ಹೆಚ್ಚುವರಿ ಮಾಹಿತಿ
ವಿವರಣೆ
ದೆವ್ವ, ಭೂತ, ಪಿಶಾಚಿಗಳು ನಿಜವಾಗಿಯೂ ಇವೆಯಾ? ಅಥವಾ ನಮ್ಮ ಸುತ್ತಮುತ್ತಲಿನ ಜನರೆಲ್ಲ ವಿಕಾರವಾಗಿ ದೆವ್ವಗಳಂತೆ ಕಾಣುವ ವಿಲಕ್ಷಣ ಮಾನಸಿಕ ಕಾಯಿಲೆಯೊಂದು ಮನುಷ್ಯನನ್ನು ಕಾಡಬಹುದೇ? ನಿಮ್ಮ ಬೆನ್ನು ಹತ್ತಲಿವೆ ರಕ್ತ ಹೆಪ್ಪುಗಟ್ಟಿಸುವ ಸೈಕೋ ಥ್ರಿಲ್ಲರ್ ಕಥೆಗಳು!
ಆಸ್ತಿಕ್ಯ ಮತ್ತು ನಾಸ್ತಿಕ್ಯಗಳ ವಾದದಾಟದ ನಡುವೆ, ವಿಜ್ಞಾನ ಮತ್ತು ಮೂಢನಂಬಿಕೆಗಳ ಗಡಿಯಲ್ಲೇ ಸಾಗುವ ಗುರುರಾಜ ಕೊಡ್ಕಣಿ ಅವರ ಅತ್ಯಂತ ರೋಚಕ ಕಥಾಸಂಕಲನ 'ಅಪರಿಚಿತ ನೆರಳುಗಳು'. ಆಜ್ಞೇಯತಾವಾದದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕೃತಿಯು, ಓದುಗರನ್ನು ಅತ್ಯಂತ ಕುತೂಹಲದ ಮತ್ತು ರೋಮಾಂಚಕ ಜಗತ್ತಿಗೆ ಕರೆದೊಯ್ಯುತ್ತದೆ.
ವಿಜ್ಞಾನವು ದೆವ್ವ-ಭೂತಗಳ ಅಸ್ತಿತ್ವವನ್ನು ಖಂಡಿತವಾಗಿಯೂ ಇಲ್ಲ ಎನ್ನುತ್ತದೆ. ಆದರೆ, ಮನೋವಿಜ್ಞಾನದಲ್ಲಿ 'ಪ್ರಾಸೋಪೋಮೆಟಾಮೊರ್ಫೋಸಿಯಾ' ಎನ್ನುವ ವಿಲಕ್ಷಣ ಕಾಯಿಲೆಯಿದೆ, ಇಲ್ಲಿ ಮನುಷ್ಯರೇ ದೆವ್ವಗಳಂತೆ ಕಾಣಲು ಪ್ರಾರಂಭಿಸುತ್ತಾರೆ! ಮಾನಸಿಕ ಲೋಕದಲ್ಲಿ ಇರಬಹುದಾದ ಇಂತಹ ಇನ್ನೂ ಹತ್ತಾರು ವಿಚಿತ್ರ, ವಿಕೃತ ಮತ್ತು ವೀಕ್ಷಕ ಕಾಯಿಲೆಗಳನ್ನು ಹುಡುಕುತ್ತಾ ಹೊರಟರೆ ಸಿಗುವ ಅನಾಹತ ಹಾಗೂ ಅನೂಹ್ಯ ಸಂಗತಿಗಳೇ ಈ ಪುಸ್ತಕದ ಜೀವಾಳ. "ಅರೆರೆ..!! ಹೀಗೂ ಕಾಯಿಲೆ ಇದೆಯಾ..?" ಎಂದು ಆಶ್ಚರ್ಯ ಮೂಡಿಸುವ ಇಂತಹ ಕೆಲವು ವಿಕ್ಷಿಪ್ತ ರೋಗಲಕ್ಷಣಗಳನ್ನೇ ಆಧಾರವಾಗಿಟ್ಟುಕೊಂಡು, ಅದಕ್ಕೊಂದಿಷ್ಟು ಹಾರರ್ ಒಗ್ಗರಣೆ ಕೊಟ್ಟು ಬರೆದ ರೋಚಕ ಸೈಕೋ ಥ್ರಿಲ್ಲರ್ ಕಥೆಗಳ ಅದ್ಭುತ ಸಂಗ್ರಹ ಇದಾಗಿದೆ.
ಓದಿದ ಮೇಲೂ ಈ ಅಪರಿಚಿತ ನೆರಳುಗಳು ನಿಮ್ಮನ್ನು ಬೆನ್ನು ಹತ್ತುತ್ತವೆಯೋ ಇಲ್ಲವೋ ಎಂಬುದನ್ನು ನೀವೇ ನಿರ್ಧರಿಸಿ!
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.