ಹೆಚ್ಚುವರಿ ಮಾಹಿತಿ
ವಿವರಣೆ
ಕನ್ನಡ ರಂಗಭೂಮಿಯ ಇತಿಹಾಸವನ್ನು ಅಭ್ಯಾಸ ಮಾಡುವವರಿಗೆ ಇದೊಂದು ಮಹತ್ವದ ಆಕರ ಗ್ರಂಥ. ಕರ್ನಾಟಕ ರಂಗಭೂಮಿಯ ಜಾನಕಿ. ನಾಟಕ ರಂಗಭೂಮಿಯೊಡನೆ ಸಂಬಂಧ ಜಾನಪದ ರಂಗಭೂಮಿ, ವೃತ್ತಿ ರಂಗಭೂಮಿ, ವಿಲಾಸಿ ರಂಗಭೂಮಿ, ರಂಗಭೂಮಿಯ ಹಿನ್ನೋಟ, ಮುನ್ನೋಟ ಈ ಅಧ್ಯಾಯಗಳ ಮೂಲಕ ನಮ್ಮ ರಂಗಭೂಮಿಯ ಸಮಗ್ರ ಮುಖಗಳನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಈ ಕ್ಷೇತ್ರದ ತಲಸ್ಪರ್ಶಿಯಾದ ಅರಿವು, ಸಂಬಂಧಪಟ್ಟ ಆಕರಗಳ ಸಮೃದ್ಧವಾದ ಶ್ರದ್ಧಾಶೀಲ ಅಧ್ಯಯನ ವಿಮರ್ಶೆ, ಸಾಧನ ಮತ್ತು ಪರಿಣಾಮಗಳ ಸೂಕ್ಷ್ಮವೂ, ವಿಶಿಷ್ಟವೂ ಮತ್ತು ಮನನೀಯವೂ ಆದ ಚಿಂತನಗಳು ಇಲ್ಲಿ ಮೊದಲ ಬಾರಿಗೆ ಮೈವೆತ್ತಿವೆ.
ಇತಿಹಾಸದ ಜೊತೆಗೆ ರಂಗಭೂಮಿಯ ಸಾಧ್ಯತೆಗಳನ್ನು, ಸವಾಲುಗಳನ್ನು ಸಮಸ್ಯೆಗಳನ್ನು, ಪರಿಹಾರೋಪಾಯಗಳನ್ನು ಇಲ್ಲಿ ಅಗಾಧವಾದ ಮತ್ತು ಬೆರಗುಗೊಳಿಸುವ ಸಾಮಗ್ರಿಗಳ ನೆರವಿನಿಂದ ಅತ್ಯಂತ ಸಪ್ರತಿಭಾಪೂರ್ಣವಾಗಿ ಚರ್ಚಿಸಲಾಗಿದೆ. ಲೇಖಕರ ಒಳನೋಟಗಳು, ತುಂಬು ಹೊಳೆಯಂತೆ ಗಂಭೀರವಾಗಿ, ಮನೋಜ್ಞವಾಗಿ, ಹರಿಯುವ ಅಷ್ಟ ಬಂಧುರದ ಶೈಲಿ ಈ ಕ್ಷೇತ್ರದ ಪರಿಣತರಿಗೆ ಮಾತ್ರವಲ್ಲದೆ, ಆಸಕ್ತ ಸಾಮಾನ್ಯರಿಗೂ ಈ ವಿಶಿಷ್ಟ ಲೋಕದ ಪರಿಚಯವನ್ನು ಸಮರ್ಥವಾಗಿ ಮಾಡಿಕೊಡುತ್ತದೆ.
ನಮ್ಮ ಜಾನಪದ ರಂಗಭೂಮಿ ಆಧುನಿಕ ನಾಗರಿಕತೆ ಮತ್ತು ತಂತ್ರಜ್ಞಾನಗಳ ದಾಳಿಗೆ ಸಿಕ್ಕಿ, ತತ್ತರಿಸಿ ತನ್ನ ಮೂಲ ನೆಲೆ ಮತ್ತು ಸೆಲೆಗಳನ್ನು ಕಳೆದುಕೊಳ್ಳುತ್ತಿರುವ ಹಾಗೂ ಆಧುನಿಕ ರಂಗಭೂಮಿ ತನ್ನ ಕ್ರಿಯಾತ್ಮಕತೆಯನ್ನು, ಸೃಜನಶೀಲತೆಯನ್ನು ಮತ್ತು ಉತ್ಸಾಹ ಸಂಭ್ರಮಗಳನ್ನು ಕಳೆದುಕೊಳ್ಳುತ್ತಿರುವಾಗ ಈ ಕೃತಿ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೇರಣೆಯನ್ನು ನೀಡುವ ಅಂತಃಸತ್ತ್ವವನ್ನು ಒಳಗೊಂಡಿದೆ.
ಡಾ| ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷರು
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.