{"product_id":"nanna-maate-bandooku-gundu","title":"ನನ್ನ ಮಾತೇ ಬಂದೂಕು ಗುಂಡು (ಮಲ್ಲು ಸ್ವರಾಜ್ಯಂ ಅವರ ಆತ್ಮಕಥೆ) | Nanna Maate Bandooku Gundu","description":"\u003cp\u003e\u003cspan\u003eಈ ಪುಸ್ತಕದಲ್ಲಿನ ಹೋರಾಟದ ಕಥನ ಮಲ್ಲು ಸ್ವರಾಜ್ಯಂ ಎಂಬ ಹೋರಾಟಗಾರ್ತಿಯೊಬ್ಬರ ಆತ್ಮಕಥೆಯ ಮೂಲಕ ನಿರೂಪಿಸಲ್ಪಟ್ಟಿದೆ. ಬಾಲ್ಯದಿಂದಲೂ ಕ್ರಾಂತಿಕಾರೀ ಮನೋಭಾವ ಇದ್ದುದು ಹಾಗೂ ಕುಟುಂಬದಲ್ಲೂ ಅದಕ್ಕೆ ಪೂರಕ ವಾತಾವರಣ ಇದ್ದುದು ಕೂಡಾ ಆಕೆ ಯಶಸ್ವೀ ಕ್ರಾಂತಿಕಾರಿಯಾಗಲು ಸಾಧ್ಯವಾಯಿತು. ಆಕೆ ಹೇಳುತ್ತಾರೆ - \"ನನ್ನ ಮಾತೇ ಸಿಡಿಗುಂಡು, ತುಪಾಕಿ ಗುಂಡು\". ಇಲ್ಲಿ ಮಾತು ಕೂಡಾ ಒಂದು ಆಯುಧವೇ! ಹೋರಾಟಗಳ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತದೆ. ಉದಾ : ತೀರಾ ಹಿಂದಕ್ಕೆ ಹೋದರೆ ಕತ್ತಿ-ಗುರಾಣಿ-ಬಿಲ್ಲು ಬಾಣಗಳ ಕಾಲ. ಇನ್ನೂರು ವರ್ಷ ಹಿಂದಕ್ಕೆ ಹೋದಾಗ ಗೆರಿಲ್ಲಾ ಹೋರಾಟ. ಇಂದು ಮಿಸೈಲ್, ಗುಂಡು, ಬಾಂಬು, ವೈಮಾನಿಕ ದಾಳಿಗಳ ಹೋರಾಟ. ಅಂದಂದಿನ ವಿದ್ಯಮಾನಗಳು, ಸಮಸ್ಯೆಗಳು ಕಾಲಕ್ಕೆ ತಕ್ಕಂತೆ ಹೋರಾಟಗಳನ್ನು ರೂಪಿಸುತ್ತವೆ. ಒಂದು ಕಾಲದಲ್ಲಿ ತೀವ್ರವಾಗಿದ್ದ ಜಮೀನ್ದಾರಿ ವ್ಯವಸ್ಥೆ, ಅನಿಷ್ಟ ಸಾಮಾಜಿಕ ಕಟ್ಟುಪಾಡುಗಳು, ವರ್ಣ ವ್ಯವಸ್ಥೆ ಮುಂತಾದ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ ಮಹಿಳೆ ಈ ಕೃತಿಯಲ್ಲಿ ನಮಗೆ ಪರಿಚಯವಾಗುತ್ತಾರೆ. ಇಂದು ಪ್ರಪಂಚವನ್ನೇ ಏಕೆ ಬಾಹ್ಯಾಂತರಿಕ್ಷದ ಆಚೆಗೂ ಪ್ರಭುತ್ವ ಸಾಧಿಸುವ ಛಲ - ಮಹದಾಕಾಂಕ್ಷೆಯ ಕಾಲಘಟ್ಟದಲ್ಲಿ ಅಂದಿನ ಹೋರಾಟಗಳ ಕಡೆಗೆ ಕಣ್ಣು ಹಾಯಿಸುವ ಒಂದು ಅಪೂರ್ವ ಅವಕಾಶ. ಕೃತಿಯ ಅನುವಾದಕರಾದ ಸ. ರಘುನಾಥ ಕಥೆ, ವಿಮರ್ಶೆ, ಕಾವ್ಯ, ಶಿಶುಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ದ್ವಿಭಾಷಾ ಅನುವಾದಕರಾಗಿದ್ದಾರೆ. ಅದರಲ್ಲಿಯೂ ಗ್ರಾಮೀಣ ಕೂಲಿಕಾರ ಮಹಿಳೆಯರ ಒಳತೋಟಿಯನ್ನು ಇವರ ಕಥೆಗಳು ಚಿತ್ರಿಸಿಕೊಡುತ್ತವೆ. ಕೋಲಾರ ಜಿಲ್ಲೆಯ ವಿಶಿಷ್ಟವಾದ ತೆಲುಗು ಮಿಶ್ರಿತ ಕನ್ನಡದ ಗಂಧ ಇವರ ಕಥೆ ಮತ್ತು ಕವಿತೆಗಳಲ್ಲಿ ತುಂಬಿರುತ್ತದೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52442867695899,"sku":null,"price":171.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/2026june-2.jpg?v=1782994144","url":"https:\/\/beetlebookshop.com\/products\/nanna-maate-bandooku-gundu","provider":"Beetle Book Shop","version":"1.0","type":"link"}