ಹೆಚ್ಚುವರಿ ಮಾಹಿತಿ
ವಿವರಣೆ
ದೂರದ ಫಾಕ್ಸ್ ಕಂಪೆನಿಯವರು ಸ್ಥಾಪಿಸಿದ್ದ ಕಾಲೇಜಿನ ಹಂಗಾಮಿ ಶಿಕ್ಷಕ ನೃಪತುಂಗನಿಗೆ ಮಂಚದ ಕೆಳಗೆ ಮರಿ ಮೊಸಳೆಯಾಕಾರದ ಜೀವಿಯೊಂದು ನುಗ್ಗಿದೆ ಎಂದು ಖಾತ್ರಿಯಾಗಿ, ನಂತರ ಗೋಡೆಗಳ ಒಳಗೆಲ್ಲ ಆ ಜೀವಿಯ ಪೇಚಾಟ ಕೇಳುತ್ತದೆ. ಪಾರ ಕೇಟೋ ಮಕ್ಕಳಿಗೂ ಹಾರಲು ಕಲಿತ ನರಪಕ್ಷಿಗಳಂತೆ ವಿಕಾಸವಾಗಲು ಬೆಂಚಿನ ಮೇಲೆ ನಿಂತು ಭುಜ ಕುಣಿಸುವಂತೆ ಆಜ್ಞಾಪಿಸಿ, ಕಡೆಗೆ ಮ್ಯಾನೇಜ್‌ಮೆಂಟ್‌ನ ಶಾಪಕ್ಕೆ ಗುರಿಯಾಗುತ್ತಾನೆ. ಫೋಟೋಗ್ರಾಫರ್ ನಾಗೇಂದ್ರ ದುಡ್ಡು ಮಾಡಲು ಮುಂಬೈ ಕಡೆ ಹಾರಿ ಅಲ್ಲಿ ಗಾಂಜಾ ಚಟ ಅಂಟಿಸಿಕೊಂಡು, ಮತ್ತೆ ಇಲ್ಲಿ ಬಂದು ಸಂಸಾರ ತಾಪತ್ರಯದಿಂದ ಪಾರಾಗಲು ಹಣ ಹೊಂದಿಸಲು ಅಜ್ಞಾತ ಪ್ರೈವೇಟ್ ಸೆಕ್ಸ್ ಚಾಟಿಂಗ್ ವೆಬ್ ಸೈಟಿನಲ್ಲಿ ಹುಡುಗಿಯಂತೆ ದುಡ್ಡಿರುವ ನಡು ಮುದಿ ವಯಸ್ಸಿನ ಗಂಡಸರ ಜತೆ ಗಂಟೆಗಟ್ಟಲೆ ಲಲ್ಲೆ ಹೊಡೆಯುವ ಕಸುಬು ಶುರು ಹಚ್ಚಿಕೊಂಡ ಪರಿಣಾಮದಿಂದ ೧೯೮೪ರಿಂದಲೇ ಭೂಗತನಾಗಿದ್ದೇನೆಂದು ಹೇಳಿಕೊಳ್ಳುವ ಓರ್ವ ಅಪರಿಚಿತ ಮುದುಕನನ್ನು ಮುಖಾಮುಖಿಯಾಗಲು ಸಿದ್ಧನಾಗುತ್ತಾನೆ. ಅಲ್ಲೋರಿದಂ ಎಂಜಿನ್‌ನಲ್ಲಿ ಹೆಂಡತಿ ಜಾನಕಿಗೆ ಕ್ಲಬ್ಬಿನಲ್ಲಿ ಪರಿಚಯವಾದ ಎಲೈಟ್ ದಂಪತಿಗಳು ರಹಸ್ಯ ನರಭಕ್ಷಕರೆಂದು ತೀವ್ರವಾಗಿ ಅನ್ನಿಸುತ್ತದೆ. ರಥಬೀದಿಯಲ್ಲಿ ಭಾನುವಾರದ ದಿನ ಸುಮ್ಮನೆ ಇತ್ತ ಇಣುಕಿ ಹಾದು ಹೋಗುವ ದಾರಿಹೋಕನನ್ನು ಅಂದು ಮಾತ್ರ ಮುಚ್ಚಿರುವ 'ಮಹಾನವ' ಹೋಟೆಲಿನ ಬಿಳಿ ಸರಳುಗಳಾಚೆಗಿನ ಕತ್ತಲಲ್ಲಿ ಕೂತ ಎರಡು ಆಕೃತಿಗಳು ಮರೆಯದ ಕಣ್ಣುಗಳಲ್ಲಿ ದಿಟ್ಟಿಸುತ್ತಿರುತ್ತವೆ. ತಪ್ಪಾಗಿ ತನ್ನ ವಿಳಾಸಕ್ಕೆ ಬಂದ ಕೇಸರಿ ಬಣ್ಣದ ಲಕೋಟೆಯನ್ನು ಅದರ ನಿಜವಾದ ವಾರಸುದಾರನ ಕೈ ಸೇರಿಸಲು ಜಪ್ಪುವ ಮಳೆಯಲ್ಲಿ ಬಂದು ಸ್ವಿನ್ ಡ್ರಿಫ್ಟ್ ಬಾರ್ ಒಳಗೆ ಕೂತಿರುವ, ಆರು ತಿಂಗಳುಗಳಿಂದ ಹೆಂಡದ ಸಹವಾಸವನ್ನೇ ಬಿಟ್ಟಿರುವ ಶ್ರೀ ವತ್ಸನನ್ನು ಭೇಟಿಯಾಗುವ ಆ ಇನ್ನೊಬ್ಬ, ಗರ್ಭಿಣಿ ಹೆಂಡತಿಯ ಹೊಟ್ಟೆ ಸೀಳಿ ಬಂದು ಅಜಿ ವಿಟ್ರಫೈಡ್ ಟೈಲ್ಸ್ ಮೇಲೆಲ್ಲ ಒದ್ದಾಡುವ ರಕ್ತಸಿಕ್ತ ಆಕ್ಟೋಪಸ್ ಮರಿಗಳು ಮತ್ತು ಇದರ ಕಥೆಗಳನ್ನು ಹೇಳುತ್ತಾನೆ. ಯುವ ಕ್ರಾಂತಿಕಾರಿ ರಾಜಕಾರಣಿ ಸೂರ್ಯನಾರಾಯಣನಿಂದ ತುಂಬಾ ಇಂಪ್ರೆಸ್ ಆಗಿ ಸುಮ್‌ಸುಮ್ನೆ 'ಮುಷ್ಟಿ' ಬಿಗಿದು 'ಹೂಂ' ಎಂದು ನಿರ್ಧಾರ ಮಾಡಿದಂತೆ, Gen Z ಜೂಪರ್ ಕ್ಲಾಸ್ ಇಲ್ಲದಂತೆ ಡಾರ್ಕ್ ವೆಬ್‌ನಿಂದ ಉದ್ಭವವಾದ ಅಶರೀರವಾಣಿಯ ಕೈಗೊಂಬೆಯಾಗುತ್ತಾಳೆ. ಹಳೆ ಸರಸೀಪುರದಿಂದ ವಲಸೆ ಬಂದು ಮಂಗಳೂರಿಗೆ ಹತ್ತಿರ ಇರುವ ಕುಗ್ರಾಮದಲ್ಲಿ ಸೆಟ್ಲ್ ಆದ ಸಿದ್ದಪ್ಪನ ಅಕ್ಷರ ಮಗ, ಮಂದಬುದ್ಧಿ ಅಂಗರಾಜುವಿಗೆ Gnosticism ರುಚಿ ಹತ್ತಿಸಿಕೊಂಡಿದ್ದ ವಿಚಿತ್ರ ಸ್ವಭಾವದ ಪಾದ್ರಿಯ ಬಗ್ಗೆ ವಿಪರೀತ ಆಸಕ್ತಿ ಮೂಡಿದ್ದರಿಂದಲೋ ಏನೋ ಪ್ರವಾಹ ತುಂಬಿದ ನದಿಯ ಮೇಲೆ ಹೆಂಗಸಂತೆ ಉದ್ದವಾದ ಕೂದಲನ್ನು ಹೊಂದಿರುವ ಕುದುರೆಯನ್ನು ಸಿಂಹದ ಉಗುರುಗಳಿದ್ದ ಜೀವಿ ಚಲಾಯಿಸುತ್ತಿರುವ ದೃಶ್ಯದ ದರ್ಶನವಾಗುತ್ತದೆ. ಕುಡಿತದ ಚಟವಿದ್ದ ಒಬ್ಬ ಲೋಕಲ್ ಕ್ರೈಮ್ ನ್ಯೂಸ್ ಪೇಪರ್ ವರದಿಗಾರನಿಗೆ ಕೆರ್ವಾಜೆ ಊರಿನಲ್ಲಿರುವ ಪುರಾತತ್ವ ಇಲಾಖೆಗೆ ಇತ್ತೀಚೆಗೆ ಉತ್ಪನನವಾಗಿ ಬಂದಿರುವ ಶಿಲೆಗಳು ರೂಪಾಂತರಗೊಳ್ಳುತ್ತಿರುವ ಮಾಹಿತಿ ಸಿಗುತ್ತದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.