ಹೆಚ್ಚುವರಿ ಮಾಹಿತಿ
ವಿವರಣೆ
"ಸಂತೋಷವಾಗಿರುವ ಮತ್ತು ಶಾಂತಮನಸ್ಸಿನ ಶಿಕ್ಷಕರು ಮಾತ್ರ ಚೆನ್ನಾಗಿ ಕಲಿಸಬಲ್ಲರು'' ಎಂಬುದು ಈ ಪುಸ್ತಕದ ಮೂಲಮಂತ್ರ. ಶಿಕ್ಷಣ ಕ್ಷೇತ್ರದಲ್ಲಿ ಈಗ ವಿದ್ಯಾರ್ಥಿಗಳ ಮೇಲಿನ ಒತ್ತಡವೇ ಹೆಚ್ಚು ಚರ್ಚಿತವಾಗುತ್ತಿರುವಾಗ, ಶಿಕ್ಷಕರ ಮಾನಸಿಕ ಕ್ಷೇಮವೇ ಗುಣಮಟ್ಟದ ಶಿಕ್ಷಣಕ್ಕೆ ಅಡಿಪಾಯ ಎಂಬುದನ್ನು ಡಾ. ದೇವರಮನೆಯವರು ಮಾರ್ಮಿಕವಾಗಿ ಗುರುತಿಸಿದ್ದಾರೆ. ಮೊದಲ ಗಂಟೆ ಬಾರಿಸುವ ಮೊದಲೇ ಶಾಲೆಗೆ ಬಂದು, ಕೊನೆಯ ವಿದ್ಯಾರ್ಥಿ ಹೋದಮೇಲೂ ಶಾಲೆಯಲ್ಲಿ ಉಳಿಯುವ ಶಿಕ್ಷಕರ "ಅದೃಶ್ಯಸೇವೆ"ಯನ್ನು ಅವರು ಇಲ್ಲಿ ತುಂಬ ಸುಂದರವಾಗಿ ಚಿತ್ರಿಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ದೂರವಿಟ್ಟು ದುಡಿಯುವ ಶಿಕ್ಷಕರ ತ್ಯಾಗಕ್ಕೆ ಈ ಕೃತಿ ಕನ್ನಡಿ ಹಿಡಿದಿದೆ.
"ಕಲಿಸು ಗುರುವೇ ಕಲಿಸು'' ಕೇವಲ ಒಂದು ಕೈಪಿಡಿಯಲ್ಲ; ಅದು ಸಮಾಜದ ಬೌದ್ಧಿಕ ದಿಕ್ಸೂಚಿಯಾಗಿರುವ ಶಿಕ್ಷಕ ಸಮುದಾಯಕ್ಕೆ ಅರ್ಪಿಸುವ "ಕೃತಜ್ಞತಾ ಪತ್ರ''. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕರನ್ನು ಕೇವಲ ಸೇವೆ ನೀಡುವ ವ್ಯಕ್ತಿಗಳೆಂದು ನೋಡದೆ, ಗೌರವ ಮತ್ತು ಕೃತಜ್ಞತೆಯಿಂದ ಕಾಣಬೇಕು ಎಂಬ ಮೌಲ್ಯವನ್ನು ಈ ಗ್ರಂಥ ಎತ್ತಿ ಹಿಡಿಯುತ್ತದೆ. ನನಗೆ ವೈಯಕ್ತಿಕವಾಗಿ ಈ ಕೃತಿಯಲ್ಲಿ ತುಂಬ ಮೆಚ್ಚಿಗೆಯಾದ ಅಂಶವೊಂದಿದೆ. ಇದು ಶಿಕ್ಷರನ್ನು "ತಿದ್ದಲು'' ಹೊರಟ ಪುಸ್ತಕವಲ್ಲ; ಇದು ಅವರ ಬಗ್ಗೆ ಕಾಳಜಿ ವಹಿಸಲು ಹೊರಟ ಪುಸ್ತಕ. ಈ ಕೃತಿ ಹಲವಾರು ಶಿಕ್ಷಕರ ದಣಿವಿಗೆ ವಿಶ್ರಾಂತಿ ನೀಡಲಿ, ಮೌನದ ನೋವಿಗೆ ಸ್ಪಂದಿಸಲಿ ಮತ್ತು ಅನೇಕ ತರಗತಿಯ ಪಾಠಗಳಿಗೆ ಮೃದು ಬೆಳಕಾಗಲಿ ಎಂದು ಹಾರೈಸುತ್ತೇನೆ.
ಪ್ರಿಯ ಶಿಕ್ಷಕರೇ,
ನಿಮ್ಮ ಶಾಂತತೆಯೇ ನಿಮ್ಮ ಶಕ್ತಿ, ನಿಮ್ಮ ಸಮತೋಲನವೇ ನಿಮ್ಮ ಶಿಲ್ಪಿ, ಮಕ್ಕಳು ನಿಮ್ಮ ಪಾಠಗಳನ್ನು ಮರೆತರೂ ನಿಮ್ಮ ಮಾನವೀಯ ಸ್ಪರ್ಶವನ್ನು ಎಂದಿಗೂ ಮರೆಯುವುದಿಲ್ಲ.
ಡಾ. ಗುರುರಾಜ ಕರಜಗಿ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.