ಹೆಚ್ಚುವರಿ ಮಾಹಿತಿ
ವಿವರಣೆ
'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಇದು ಪ್ರತಿಭಾ ನಂದಕುಮಾರ್ ಅವರ ಎರಡನೆಯ ಕಥಾಸಂಕಲನ, ಒಂದು ಹುಚ್ಚಿನಂತೆ, ತಪಸ್ಸಿನಂತೆ, ಏರುತ್ತಲೇ ಇರುವ ಜ್ವರದಂತೆ ಅತ್ಯಂತ ತೀವ್ರಭಾವದ ಕವಿತೆಗಳನ್ನು ಬರೆಯುವ ಪ್ರತಿಭಾ ಅವರು ಎರಡನೆಯ ಕಥಾಸಂಕಲನಕ್ಕೆ ಇಷ್ಟು ಸಮಯ ಏಕೆ ತೆಗೆದುಕೊಂಡರೋ ಗೊತ್ತಿಲ್ಲ. ಅವರ ಕವಿತೆಗಳು ಜಳಜಳನೆ ಉರಿಯುವ ಸುರುಸುರು ಬತ್ತಿ ಕಡ್ಡಿಯ ಬೆಳಕಲ್ಲಿ, ಜಗವನ್ನು, ಅವರ ಒಳಜಗತ್ತನ್ನೂ 'ಕಾಣಿಸು'ವಂಥವು. ಇಲ್ಲಿರುವ ಹದಿನೈದು ಕಥೆಗಳೂ ಸಹ ಅವರ ಕವಿತೆಗಳ ವಿಸ್ತರಣೆಯೇ ಆಗಿವೆ. ಅಂದರೆ ಇವೆಲ್ಲವೂ ಪ್ರತಿಭಾರ ಅತ್ಯಂತ ಖಾಸಗಿ ಜಗತ್ತಿಗೆ ಸೇರಿದವುಗಳೇನೋ ಎನ್ನಿಸುವಷ್ಟು ತೀವ್ರ ಸೂಕ್ಷ್ಮ ಸಂವೇದನೆಗಳನ್ನು ಹಿಡಿದಿಟ್ಟಿವೆ. ಮೇಲುನೋಟಕ್ಕೆ ಇವೆಲ್ಲವನ್ನೂ ನಗರ ಪ್ರಜ್ಞೆಯ ಕಥೆಗಳು ಎಂದು ಹೇಳಬಹುದಾದರೂ ಇವು ಅದಷ್ಟೇ ಅಲ್ಲ, ನಗರಗಳು ಕೊಡುವ ಅನಾಮಿಕತೆ ಮತ್ತು ಅನಾಥಪ್ರಜ್ಞೆಯಲ್ಲಿ ಹೆದ್ದೂಬ್ಬಳು ಹೇಗೆ ನಲುಗುತ್ತಾಳೆ. ಹೋರಾಡುತ್ತಾಳೆ, ಖುಷಿಯನ್ನು ಕಿತ್ತುಕೊಳ್ಳುತ್ತಾಳೆ ಮತ್ತು ಎಲ್ಲದರ ನಡುವೆಯೂ, ಎಲ್ಲದರ ನಂತರವೂ ಬತ್ತದ, ಸೋಲೊಪ್ಪದ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಆದ್ರ್ರತೆ ಕಳೆದುಕೊಳ್ಳದ ಹೆಣ್ಣು ಇಲ್ಲಿ ಮತ್ತೆ ಮತ್ತೆ ನಮಗೆ ಎದುರಾಗುತ್ತಾಳೆ. ಆ ಮಟ್ಟಿಗೆ 'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಎನ್ನುವುದು ಇಲ್ಲಿ ಕೇವಲ ಮುಖಪುಟದ ಸೂಟುಧಾರಿಗಷ್ಟೇ ಅಲ್ಲ, ಕಥಾನಾಯಕಿಯರಿಗೂ ಒಪ್ಪುವ ಮಾತು? ಬೆಕ್ಕಿಗೆ ಒಂಬತ್ತು
ಜೀವಗಳಂತೆ ! ಬೆಕ್ಕು is a survivor!
ಕಥೆಯ ದೃಷ್ಟಿಯಿಂದ ಓದುಗರು ಮತ್ತು ತಂತ್ರದ ದೃಷ್ಟಿಯಿಂದ ಬರಹಗಾರರು ಸಹ ಓದಬೇಕಾದ ಪುಸ್ತಕ ಇದು. ಈ ಕಥೆಗಳ ಚಿತ್ರಕಶಕ್ತಿ ಅನನ್ಯವಾದದ್ದು ಅದು ಕಥೆಗಳನ್ನು ನೇರವಾಗಿ ಮನದಂಗಳಕ್ಕೆ ತಂದು ನಿಲ್ಲಿಸುತ್ತದೆ. ಈ ಕಥೆಗಳು ನಿಮ್ಮನ್ನೂ ಕಾಡಲಿ.
- ಸಂಧ್ಯಾ ರಾಣಿ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.