{"product_id":"lakshya-poetry","title":"Lakshya | ಲಕ್ಷ್ಯ ( Poetry )","description":"\u003cp\u003eಪ್ರಿಯ ಓದುಗರಿಗೆ ಡಾ|| ಮಮತಾ ಲೋಕೇಶ್ವರಿ ಎನ್. ಮಾಡುವ ನಮಸ್ಕಾರಗಳು. ಚಾಮರಾಜನಗರ ಜಿಲ್ಲೆಯ ಕಟ್ನವಾಡಿ ಗ್ರಾಮದ ಕೆ.ಎಸ್. ನಂದೀಶಪ್ಪ ಹಾಗೂ ರಶ್ಮಿ ಎಂ. ದಂಪತಿಗಳ ಏಕೈಕ ಪುತ್ರಿಯಾಗಿ ಜನನ.\u003c\/p\u003e\n\u003cp\u003eತಾತ-ಅಜ್ಜಿ ಅವರ ಆಶೀರ್ವಾದದ ನೆರಳಲ್ಲಿ ಬೆಳೆದೆ. ನನ್ನ ಪ್ರತಿ ಹೆಜ್ಜೆಯ ಹಿಂದೆ ನನ್ನ ತಂದೆ-ತಾಯಿಯ ತ್ಯಾಗ ಮತ್ತು ಅಚಲ ಬೆಂಬಲ ಅಡಗಿದೆ. ಸಂತ ಫ್ರಾನ್ಸಿಸ್ ಐ.ಸಿ.ಎಸ್.ಇ. ಶಾಲೆ ಹಾಗೂ ಸೇವಾ ಭಾರತಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಸಾಹಿತ್ಯ, ಕಲೆಗಳ ಮಹತ್ವವನ್ನು ಅರಿಯುವಂತೆ ಅಲ್ಲಿನ ಶಿಕ್ಷಕರು ಜೀವನಕ್ಕೆ ದಿಕ್ಕು ತೋರುವ ದೀಪಸ್ತಂಭಗಳಾದರು.\u003c\/p\u003e\n\u003cp\u003eಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ನಂತರ ಎಂ.ಬಿ.ಬಿ.ಎಸ್. ವ್ಯಾಸಂಗವನ್ನು ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲಿ ಮಾಡಿದೆ. ವೈದ್ಯಕೀಯ ವಿಭಾಗವು ಕೇವಲ ವೃತ್ತಿಗಷ್ಟೇ ಸೀಮಿತವಾಗದೆ, ಮಾನವನ ನೋವು, ಭಯ ಹಾಗೂ ರೋಗದ ವಿರುದ್ಧ ಹೋರಾಡುವ ಶಕ್ತಿಯೆಂದು ಕಲಿಸಿತು.\u003c\/p\u003e\n\u003cp\u003eಪ್ರಸ್ತುತ ಭರತನಾಟ್ಯ ಮತ್ತು ಕರ್ನಾಟಕ ಸಂಗೀತವನ್ನು ಸಹ ಅಭ್ಯಸಿಸುತ್ತಿದ್ದೇನೆ. ಚಿತ್ರಕಲೆಯಲ್ಲೂ ಅಭಿರುಚಿಯಿದ್ದು, ಯೋಗ-ವ್ಯಾಯಾಮವನ್ನು ದಿನಚರಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಶಾಸ್ತ್ರೀಯ ಕಲೆಗಳು ಅಂತರಂಗವನ್ನು ಮತ್ತಷ್ಟು ಸೌಮ್ಯ-ಶಿಸ್ತಿನಿಂದ ತುಂಬುತ್ತವೆ ಎಂದು ನಂಬಿದ್ದೇನೆ.\u003c\/p\u003e\n\u003cp\u003eನಾಡು-ನುಡಿ, ಕಲೆ-ಸಾಹಿತ್ಯಕ್ಕೆ ಸೇವೆ ಸಲ್ಲಿಸಬೇಕೆಂಬ ಆಸೆ ಹೊಂದಿದ್ದೇನೆ.\u003c\/p\u003e\n\u003cp\u003eಮನದ ಹಸಿವಿಗೆ ಜ್ಞಾನವೇ ಆಹಾರವೆಂದು ನಂಬುತ್ತಾ ನನ್ನ ಪರಿಚಯವನ್ನು ಅಂತ್ಯಗೊಳಿಸುತ್ತಿದ್ದೇನೆ.\u003c\/p\u003e\n\u003cp\u003eಇಂತಿ ನಿಮ್ಮ ಪ್ರೀತಿಯ\u003c\/p\u003e\n\u003cp\u003eಡಾ|| ಮಮತಾ ಲೋಕೇಶ್ವರಿ ಎನ್., ಎಂ.ಬಿ.ಬಿ.ಎಸ್. ಕಟ್ನವಾಡಿ, ಚಾಮರಾಜನಗರ ತಾಲ್ಲೂಕು ಹಾಗೂ ಜಿಲ್ಲೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":52244296532251,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/Screenshot2026-05-22194609.jpg?v=1779459387","url":"https:\/\/beetlebookshop.com\/products\/lakshya-poetry","provider":"Beetle Book Shop","version":"1.0","type":"link"}