ಹೆಚ್ಚುವರಿ ಮಾಹಿತಿ
ವಿವರಣೆ
ಪ್ರತಿಷ್ಠಿತ ಸಮಾಜದ ಹುಸಿ ಮೌಲ್ಯವನ್ನು, ಗಾಂಭೀರ್ಯವನ್ನು ಚುಚ್ಚಿ ವಿಡಂಬಿಸಿ ಘಾಸಿಗೊಳಿಸುವುದರಲ್ಲಿ ನಿಷ್ಣಾತರಾಗಿರುವ ಕುಂವೀಯವರು ಕನ್ನಡ ಕಾದಂಬರಿ ಲೋಕಕ್ಕೆ ವಿನೂತನ ತಿರುವು ನೀಡಿದ ಅಪೂರ್ವ ಕತೆಗಾರ.
ಪ್ರತಿ ವರ್ಷ ಒಂದು ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುತ್ತಿರುವ ಅವರು ನಿರ್ಲಕ್ಷಿತ ಸಮುದಾಯಗಳ ಮಾನಾವಮಾನಗಳಿಗೆ ದನಿ ಕೊಟ್ಟು ಮಡಿವಂತರನ್ನು ಗೇಲಿ ಮಾಡಿ ವಿಡಂಬನೆಗೆ ಗುರಿ ಮಾಡುವ ಮೂಲಕ ಸಾಮಾಜಿಕವಾಗಿ ಪ್ರಸ್ತುತವೆನ್ನಿಸಿದ್ದಾರೆ.
ಅತಿ ರಂಜಿತ ವರ್ಣನಾ ಶೈಲಿ ಮತ್ತು ಪಾತ್ರವನ್ನು ಭೂತಗನ್ನಡಿಯಲ್ಲಿಟ್ಟು ಹಿಗ್ಗಿಸಿ ನೋಡುವ ಅವರ ನಿರೂಪಣೆ ಉದ್ದೇಶಪೂರ್ವಕವಾಗಿದ್ದು ವಿಡಂಬನಾತ್ಮಕ ಗುರಿ ಹೊಂದಿದೆ.
ಪ್ರಸ್ತುತ 'ಲ್ಯಾಟರೀನಾ' ವಸ್ತುವೆ ವಿಶಿಷ್ಟವಾಗಿದ್ದು ಬಹಿಷ್ಕೃತವೆನ್ನಿಸಿದ್ದನ್ನು ಎಗ್ಗಿಲ್ಲದೆ ಚರ್ಚಿಸಿ ಎಲ್ಲರನ್ನು ಗಾಬರಿಗೊಳಿಸುವಂತಿದೆ.
ಮಲವಿಸರ್ಜನೆಯಂತಹ ಸಹಜ ದೈಹಿಕ ಕ್ರಿಯೆಯನ್ನು ಮುಚ್ಚುಮರೆಯ ಅಸಹ್ಯದ ಸಂಗಾತಿಯನ್ನಾಗಿಸಿರುವ ಸಾಮಾಜಿಕ ವಾಸ್ತವವನ್ನು ವಿಡಂಬಿಸಿ ಬೃಹತ್ ಕಾದಂಬರಿಯ ವಸ್ತುವಾಗಿಸಿಕೊಂಡು ತನ್ಮೂಲಕ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾದ ರಾಜಕಾರಣಿಗಳು, ಮಠಾಧಿಪತಿಗಳು, ಪತ್ರಕರ್ತರು, ಲೇಖಕರು ಮತ್ತು ಗಾಂಧಿವಾದಿಗಳೆಲ್ಲರನ್ನೂ ಗೇಲಿ ಮಾಡಲಾಗಿದೆ.
ಹೆಗಲ ಮೇಲೆ ಮಲ ಹೊತ್ತು ಸಾಗಿಸುವ ಹೆಣ್ಣು ಮಕ್ಕಳ ಪಡಿಪಾಟಲಿಗೆ ಕನಿಕರಿಸುತ್ತಲೇ ಅವರ ಹೊಟ್ಟೆಪಾಡಿನ ಕ್ರೂರ ವಾಸ್ತವವನ್ನೂ ಮನವರಿಕೆ ಮಾಡಿಕೊಡಲಾಗಿದೆ. ಹಂದಿಗಳು, ಎಮ್ಮೆ, ಹಸು, ನಾಯಿಗಳೂ ಶುದ್ದೀಕರಣದಲ್ಲಿ ಪಾಲ್ಗೊಳ್ಳುವ ಚಿತ್ರ ನಮ್ಮ ದೇಶದ ಹುಸಿ ಪ್ರತಿಷ್ಠೆಯನ್ನು ಬಯಲು ಮಾಡುತ್ತದೆ.
ಹಾಸ್ಯ ಮತ್ತು ವಿಡಂಬನೆಯೇ ಕಾದಂಬರಿಯ ಸ್ಥಾಯಿಭಾವವೆಂಬಂತಿದ್ದರೂ, ಆಳದಲ್ಲಿ ವ್ಯವಸ್ಥೆಯ ಬಗೆಗೆ ಆಕ್ರೋಶವಿದೆ. ಹುಸಿ ಸಾಮಾಜಿಕ ಪ್ರತಿಷ್ಠೆ ಬಗೆಗೆ ತಿರಸ್ಕಾರವಿದೆ. ಮನಸ್ಸಿನಲ್ಲಿ ತುಂಬಿಕೊಂಡಿರುವ ಗಲೀಜು ಬಾಹ್ಯ ಕೊಳಕಿಗಿಂತ ಅಸಹ್ಯಕಾರಿ ಎಂಬ ಸಂದೇಶದೊಂದಿಗೆ ಕಾದಂಬರಿಗೆ ಅರ್ಥಪೂರ್ಣ ಮುಕ್ತಾಯ ದೊರಕಿಸಿಕೊಡಲಾಗಿದೆ.
* ಡಾ. ಕೆ. ಮರುಳಸಿದ್ದಪ್ಪ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.