ಹೆಚ್ಚುವರಿ ಮಾಹಿತಿ
ವಿವರಣೆ
ಆರ್ಥಿಕ ಮತ್ತು ರಾಜಕೀಯ ಘರ್ಷಣೆಗಳು ಸಮಾಜದೊಳಗೆ ಒಂದು ವಿಷಯ. ತಾತ್ವಿಕ ಕ್ಷೇತ್ರದಲ್ಲಿನ ಘರ್ಷಣೆಗಳು ಮತ್ತೊಂದು. ಇವುಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುವುದು ಸುಲಭವಲ್ಲ. ಏಕೆಂದರೆ, ಈ ಸಂಬಂಧ ಬಹಳ ಸಂಕೀರ್ಣ ಮತ್ತು ಜಟಿಲವಾಗಿದೆ. ಇದು ಸರಳವಾಗಿಲ್ಲ. ಸ್ಪಷ್ಟವಾಗಿ ಗೋಚರಿಸುವುದಿಲ್ಲ. ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಮತ್ತು ತಾತ್ವಿಕ ಕ್ಷೇತ್ರದಲ್ಲಿ ಅವುಗಳನ್ನು ಪ್ರತಿನಿಧಿಸುವ ಸಿದ್ಧಾಂತಗಳನ್ನು ಜೋಡಿಸುವ ಸರಣಿಯಲ್ಲಿ ಹಲವಾರು ಸೂಕ್ಷ್ಮಾತಿಸೂಕ್ಷ್ಮ ಕೊಂಡಿಗಳಿವೆ. ಅವುಗಳನ್ನು ಬಿಡಿಸಿ ಬಿಡಿಸಿ ನೋಡಬೇಕಾಗುತ್ತದೆ... ವಿಷಯವನ್ನು ಗ್ರಹಿಸಲು ಸುಲಭವಾಗಬೇಕೆಂದು ಈ ಪುಸ್ತಕದಲ್ಲಿ ಋಗ್ವೇದದ ಆರಂಭದ ಕಾಲ, ಮುಖ್ಯ ಉಪನಿಷತ್ತುಗಳ ಕಾಲ ಮತ್ತು ಗುಪ್ತ ಸಾಮ್ರಾಜ್ಯದ ಕಾಲ ಎಂದು ವಿಂಗಡಿಸಲಾಗಿದೆ. ಆಯಾ ಕಾಲದ ಸಮಾಜ ವ್ಯವಸ್ಥೆಯ ವಿವರಣೆಯನ್ನೂ ಅಗತ್ಯವಿರುವಷ್ಟು ಕೊಡಲಾಗಿದೆ. ಇದರೊಂದಿಗೆ ಭೌತಿಕವಾದಿ ತತ್ವ ಮತ್ತು ಹಿಂದೂ ಧರ್ಮ ಶಾಸ್ತ್ರೋಕ್ತ ತತ್ವ ಇವೆರಡನ್ನೂ ಪರಾಮರ್ಶಿಸಲಾಗಿದೆ. ಇವೆರಡೂ ಬೇರೆ ಬೇರೆ; ಆದರೆ ಅನ್ಯೋನ್ಯ ಸಂಬಂಧಪಟ್ಟ ತಾತ್ವಿಕ ವಿಚಾರ ಸರಣಿಗಳು ಎಂದು ನಿರೂಪಿಸಲಾಗಿದೆ. ಬಹುಮುಖ ಪ್ರತಿಭೆಯ ಎಸ್. ಜಿ. ಸರ್ದೇಸಾಯಿ (1907-1996) ವಿದ್ಯಾರ್ಥಿ ದೆಸೆಯಲ್ಲೇ ಕಾಲೇಜು ಪತ್ರಿಕೆಗಳ ಸಂಪಾದಕ, 1929-30ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮರಾಠಿ ಪತ್ರಿಕೆ 'ಕ್ರಾಂತಿ'ಯ ಸಂಪಾದಕ. 1931-34 ಮುಂಬಯಿ ಗಿರಣಿ ಕಾಮಗಾರಿ ಯೂನಿಯನ್ನಿನ ಕಾರ್ಯದರ್ಶಿ. 1934ರಲ್ಲಿ ಗಿರಣಿ ಕಾರ್ಮಿಕರ ಮುಷ್ಕರದ ಸಂಬಂಧ ಎರಡೂವರೆ ವರ್ಷ ಕಠಿಣ ಸಜೆ. 'ವರ್ಲ್ಡ್ ಮಾರ್ಕ್ಸಿಸ್ಟ್ ರಿವ್ಯೂ' ಮತ್ತು ಪಕ್ಷದ ಮರಾಠಿ ಮುಖಪತ್ರ 'ಯುಗಾಂತರ' ಇವುಗಳ ಸಂಪಾದಕರೂ ಆಗಿದ್ದ ಸರ್ದೇಸಾಯಿಯವರು ಹಲವಾರು ವೈಚಾರಿಕ ಕೃತಿಗಳನ್ನು ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ರಚಿಸಿದ್ದಾರೆ. ಖ್ಯಾತ ಲೇಖಕ, ವಿದ್ವಾಂಸ ಗೌರೀಶ ಕಾಯ್ಕಿಣಿ ಅವರು ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.