ಹೆಚ್ಚುವರಿ ಮಾಹಿತಿ
ವಿವರಣೆ
ಕನ್ನಡ ಮತ್ತು ತೆಲುಗು ಭಾಷೆಗಳು ದ್ರಾವಿಡ ಭಾಷಾ ಕುಟುಂಬದ ಚಿನ್ನದ ಗಣಿಗಳು. ಈ ಎರಡೂ ಭಾಷೆಗಳಲ್ಲಿ ಅಪಾರವಾದ ಸಂಪತ್ತಿದೆ. ಆ ಸಂಪತ್ತನ್ನು ಬಳಸಿಕೊಂಡು ಹಲವಾರು ಲೇಖಕರು, ಕಲಾವಿದರು, ಸಾಂಸ್ಕೃತಿಕ ನಾಯಕರು, ರಾಜಕಾರಣಿಗಳು ಮಾತ್ರವಲ್ಲದೆ, ಸಾಮಾನ್ಯ ಜನರೂ ಕೂಡಾ ಬೆಳೆದಿದ್ದಾರೆ, ಭಾಷೆಯನ್ನು ತಾಯಿಯಂತೆ, ದೇವತೆಯಂತೆ ಪ್ರೀತಿಸಿ, ಅದರ ಮಮಕಾರದಲ್ಲಿ ತೃಪ್ತಿ ಹೊಂದಿದ್ದಾರೆ. ಇದೇ ಕಾರಣದಿಂದ ಕುವೆಂಪು, ಡಾ. ರಾಜ್‌ಕುಮಾರ್, ಶ್ರೀಶ್ರೀ, ಎನ್ಟಿಆರ್, ನಾಗೇಶ್ವರರಾವ್ ತರಹದ ಕವಿ-ಕಲಾವಿದರು ಆಯಾ ಭಾಷಾ ವೈವಿಧ್ಯವನ್ನು ಜನಸಾಮಾನ್ಯರ ಮನಸ್ಸಿಗೆ ಇಳಿಸಿದ್ದಾರೆ.
ಈ ಎರಡೂ ಭಾಷೆಗಳು ಸಹೋದರ ಭಾಷೆಗಳೇ ಆದರೂ, ಎರಡಕ್ಕೂ ಅವುಗಳದೇ ಆದ ವಿಶಿಷ್ಟತೆಯಿದೆ, ವೈವಿಧ್ಯತೆಯಿದೆ. ಇಂತಹ ವೈವಿಧ್ಯತೆಯ ಕಾರಣಕ್ಕಾಗಿ ವಿವಿಧತೆಯಲ್ಲಿ ಏಕತೆ ಸಾಧಿಸಲು ಸಾಧ್ಯವಾಗಿದೆ. ಇಂತಹ ಏಕತೆಯನ್ನು ಸಾಧಿಸಲು ಪರಸ್ಪರ ಕೊಡುಕೊಳ್ಳುವಿಕೆಯೇ ಕಾರಣವಾಗಿದೆ. ತೆಲುಗಿನ ಪದ್ಯಗಳನ್ನೋ, ಬರಹಗಳನ್ನೋ ಕನ್ನಡಕ್ಕೆ ಭಾಷಾಂತರಿಸುವುದು, ಕನ್ನಡದ ಬರಹಗಳನ್ನು ತೆಲುಗಿಗೆ ಭಾವಾಂತರಿಸುವುದರ ಪರಿಣಾಮವಾಗಿ ಎರಡೂ ಭಾಷೆಗಳು ನಮ್ಮವೇ ಎಂಬುವಷ್ಟು ಆಪ್ತತೆಗೆ ಕಾರಣವಾಗಿದೆ.
ಅಗ್ರಹಾರಂ ನಾಗಶೇಷು ಅವರ ಕಾಡುವ ಪದ್ಯಗಳನ್ನು ಅಷ್ಟೇ ಸದೃಢವಾಗಿ ಕನ್ನಡೀಕರಿಸುವುದರ ಮೂಲಕ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರು ತೆಲುಗು ಕನ್ನಡಿಗರಿಗೆ ಆಪ್ತವಾಗುವಂತೆ ಮಾಡಿದ್ದಾರೆ. ಈ ಹಿಂದೆ ಅನೇಕ ಕವಿಗಳು ತೆಲುಗಿನ ವಿಪ್ಲವ ಪದ್ಯಗಳನ್ನು, ಕ್ರಾಂತಿಕಾರಿ ಕೃತಿಗಳನ್ನು ಕನ್ನಡಕ್ಕೆ ತಂದಿದ್ದರೂ, ಚಿನ್ನುಪ್ರಕಾಶ್ ಅವರ “ಕಾಲದ ಜೊತೆಗೆ ನಾನೂ..." ಎಂಬ ಕೃತಿಯು ತನ್ನ ವಿಶಿಷ್ಟ ಲಯ, ವಿನ್ಯಾಸದಿಂದ ಓದುಗರಿಗೆ ಬಹಳಷ್ಟು ಕಾಲ ಕಾಡಲಿದೆ. ಸುಮ್ಮನೆ ಭಾವಾಂತರವನ್ನೋ, ಭಾಷಾಂತರವನ್ನೋ ಚಿನ್ನುಪ್ರಕಾಶ್ ಅವರು ಮಾಡದೆ, ಓದುಗರ ಹೃದಯಕ್ಕೆ ಹತ್ತಿರವಾಗುವ ರೀತಿಯಲ್ಲಿ ತೆಲುಗಿನ ಪದ್ಯಗಳನ್ನು ಕನ್ನಡದ್ದೇ ಅನಿಸುವಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ಮಹತ್ತರವಾದ ಪದ್ಯಗಳನ್ನು ಬರೆದ ಮೂಲ ಕವಿ ಮತ್ತು ಅವುಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟ ಅನುವಾದಕ ಇಬ್ಬರೂ ಅಭಿನಂದನೆಗೆ ಅರ್ಹರು.
-ವಿ.ಆರ್.ಕಾರ್ಪೆಂಟರ್
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.