ಹೆಚ್ಚುವರಿ ಮಾಹಿತಿ
ವಿವರಣೆ
ಕಥೆಯ ಗುಟ್ಟು, ಚೆಲುವು ಅಡಗಿರುವುದು ಅದು ಮಿಡಿಯುವ ಧ್ವನಿಯಲ್ಲೇ ಹೊರತು, ಹೇಳುವ ವಿವರಗಳಲ್ಲ ಅಲ್ಲ. ಆ ಧ್ವನಿಯೇ ಕಥೆಯ ಕಥನಕ್ರಮವೂ ಹೌದು. ಎಸ್. ಗಂಗಾಧರಯ್ಯ ಅವರ ಈ ಸಂಕಲನದ ಕಥೆಗಳು, ಕಥೆಗಾಗಿ ಕಥೆ ಹೇಳುವುದಿಲ್ಲ. ಕಥೆಯನ್ನು ಚಂದಗೊಳಿಸುವ ಉದ್ದೇಶದಿಂದ ಭಾಷೆಯನ್ನು ಬಳಸಿಕೊಳ್ಳುವುದಿಲ್ಲ. ಘಟನೆ, ವಿವರ, ಆಲೋಚನೆಗಳ ಮಂಡನೆ ಮುಂತಾದ ಸಂಗತಿಗಳು ಕಥೆಗಾರ ಬಳಸುವ ಕ್ರಮದಿಂದ ನಮ್ಮದೇ ಅನುಭವವಾಗಿ ಬೆಳೆಯುತ್ತವೆ; ಕಥೆಯ ನಿಜದನಿ ಮೂಡುವುದು ಕಥೆಗಾರ ಬಳಸುವ ಭಾಷೆಯಿಂದಲೇ ಎನ್ನುವುದನ್ನು ಇಲ್ಲಿನ ಕಥೆಗಳು ತೋರಿಸಿಕೊಡುತ್ತವೆ.
ಇಲ್ಲಿನ ಬಹುಪಾಲು ಪಾತ್ರಗಳು ತಮ್ಮ ಜೊತೆಗೆ ಸುತ್ತಲಿನ ಪರಿಸರವನ್ನು ಮತ್ತು ಆ ಮೂಲಕ ಇಡೀ ಸಮುದಾಯವನ್ನು ಕರೆದುಕೊಂಡು ನಮ್ಮೆದುರು ಬರುತ್ತವೆ. ಈ ಕಥೆಗಳು ಏಕಕಾಲಕ್ಕೆ ನಮ್ಮ ಅಂತರಂಗದ ಕತೆಯಾಗಿಯೂ, ಸಮುದಾಯದ ಕತೆಯಾಗಿಯೂ ಕಾಣುವುದು ಈ ಕಾರಣದಿಂದಾಗಿಯೇ. ಅನುಭವ ತೀವ್ರತೆಯೊಳಗೆ ಕಥನಕಲೆಯು ಕರಗುತ್ತ ಕಲೆಯು ಜೀವನವಾಗಿ ಮಾರ್ಪಡುತ್ತದೆ. ಪ್ರತಿ ಕತೆಯ ಕೊನೆಯಲ್ಲೂ ನಮ್ಮ ಅಂತರಂಗದೊಳಗೆ ಆಡುವ ವಿಚಿತ್ರ ಅನುಭವವು, ಮರದ ನಂಟು ಕಳಚಿದ ಎಲೆಯು ಹಾರುತ್ತ ಬಂದು ಕೊಳಕ್ಕೆ ಹಗುರ ಬಿದ್ದು ಕೊಳದ ನೀರು ಸಣ್ಣಗೆ ಮಿಡುಕುವ ರೀತಿಯದ್ದು.
ಗಂಗಾಧರಯ್ಯ ಅವರು ಕಾದಂಬರಿ ಬರೆದರೆ ಹೇಗಿರಬಹುದು ಎನ್ನುವ ಕುತೂಹಲ ಮತ್ತು ಬರೆಯಲಿ ಎಂಬ ಹಂಬಲವನ್ನು ಹುಟ್ಟಿಸುವುದೇ ಈ ಕಥೆಗಳ ಶಕ್ತಿ.
– ಜ.ನಾ. ತೇಜಶ್ರೀ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.