟೆ, ಅದರಾಚೆಯ ಮಲೆ, ಅದರೀಚೆಯ ಮನೆ... ಕಥೆಗಾರನೊಳಗಿನ ಚಿತ್ರಕಾರನಿಗೆ ಸಿಕ್ಕ ಚಿತ್ರ...
“ಒಳ್ಳೆಯ ಕಥೆಗಾರಿಕೆ ಅಂದರೆ ನಮ್ಮದಲ್ಲದ ಭಾವನೆಯನ್ನ, ಅನುಭವವನ್ನ, ಒಟ್ಟಾರೆ ಬದುಕನ್ನ ಅದು ನಮ್ಮದು ಅನ್ನುವಷ್ಟೇ ಸಹಜವಾಗಿ ಚಿತ್ರಿಸೋದು!" ಈ ಮಾತನ್ನು ಇದೇ ಕಥೆಯೊಳಗಿನ ಕಥೆಗಾರನಿಗೆ ಅವನ ಅಭಿಮಾನಿಯೊಬ್ಬಳ ಮೂಲಕ ಹೇಳಿಸುವ ನಮ್ಮ ಪ್ರೇಮಶೇಖರ ಅದನ್ನು "ಮಳೆ" ಕಾದಂಬರಿ ಹೆಣೆಯುವಲ್ಲಿ ಅಕ್ಷರಶಃ ಪಾಲಿಸಿದ್ದಾರೆ. ಹಾಗೇ "ಹೆಣ್ಣೆಂದರೆ ಪ್ರಕೃತಿಯ ಹಾಗೆ.. ಮಿಸ್ಟರಿ, ಎನಿಗ್ಯಾ, ರಿಡಲ್.." ಅನ್ನುತ್ತಾ ಅದಕ್ಕೆ ಸಾಕ್ಷಿಯಾಗಿ ಮಾಂತ್ರಿಕ ಕಥೆ ಹೇಳುವ ಸುಮಿತ್ರಜ್ಞೆಯನ್ನೂ, ಕಥೆಗಾರನದೇ ಕೃತಿಗಳನ್ನು ಎದೆಗೊತ್ತಿ ನಿಂತು ಅವನನ್ನೇ ಮಂತ್ರಮುಗ್ಧಗೊಳಿಸುವ ರತ್ನಾಳನ್ನೂ, ನೀರ ಮೇಲೆ ತೇಲುವ ಪ್ರತಿಬಿಂಬದಲ್ಲಿ ಪಾದವೂರಿದಂತೇ ಆಗಸದ ಚಂದ್ರಬಿಂಬವನ್ನು ಮುಡಿಗೇರಿಸಿಕೊಂಡು ನಿಲ್ಲುವ ಮಾಯಾರೂಪವನ್ನೂ ಕಣ್ಣಿಗೆ ಕಟ್ಟುವ ಹಾಗೆ ನಮ್ಮೆದುರು ಕಡೆದು ನಿಲ್ಲಿಸಿಬಿಡುತ್ತಾರೆ ನಮ್ಮ ಕಥೆಗಾರ ಪ್ರೇಮ್ ಸರ್
ಹಲವಾರು ಮಜಲುಗಳಲ್ಲಿ ಆಸಕ್ತಿ ಕೆರಳಿಸುತ್ತಾ ಗಮ್ಯದ ಕಡೆಗೆ ಸಾಗುವ ಈ "ಮಳೆ"ಯ ಪಯಣದಲ್ಲಿ ಬನ್ನಿ, ನೀವೂ ಪಾಲ್ಗೊಳ್ಳಿ ಅಂತ ಆಹ್ವಾನಿಸುತ್ತಾ...
- ಅನುರಾಧಾ ಪಿ.ಎಸ್
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.