ಹೆಚ್ಚುವರಿ ಮಾಹಿತಿ
ವಿವರಣೆ
ಲ್ಯಾಟಿನ್ ಅಮೆರಿಕದ ಭಾಗವಾದ ಚಿಲಿ ದೇಶದ ಇಸಬೆಲ್ ಆಯೆಂದೆ ವಿಶ್ವಮಾನ್ಯ ಲೇಖಕಿ, ಸ್ತ್ರೀವಾದಿ, ಮಹಿಳಾ ಚಳುವಳಿಗಳ ಸಂಘಟಕಿ ಮತ್ತು ತಮ್ಮ ಇಳಿ ವಯಸ್ಸಿನಲ್ಲಿಯೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿ.
'ಒಬ್ಬರ ಜೀವನ ಚರಿತ್ರೆಯನ್ನು ಬರೆಯುವುದೆಂದರೆ ದಿನಾಂಕಗಳ, ಘಟನೆಗಳ ಮತ್ತು ಸಾಧನೆಯ ಪಟ್ಟಿ, ವಾಸ್ತವದಲ್ಲಿ ನನ್ನ ಬದುಕಿನ ಮುಖ್ಯ ಸಂಗತಿಗಳು ನಡೆದದ್ದು ಹೃದಯದ ಗುಟ್ಟಿನ ಕೋಣೆಗಳಲ್ಲಿ. ಅವಕ್ಕೆ ಈ ಜೀವನ ಚರಿತ್ರೆಯಲ್ಲಿ ಸ್ಥಾನವಿಲ್ಲ. ನನ್ನ ಗಮನಾರ್ಹ ಸಾಧನೆಗಳೆಂದರೆ ನನ್ನ ಪುಸ್ತಕಗಳಲ್ಲ, ಕೆಲವರೊಂದಿಗೆ ಹಂಚಿಕೊಂಡಿರುವ ಪ್ರೀತಿ. ಅದರಲ್ಲೂ ಕುಟುಂಬದವರೊಂದಿಗೆ ಮತ್ತು ಉಳಿದವರಿಗೆ ಸಹಾಯ ಮಾಡಿರುವ ರೀತಿಯಲ್ಲಿ ಜಗತ್ತಿನಲ್ಲಿ ಎಷ್ಟೊಂದು ನೋವಿದೆ, ಒಂದಿಷ್ಟನ್ನಾದರೂ ನಿವಾರಿಸಲು ಸಾಧ್ಯವೇ ಎಂದು ಯುವತಿಯಾಗಿದ್ದಾಗ ಆಗಾಗ್ಗೆ ಹತಾಶಳಾಗುತ್ತಿದ್ದೆ. ಈಗ ಹಿಂತಿರುಗಿ ನೋಡಿದರೆ, ಕೆಲವು ದಿನಗಳು ಏನನ್ನೂ ಮಾಡಲಾಗದಿದ್ದರೂ ಆತ್ಮತೃಪ್ತಿ ಇದೆ.' ಇದು ಇಸಬೆಲ್ ಅವರದೇ ಹೇಳಿಕೆ. ಇದಕ್ಕೆ ತಕ್ಕ ಹಾಗೆಯೇ ಅವರ ಬದುಕು ಮತ್ತು ಬರಹ.
ಇಸಬೆಲ್ ನಿಜವಾದ ಅರ್ಥದಲ್ಲಿ ಜಾಗತಿಕ ಮಾನ್ಯತೆ ಪಡೆದ ಲೇಖಕಿ. ಅವರ ಇಪ್ಪತ್ತೆಂಟು ಕೃತಿಗಳು ವಿಶ್ವದ ನಲವತ್ತೆರಡು ಭಾಷೆಗಳಿಗೆ ಅನುವಾದಗೊಂಡಿವೆ. ಎಂಬತ್ತು ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಹದಿನೈದು ದೇಶಗಳಿಂದ ಅರವತ್ತಕ್ಕೂ ಹೆಚ್ಚು ಪುರಸ್ಕಾರಗಳನ್ನು ಪಡೆದಿದ್ದಾರೆ. ಹದಿನೈದು ಅಂತಾರಾಷ್ಟ್ರೀಯ ಗೌರವ ಡಾಕ್ಟರೇಟ್ಗೆ ಪಾತ್ರರಾಗಿದ್ದಾರೆ. ಇವರ ಸಾಹಿತ್ಯ ಕೃತಿಗಳು ಚಲನಚಿತ್ರಗಳಾಗಿವೆ, ನೃತ್ಯ ರೂಪಕಗಳಾಗಿವೆ, ನಾಟಕಗಳಾಗಿವೆ, ಪ್ರಪಂಚದಾದ್ಯಂತವಿರುವ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ೧೯೯೫ರಲ್ಲಿ 'ದಿ ಇಸಬೆಲ್ ಅಯೆಂದೆ ಫೌಂಡೇಶನ್' ಸ್ಥಾಪಿಸಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಹೆಣ್ಣುಮಕ್ಕಳ ಹಕ್ಕು ಮತ್ತು ಸಬಲೀಕರಣ, ಲ್ಯಾಟಿನ್ ಅಮೆರಿಕ ಮತ್ತು ಪ್ರಪಂಚದ ರಾಜಕೀಯ, ಚಿಲಿ, ಬರವಣಿಗೆ ಮತ್ತು ಸೃಜನಾತ್ಮಕ ಪ್ರಕ್ರಿಯೆ, ಅಧ್ಯಾತ್ಮ, ತಮ್ಮದೇ ಬರವಣಿಗೆ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡಿದ್ದಾರೆ.
- ಎಂ.ಆರ್. ಕಮಲ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.