{"product_id":"rashomon-collection-of-short-stories-of-ryunosuke-akutagawa","title":"ರಾಶೋಮನ್ | Rashomon (Ryunosuke Akutagawa)","description":"\u003cp\u003eಜಪಾನಿನ ಆಧುನಿಕ ಕಥನ ಸಾಹಿತ್ಯವನ್ನು ಹೊರಳುದಾರಿಗೆ ಎಳೆತಂದ ಯೂನೊಸ್ ಅಕ್ತಗವನ ಕಥೆಗಳು ಕಾಲ ಮತ್ತು ದೇಶಾತೀತವಾದ ಮನುಷ್ಯನ ಅಂತರಂಗಕ್ಕೆ ಕನ್ನಡಿ ಹಿಡಿಯುವ, ಸೌಂದಯ್ಯ ಮತ್ತು ಬೀಭತ್ಸ ಮಿಲನಗೊಂಡ ವಿಲಕ್ಷಣ ಕಥಾನಕಗಳು. ತನ್ನ ಮನಸ್ಸಿನ ತುಮುಲಗಳನ್ನೆಲ್ಲ ಬಸಿದು ಕತೆಯಾಗಿಸಿದ ಅಕ್ತಗವ ಸಮಾಜದ ಮೌಲ್ಯಗಳನ್ನು ಪ್ರಶ್ನಿಸುತ್ತಾನೆ. ಮನುಷ್ಯನ ಸಂಕೀರ್ಣ ಮನಸ್ಸಿನ ಭಾವಗಳಿಗೆ ನಾಟಕೀಯ ರೂಪ ನೀಡುತ್ತಾನೆ. ಅಂತರಂಗದ ಪಾತಳಿಗಳಲ್ಲಿರುವ ಅಹಂಕಾರವನ್ನು ಹೊರಗೆಳೆಯುತ್ತಾನೆ. ಮನುಷ್ಯನ ಅಪ್ರಾಮಣಿಕತೆಗೆ ಕನ್ನಡಿ ಹಿಡಿಯುತ್ತಾನೆ. ಚರಿತ್ರೆ, ಪುರಾಣ, ಸಮಕಾಲೀನ ಬದುಕು, ಪ್ಯಾಂಟಿಸಿ ಎಲ್ಲವನ್ನು ಬಳಸಿಕೊಂಡು ಅನೂಹ್ಯವಾದ ಮನುಷ್ಯನ ಅಂತರಂಗವನ್ನು ಶೋಧಿಸಿ ಕತೆಯಾಗಿಸುತ್ತಾನೆ. ಅಹಮಿಕೆ-ಸ್ವಾಭಿಮಾನ, ವಾಸ್ತವ-ಭ್ರಮೆ, ನೀತಿ-ಅನೀತಿಗಳ ನಡುವೆ ಗೆರೆಕೊರೆಯದೆ ವಿಹ್ವಲಗೊಳಿಸುವ ಕಥೆಗಳಿಂದ ಬೆಚ್ಚಿಬೀಳಿಸುತ್ತಾನೆ. ಅಪೂರ್ವವಾದ ವ್ಯಂಗ್ಯ, ರಂಜನೆ, ಸಿಟ್ಟು ಬೆರೆತ ಸಾಮಾಜಿಕ ಟೀಕೆಯ ಅವನ ನಿರೂಪಣೆಗಳು ಜೆನ್ ಕತೆಗಳ ಅಸಂಗತವನ್ನು, ಆಳವಾದ ದರ್ಶನವನ್ನು ಕಟ್ಟುವ ರಚನೆಗಳು.\u003c\/p\u003e\n\u003cp\u003eಜಗತ್ತಿನ ಸಿನಿಮಾ ನೋಡುಗರು ಬೆಚ್ಚಿ ಎದ್ದುಕೂರುವಂತೆ ಮಾಡಿದ ಅಕಿರ ಕುರೊಸಾವನ ರಾಲೊಮಾನ್ ಚಿತ್ರವು ಅದರ ನಿರ್ದೆಶಕನ ಜೊತೆಯಲ್ಲಿಯೇ ಕತೆಗಾರ ಅಕ್ತಗವನನ್ನು ಜಗತ್ತಿಗೆ ಪರಿಚಯಿಸಿತು, ಈಗಲೂ ಜಗತ್ತಿನ ಸಾಹಿತ್ಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿರುವ ಯೂನೊಸ್ ಅಕ್ತಗವನ ಕಥೆಗಳು ಕನ್ನಡಕ್ಕೆ ಈ ಪ್ರಮಾಣದಲ್ಲಿ ಪರಿಚಯವಾಗುತ್ತಿರುವುದು ಇದೇ ಮೊದಲು.\u003c\/p\u003e","brand":"BEETLE BOOK SHOP","offers":[{"title":"Default Title","offer_id":51672715886875,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/rashomon-collection-of-short-stories-of-ryunosuke-akutagawabeetle-book-shop-3489546.png?v=1769427487","url":"https:\/\/beetlebookshop.com\/products\/rashomon-collection-of-short-stories-of-ryunosuke-akutagawa","provider":"Beetle Book Shop","version":"1.0","type":"link"}