ಹೆಚ್ಚುವರಿ ಮಾಹಿತಿ
ವಿವರಣೆ
ಫಾತಿಮಾ ರಲಿಯಾ, ತಮ್ಮ ತಾಯಿಗೆ ಕ್ಯಾನ್ಸರ್ ಬೇನೆ ಬಂದಾಗ, ಅವರ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಕಳೆದ ಅನುಭವ ಕಥನವಿದು. ಆದರೆ ಇದರ ಪರಿಧಿ ಕೇವಲ ತಾಯಿಯ, ಕಾಯಿಲೆಯ ಮತ್ತು ಆಸ್ಪತ್ರೆಲೋಕದ ವಿವರಗಳಿಗೆ ನಿಲ್ಲುವುದಿಲ್ಲ. ತಾಯ ಕಥನದ ಜತೆಗೆ, ಆಸುಪಾಸಿನ ಬದುಕಿನಲ್ಲಿ ನಡೆವ ಹಲವು ವಿದ್ಯಮಾನಗಳನ್ನೂ, ಹಲವರ ವೇದನೆ ಮತ್ತು ಸಂತಸಗಳನ್ನು ಸಮುದಾಯ ಪ್ರಜ್ಞೆಯಲ್ಲಿ ಒಳಗೊಳ್ಳುತ್ತ, ಕಾದಂಬರಿಯಂತೆ ವಿಸ್ತರಣೆ ಪಡೆಯುತ್ತದೆ. ಹೀಗಾಗಿಯೇ ಇದು ಕರಾವಳಿಯ ಅಥವಾ ಭಾರತದ ಸಾಮಾಜಿಕ ಕಾಯಿಲೆಗಳ ಕಥನವಾಗುವುದಕ್ಕೆ ನಿಲ್ಲುವುದಿಲ್ಲ. ಇಲ್ಲಿನ ವ್ಯಕ್ತಿ ಮತ್ತು ಸ್ಥಳಗಳ ಹೆಸರನ್ನು ಬದಲಿಸಿದರೆ, ಎಲ್ಲ ದೇಶದ ಎಲ್ಲ ಕಾಲದ ಮನುಷ್ಯರ ಕಥನವೂ ಆಗುವಂತೆ ಅರಳಿಕೊಳ್ಳುತ್ತದೆ. ಈ ಕಥನದ ಮುಖ್ಯ ಪಾತ್ರವಾದ ಅಮ್ಮ, ಸಾವಿನ ಸಮೀಪ ಹೋಗಿಬರುತ್ತ, ಮಗಳಿಗೆ ಬದುಕಿನ ಪಾಠಗಳನ್ನು ಕಲಿಸುತ್ತ, ಎಲ್ಲರ ತಾಯಾಗುತ್ತಾಳೆ, ದಾರ್ಶನಿಕಳಾಗುತ್ತಾಳೆ. ಇಲ್ಲಿನ ರೂಪಕ ಭಾಷೆಯ ಸೂಕ್ಷ್ಮ ಗದ್ಯವು ಕೆಲವೆಡೆ ಕವಿತೆ ಓದುವ ಅನುಭವ ಕೊಡುತ್ತದೆ. ಇಲ್ಲಿರುವ ವಿಷಾದ ಮತ್ತು ಉತ್ಕಟತೆಗಳು, ಸಾವಿನ ಸನ್ನಿಧಿಯಲ್ಲಿ ಚಿಗುರುವ ಜೀವನಮೀಮಾಂಸೆ ಆಗುತ್ತವೆ.
- ರಹಮತ್ ತರೀಕೆರೆ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.