ಲೋರ್ಕನೆಂಬ ಬೆಳಕು | ಶ್ಯಾಮಲಾ ಗುರುಪ್ರಸಾದ್ - Beetle Bookshop

ಲೋರ್ಕನೆಂಬ ಬೆಳಕು / Lorcanemba Belaku

Rs. 166.00
Sale price  Rs. 166.00 ಸಾಮಾನ್ಯ ಬೆಲೆ  Rs. 185.00
ಉತ್ಪನ್ನದ ಮಾಹಿತಿಗೆ ತೆರಳಿ
ಲೋರ್ಕನೆಂಬ ಬೆಳಕು | ಶ್ಯಾಮಲಾ ಗುರುಪ್ರಸಾದ್ - Beetle Bookshop

ಲೋರ್ಕನೆಂಬ ಬೆಳಕು / Lorcanemba Belaku

Rs. 166.00
Sale price  Rs. 166.00 ಸಾಮಾನ್ಯ ಬೆಲೆ  Rs. 185.00

ಮಾರಾಟಗಾರರು : BEETLE BOOK SHOP

A Biography of Federico Garcia Lorca 1936-39 ಸ್ಪೇನಿನ ಇತಿಹಾಸದಲ್ಲಿ ಅಂತರ್ಯುದ್ಧದ ಕಾಲ. ಸೈನ್ಯಾಧಿಕಾರಿಯಾಗಿದ್ದ ಫ್ರಾನ್ಸಿಸ್ಕೋ ಫ್ರಾಂಕೋ - ಫ್ಯಾಸಿಸ್ಟ್ ಸರ್ವಾಧಿಕಾರಿ, ತನ್ನ ದಬ್ಬಾಳಿಕೆಯಲ್ಲಿ ದೇಶವನ್ನು ನಲುಗಿಸಿದ್ದ, ನಡುಗಿಸಿದ್ದ. ಚುನಾವಣೆಯಲ್ಲಿ ಗೆದ್ದಿದ್ದ ರಿಪಬ್ಲಿಕನ್ನರಿಗೆ ಅಧಿಕಾರ ಕೂಡದೆಂದು ಚಿತ್ರಹಿಂಸೆಯ ಆಗರವನ್ನಾಗಿಸಿದ್ದ ನಂತರ ಹಲವು ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ಮೆರೆದಿದ್ದ. 'ಮೋಹಕ ಪುಷ್ಪ' ಎಂಬ ಅಡ್ಡ ಹೆಸರನ್ನು ಪಡೆದ ಸ್ಪೇನಿನ ಕಮ್ಯುನಿಸ್ಟ್ ಪಕ್ಷದ ನಾಯಕಿ ಡೊಲೊರೆಸ್ ಇಬುರಿ- 'ಕಾಲುಗಳ ಮೇಲೆ ನಿಂತು ಪ್ರಾಣ ಕೊಡುತ್ತೇನೆ, ಮಂಡಿಯೂರಿ ಜೀವಿಸುವುದಿಲ್ಲ' ಎಂಬ ಕ್ರಾಂತಿಕಾರಕ ಸಂದೇಶವನ್ನು ನೀಡುತ್ತಾಳೆ. ಅಂತೆಯೇ ಹಲವು ದೇಶಗಳ ಕ್ರಾಂತಿಕಾರಿಗಳು ಸ್ಪೇನಿನ ಅಂತರ್ಯುದ್ಧದಲ್ಲಿ ಪಾಲ್ಗೊಂಡರು. ಜೀವ ತೆತ್ತರು. ಅರ್ನೆಸ್ಟ್ ಹೆಮ್ಮಿಂಗ್, ಬ್ರಿಟನ್ನಿನ ಪತ್ರಕರ್ತ ರಾಲ್ಸ್ ಫಾಕ್ಸ್ ಹಾಗೂ ಚಿತ್ರಕಲಾ ವಿಶಾರದ ಪ್ಯಾಬ್ಲೊ ಪಿಕಾಸೋ ಪ್ರಮುಖರೆನಿಸಿಕೊಳ್ಳುತ್ತಾರೆ. ಲೋರ್ಕನು ಕವಿಯಾಗಿ, ನಾಟಕಕಾರನಾಗಿ ಜನಮನ್ನಣೆ ಗಳಿಸಿದ್ದವನು. ಅವನ ಆತ್ಮೀಯರಲ್ಲಿ ನೆರುಡನಂತಹ ಹತ್ತಾರು ಕವಿಗಳು ಸೇರಿದ್ದಾರೆ. ಲೋರ್ಕನು ಜನತೆಯ ಪರವಾಗಿ ಇದ್ದವನು, ಯುದ್ಧ ಆರಂಭಗೊಂಡ ಒಂದೂವರೆ ತಿಂಗಳಿನಲ್ಲಿಯೇ ಫ್ಯಾಸಿಸ್ಟರು ಅವನನ್ನು ಕೊಂದುಹಾಕಿದ್ದರು. ಲೋರ್ಕನ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬಂದಿರುವುದು ನಗಣ್ಯವೆನ್ನುವಷ್ಟು ಅಪರೂಪ. ಕಲಾವಿದೆ ಮತ್ತು ಬರಹಗಾರ್ತಿ ಶ್ಯಾಮಲಾ ಗುರುಪ್ರಸಾದ್ ಅವನ ಜೀವನ ಮತ್ತು ಸಾಧನೆಯ ಕುರಿತು ಅಪೂರ್ವ ಕೃತಿಯೊಂದನ್ನು ನೀಡಿದ್ದಾರೆ. ಅವನ ಕಾವ್ಯ ಮತ್ತು ನಾಟಕ ಕೃಷಿಯನ್ನು ಅನನ್ಯವಾಗಿ ಪರಿಚಯಿಸಿದ್ದಾರೆ. ಲೋರ್ಕನ ಕವನ ಮತ್ತು ನಾಟಕಗಳಿಂದ ಆಯ್ದ ಸಂಕ್ಷಿಪ್ತ ಉಲ್ಲೇಖಗಳು ಕೃತಿಯ ಉಪಯುಕ್ತತೆಯನ್ನು ಇಮ್ಮಡಿಗೊಳಿಸಿವೆ ಮತ್ತು ಅವನ ಜೀವನ ದೃಷ್ಟಿಯನ್ನು ಹಸನಾಗಿ ಪ್ರತಿಫಲಿಸಿವೆ. ಜರ್ಮನಿಗೆ ಬ್ರೆಕ್ಟ್ ಇದ್ದಂತೆ ಸ್ಪೇನಿಗೆ ಲೋರ್ಕ ಎಂದರೆ ಉತ್ತೇಕ್ಷೆಯೇನೂ ಇಲ್ಲ. ನಮ್ಮ ನಾಡಿನಲ್ಲಿ ಪ್ರಸ್ತುತ, ಲೋರ್ಕನಂಥವರ ಜನಮುಖಿ ಕಾಳಜಿ ಮತ್ತು ವಿಮೋಚನಾ ಹಾದಿಯ ಶೋಧನೆ ಅಪಾರವಾಗಿ ಅಗತ್ಯವಾಗಿದೆ. ಆ ದಿಕ್ಕಿನಲ್ಲಿ ಶ್ಯಾಮಲಾ ಅವರ ಕೃಷಿ ಪ್ರಶಸ್ತವಾಗಿದೆ, ಅನುಕರಣೀಯವಾಗಿದೆ. ಅವರಿಗೆ ಹೃತ್ತೂರ್ವಕ ವಂದನೆಗಳು. ಫ್ಯಾಸಿಸ್ಟ್ ದುರ್ದೆಸೆಯ ನಿವಾರಣೆಗೆ ಲೋರ್ಕನಂಥವರ ಮಾತು ಕೃತಿ ಪ್ರಶಸವೇ ಆಗಿರುತ್ತದೆ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು