{"product_id":"karantha-ananta-diganta","title":"Karantha Ananta-Diganta: K. Shivarama Karantha Vyakti | Vyaktitva | Prasangagalu (ಕಾರಂತ ಅನಂತ-ದಿಗಂತ: ಕೆ. ಶಿವರಾಮ ಕಾರಂತ ವ್ಯಕ್ತಿ | ವ್ಯಕ್ತಿತ್ವ | ಪ್ರಸಂಗಗಳು","description":"\u003cp\u003eಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಭಾಷೆಗಳಲ್ಲಿಯೂ ಕಾರಂತರಂತಹ ಬಹುಮುಖ ಪ್ರತಿಭೆಗಳು ವಿರಳ, ವಿಶ್ವಮಟ್ಟದ ಮಾನ್ಯತೆಗೆ ಅರ್ಹವಾದ ಪ್ರತಿಭೆ, ವೈಜ್ಞಾನಿಕ ಮನೋಭಾವದ ಶುದ್ದ ಬುದ್ಧಿಜೀವಿ, ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವ- ಇವೆಲ್ಲವೂ ಕಾರಂತರನ್ನು ಅನನ್ಯರನ್ನಾಗಿ ಮಾಡಿವೆ. ಅವರು ಯಾವ ಕ್ಷೇತ್ರದಲ್ಲೇ ಕೆಲಸ ಮಾಡಿದರೂ, ತಮ್ಮದೇ ಆದ ನಿಲುವಿನೊಂದಿಗೆ, ಬಹುತೇಕ ಒಂಟಿ ಸಲಗದಂತೆ ಸಾಗಿದರು. ಮುಖವಾಡಗಳಿಲ್ಲದ ಸರಳ ಬದುಕು, ನೇರ ನುಡಿ, ರಾಜಿಯಿಲ್ಲದ ಸತ್ಯನಿಷ್ಠೆ ಮತ್ತು ಆತ್ಮಗೌರವ- ಇವು ಅವರ ವ್ಯಕ್ತಿತ್ವದ ಮೂಲಗುಣಗಳು, ಒಂದರ್ಥದಲ್ಲಿ ಅವರದು ಕಡಲಿನಷ್ಟು ವಿಶಾಲವಾದ ವ್ಯಕ್ತಿತ್ವ.\u003c\/p\u003e\n\u003cp\u003eಕಾರಂತರಂತಹ ವಿರಾಟ್ ವ್ಯಕ್ತಿತ್ವವನ್ನು ಒಂದು ಪುಟ್ಟ ಪುಸ್ತಕದ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಪರಿಚಯಿಸುವುದು ಅಸಾಧ್ಯದ ಕೆಲಸ. ಈ ಕೃತಿ ಅವರ ಸಮಗ್ರ ಜೀವನಗಾಥೆಯಲ್ಲ; ಅವರ ವ್ಯಕ್ತಿತ್ವದ ಕೆಲವು ಪ್ರಮುಖ ಮಗ್ಗಲುಗಳನ್ನು, ಕೆಲವು ಅರ್ಥಪೂರ್ಣ ಪ್ರಸಂಗಗಳನ್ನು ಮತ್ತು ಅವರ ಸಾಧನೆಯ ವೈಶಾಲ್ಯವನ್ನು ಓದುಗರಿಗೆ ಪರಿಚಯಿಸುವ ಒಂದು ವಿನಮ್ರ ಪ್ರಯತ್ನ ಮಾತ್ರ. ಈ ಯತ್ನವು ಓದುಗರಲ್ಲಿ ಕಾರಂತರ ಕೃತಿಗಳನ್ನೂ, ಅವರ ಜೀವನವನ್ನೂ ಇನ್ನಷ್ಟು ಆಳವಾಗಿ ಅರಿಯುವ ಕುತೂಹಲವನ್ನು ಹುಟ್ಟಿಸಿದರೆ, ಈ ಕೃತಿಯ ಉದ್ದೇಶ ಸಾರ್ಥಕವಾದಂತೆಯೇ.\u003c\/p\u003e\n\u003cp\u003e~ಡಾ. ಎಚ್. ಎಸ್. ಸತ್ಯನಾರಾಯಣ\u003c\/p\u003e","brand":"BEETLE BOOK SHOP","offers":[{"title":"Default Title","offer_id":54192527769883,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-10-11at11.32.03AM_1.jpg?v=1791699308","url":"https:\/\/beetlebookshop.com\/products\/karantha-ananta-diganta","provider":"Beetle Book Shop","version":"1.0","type":"link"}