{"product_id":"kaladiya-kannu","title":"ಕಾಲಡಿಯ ಕಣ್ಣು: ದಲಿತ ಲೋಕ ಕಥನ (Kaladiya Kannu: CM Muniyappa Hasala Jeevana Kathana) – ಸಿ. ಎಂ. ಮುನಿಯಪ್ಪ","description":"\u003cp\u003eದಲಿತ ಚಳವಳಿಯ ಆರಂಭದ ದಿನಗಳ ಮುಂಚೂಣಿ ನಾಯಕ ಸಿ.ಎಂ.ಮುನಿಯಪ್ಪ ತಮ್ಮ ಜೀವನ ಕಥನವನ್ನು ಬರೆದಿದ್ದಾರೆ. ಮುನಿಯಪ್ಪ ಅವರ ಜೀವನ ಕಥನ ಕೇವಲ ಒಬ್ಬ ವ್ಯಕ್ತಿಯ ಕಥನವಾಗದೆ ದಲಿತ ಚಳವಳಿಯ ಹೋರಾಟದ ಕಥನವೇ ಆಗಿದೆ. ಭೂಮಾಲಿಕರ ದಬ್ಬಾಳಿಕೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಪರಾಕಾಷ್ಠೆಗೆ ಹೆಸರಾಗಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಿ.ಎಂ.ಮುನಿಯಪ್ಪ ಎಂದರೆ ಚಳವಳಿಯ ಜೀವಂತ ಜ್ವಾಲೆ.\u003c\/p\u003e\n\u003cp\u003eಮೇಲ್ಟಾತಿ ಭೂಮಾಲೀಕರು ಮತ್ತು ಉಳ್ಳವರ ಎದೆಯಲ್ಲಿ ನಡುಕ ಮೂಡಿಸುತ್ತಿದ್ದ ಸಿಎಂ, ದಲಿತ ಚಳವಳಿಯ ಅಂತರಾಳದ ದನಿಯಾಗಿದ್ದರು. ದಲಿತ ಸಂಘರ್ಷ ಸಮಿತಿಗೆ ಎರಡು ಬಾರಿ ರಾಜ್ಯ ಸಂಚಾಲಕರಾಗಿದ್ದ ಮುನಿಯಪ್ಪ ಅವರ ಜೀವನ ಕಥನವನ್ನು ಓದುತ್ತಿದ್ದರೆ ಚಳವಳಿಯ ಜೀವಂತ ಚಿತ್ರಗಳು ಕಣ್ಣಮುಂದೆ ತೆರೆದುಕೊಳ್ಳುತ್ತವೆ.\u003c\/p\u003e\n\u003cp\u003eತಾನು ಅನುಭವಿಸಿದ ನೋವು, ದೌರ್ಜನ್ಯಗಳನ್ನು ತಾಯ್ತನದ ಕಕ್ಕುಲತೆ ಮತ್ತು ಅಂತಃಕರಣದಿಂದ ವಿವರಿಸುವ ಈ ಕಥನ, ದೌರ್ಜನ್ಯ ಎಸಗಿದವರಲ್ಲಿ ಪಾಪ ಪ್ರಜ್ಞೆ ಮತ್ತು ಪಶ್ಚಾತ್ತಾಪ ಮೂಡಿಸುತ್ತದೆ. ಎಲ್ಲಿಯೂ ಆಕ್ರೋಶ, ತೇಜೋವಧೆ, ಅಸಹನೆಗೆ ಬರೆವಣಿಗೆ ಹೊರಳಿಲ್ಲ. ಎಲ್ಲವನ್ನೂ ಸಮತೋಲನದಿಂದಲೇ ಗ್ರಹಿಸಿ, ಸಮಚಿತ್ತದಿಂದ ತಾನೂ ಎಲ್ಲದರ ಭಾಗ ಎನ್ನವಂತೆ ಅವಲೋಕನಕ್ಕೆ ಒಡ್ಡಿಕೊಂಡಂತಾಗಿದೆ.\u003c\/p\u003e\n\u003cp\u003eದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.\u003c\/p\u003e\n\u003cp\u003e- ಇಂದೂಧರ ಹೊನ್ನಾಪುರ ( ಹಿರಿಯ ಪತ್ರಕರ್ತ, ಸಾಹಿತಿ )\u003c\/p\u003e","brand":"BEETLE BOOK SHOP","offers":[{"title":"Default Title","offer_id":52593903239451,"sku":null,"price":540.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/Untitleddesign_3.jpg?v=1784113178","url":"https:\/\/beetlebookshop.com\/products\/kaladiya-kannu","provider":"Beetle Book Shop","version":"1.0","type":"link"}