{"product_id":"lorkanemba-belaku","title":"ಲೋರ್ಕನೆಂಬ ಬೆಳಕು \/ Lorcanemba Belaku","description":"\u003cp\u003e\u003cspan\u003eA Biography of Federico Garcia Lorca 1936-39 ಸ್ಪೇನಿನ ಇತಿಹಾಸದಲ್ಲಿ ಅಂತರ್ಯುದ್ಧದ ಕಾಲ. ಸೈನ್ಯಾಧಿಕಾರಿಯಾಗಿದ್ದ ಫ್ರಾನ್ಸಿಸ್ಕೋ ಫ್ರಾಂಕೋ - ಫ್ಯಾಸಿಸ್ಟ್ ಸರ್ವಾಧಿಕಾರಿ, ತನ್ನ ದಬ್ಬಾಳಿಕೆಯಲ್ಲಿ ದೇಶವನ್ನು ನಲುಗಿಸಿದ್ದ, ನಡುಗಿಸಿದ್ದ. ಚುನಾವಣೆಯಲ್ಲಿ ಗೆದ್ದಿದ್ದ ರಿಪಬ್ಲಿಕನ್ನರಿಗೆ ಅಧಿಕಾರ ಕೂಡದೆಂದು ಚಿತ್ರಹಿಂಸೆಯ ಆಗರವನ್ನಾಗಿಸಿದ್ದ ನಂತರ ಹಲವು ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ಮೆರೆದಿದ್ದ. 'ಮೋಹಕ ಪುಷ್ಪ' ಎಂಬ ಅಡ್ಡ ಹೆಸರನ್ನು ಪಡೆದ ಸ್ಪೇನಿನ ಕಮ್ಯುನಿಸ್ಟ್ ಪಕ್ಷದ ನಾಯಕಿ ಡೊಲೊರೆಸ್ ಇಬುರಿ- 'ಕಾಲುಗಳ ಮೇಲೆ ನಿಂತು ಪ್ರಾಣ ಕೊಡುತ್ತೇನೆ, ಮಂಡಿಯೂರಿ ಜೀವಿಸುವುದಿಲ್ಲ' ಎಂಬ ಕ್ರಾಂತಿಕಾರಕ ಸಂದೇಶವನ್ನು ನೀಡುತ್ತಾಳೆ. ಅಂತೆಯೇ ಹಲವು ದೇಶಗಳ ಕ್ರಾಂತಿಕಾರಿಗಳು ಸ್ಪೇನಿನ ಅಂತರ್ಯುದ್ಧದಲ್ಲಿ ಪಾಲ್ಗೊಂಡರು. ಜೀವ ತೆತ್ತರು. ಅರ್ನೆಸ್ಟ್ ಹೆಮ್ಮಿಂಗ್, ಬ್ರಿಟನ್ನಿನ ಪತ್ರಕರ್ತ ರಾಲ್ಸ್ ಫಾಕ್ಸ್ ಹಾಗೂ ಚಿತ್ರಕಲಾ ವಿಶಾರದ ಪ್ಯಾಬ್ಲೊ ಪಿಕಾಸೋ ಪ್ರಮುಖರೆನಿಸಿಕೊಳ್ಳುತ್ತಾರೆ. ಲೋರ್ಕನು ಕವಿಯಾಗಿ, ನಾಟಕಕಾರನಾಗಿ ಜನಮನ್ನಣೆ ಗಳಿಸಿದ್ದವನು. ಅವನ ಆತ್ಮೀಯರಲ್ಲಿ ನೆರುಡನಂತಹ ಹತ್ತಾರು ಕವಿಗಳು ಸೇರಿದ್ದಾರೆ. ಲೋರ್ಕನು ಜನತೆಯ ಪರವಾಗಿ ಇದ್ದವನು, ಯುದ್ಧ ಆರಂಭಗೊಂಡ ಒಂದೂವರೆ ತಿಂಗಳಿನಲ್ಲಿಯೇ ಫ್ಯಾಸಿಸ್ಟರು ಅವನನ್ನು ಕೊಂದುಹಾಕಿದ್ದರು. ಲೋರ್ಕನ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬಂದಿರುವುದು ನಗಣ್ಯವೆನ್ನುವಷ್ಟು ಅಪರೂಪ. ಕಲಾವಿದೆ ಮತ್ತು ಬರಹಗಾರ್ತಿ ಶ್ಯಾಮಲಾ ಗುರುಪ್ರಸಾದ್ ಅವನ ಜೀವನ ಮತ್ತು ಸಾಧನೆಯ ಕುರಿತು ಅಪೂರ್ವ ಕೃತಿಯೊಂದನ್ನು ನೀಡಿದ್ದಾರೆ. ಅವನ ಕಾವ್ಯ ಮತ್ತು ನಾಟಕ ಕೃಷಿಯನ್ನು ಅನನ್ಯವಾಗಿ ಪರಿಚಯಿಸಿದ್ದಾರೆ. ಲೋರ್ಕನ ಕವನ ಮತ್ತು ನಾಟಕಗಳಿಂದ ಆಯ್ದ ಸಂಕ್ಷಿಪ್ತ ಉಲ್ಲೇಖಗಳು ಕೃತಿಯ ಉಪಯುಕ್ತತೆಯನ್ನು ಇಮ್ಮಡಿಗೊಳಿಸಿವೆ ಮತ್ತು ಅವನ ಜೀವನ ದೃಷ್ಟಿಯನ್ನು ಹಸನಾಗಿ ಪ್ರತಿಫಲಿಸಿವೆ. ಜರ್ಮನಿಗೆ ಬ್ರೆಕ್ಟ್ ಇದ್ದಂತೆ ಸ್ಪೇನಿಗೆ ಲೋರ್ಕ ಎಂದರೆ ಉತ್ತೇಕ್ಷೆಯೇನೂ ಇಲ್ಲ. ನಮ್ಮ ನಾಡಿನಲ್ಲಿ ಪ್ರಸ್ತುತ, ಲೋರ್ಕನಂಥವರ ಜನಮುಖಿ ಕಾಳಜಿ ಮತ್ತು ವಿಮೋಚನಾ ಹಾದಿಯ ಶೋಧನೆ ಅಪಾರವಾಗಿ ಅಗತ್ಯವಾಗಿದೆ. ಆ ದಿಕ್ಕಿನಲ್ಲಿ ಶ್ಯಾಮಲಾ ಅವರ ಕೃಷಿ ಪ್ರಶಸ್ತವಾಗಿದೆ, ಅನುಕರಣೀಯವಾಗಿದೆ. ಅವರಿಗೆ ಹೃತ್ತೂರ್ವಕ ವಂದನೆಗಳು. ಫ್ಯಾಸಿಸ್ಟ್ ದುರ್ದೆಸೆಯ ನಿವಾರಣೆಗೆ ಲೋರ್ಕನಂಥವರ ಮಾತು ಕೃತಿ ಪ್ರಶಸವೇ ಆಗಿರುತ್ತದೆ\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":54447199977755,"sku":null,"price":166.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bunny-6ec83d7e887d4071bb1b5e7c09370a03.jpg?v=1793195877","url":"https:\/\/beetlebookshop.com\/products\/lorkanemba-belaku","provider":"Beetle Book Shop","version":"1.0","type":"link"}