{"product_id":"chandiranillada-irulugalu","title":"Chandiranillada Irulugalu","description":"\u003cp\u003eಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತ, ಸೂಕ್ತ ಸಂತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ ಉತ್ತರಾಧಿಕಾರದ ದಾಹ, ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಶಾ೦ತಿ.\u003c\/p\u003e\n\u003cp\u003eವಿಜಯನಗರದ ಈ ಗಲಭೆಗಳಿಂದ ದೂರದಲ್ಲಿಹ ಒಂದು ಹಳ್ಳಿ - ಮರಾವಳಿ. ಅಲ್ಲಿಯ ಭವ್ಯವಾದ ತೋಟದ ಮನೆ ಮಧುವನ. ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲ ಈ ಸ೦ಪತ್ತಿನ ಒಡೆಯ ಎಪ್ಪತ್ತು ವಯಸ್ಸಿನ ರಾಜಣ್ಣ ಅಕಾಲ ಮರಣಕ್ಕೆ ತುತ್ತಾಗಿದ್ದಾರೆ. ಕುಲದ ಗರಿಮೆಯನ್ನು ಕಾಪಾಡಲು, ಅವರ ಮೂರು ವಿಧವೆಯರಿಗೆ ಸತಿ ಪರಿಕ್ರಮ ಕೈಗೊಳ್ಳುವಂತೆ ಸದನದ ಹಿರಿಯರು ಆದೇಶಿಸಿದ್ದಾರೆ.\u003c\/p\u003e\n\u003cp\u003eಈ ಸಂದಿಗ್ಧತೆಯಲ್ಲಿ ಮೂರು ಪ್ರಧಾನ ಪಾತ್ರಗಳು ಕವಲು ದಾರಿಗಳಲ್ಲಿ ಎದುರಾಗುತ್ತವೆ: ಕಿರಿಯ ವಿಧವೆ, ರಾಜಣ್ಣನ ಏಕೈಕ ಪುತ್ರ ಸಂತಾನಕ್ಕೆ ಜನ್ಮವಿತ್ತ ಇನ್ನೂ ಇಪ್ಪತ್ತೆರಡರ ಮನಮೋಹಕ ಆದರ್ಶಿನಿ ಈ ಸತಿಯನ್ನು ಒಲ್ಲಳು. ಚಿಕ್ಕಂದಿನಿಂದ ರಾಜಣ್ಣನನ್ನು ತ೦ದೆಯ೦ತೆ ಗೌರವಿಸಿ ಅವರ ಅಂಗರಕ್ಷಕನಾಗಿದ್ದ ಅಜಮ್ ಖಾನ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ. ಮರಾವಳಿಯ ಪ್ರಭಾವಶಾಲಿ ಪುರೋಹಿತ, ಪ್ರಭಾಕರಸ್ವಾಮಿ, ಮೂರನೆಯವರು. ಈತ ಉರುಳಿಸಿದ ಒಂದು ದಾಳದಿಂದ ಭುಗಿಲೆದ್ದ ತಿರುವು-ಮುರುವುಗಳೇ ಈ ಕತೆಯ ಹಂದರ.\u003c\/p\u003e\n\u003cp\u003eಏಳು-ಬೀಳು, ಪ್ರೇಮ-ಕಾಮಗಳ ಸಂಘರ್ಷದಲ್ಲಿ ಹೊರಗಿನ ವೈರಿಗಳನ್ನಲ್ಲದೆ, ತನ್ನೊಳಗಿನ ಅರಿಯನ್ನೂ ಹತ್ತಿಕ್ಕಬೇಕಾದ ಪಣಗಳು. ತನ್ನ ಜೀವನ ದೃಷ್ಟಾಂತವನ್ನು ತಾನೇ ಚಿತ್ರಿಸುವ ದುಸ್ಸಾಹಸಗಳನ್ನು ಕೈಗೊಳ್ಳುತ್ತಾ ನಿಮ್ಮ ಕಥಾನಾಯಕಿಯಾಗುತ್ತಾಳೆ, ಆದರ್ಶಿನಿ.\u003c\/p\u003e\n\u003cp\u003eಪುರುಷ ಪ್ರಧಾನ ಪಥದಲ್ಲಿ ಬೆಳೆಯುತ್ತಾ ತನ್ನ ಗುರಿಯತ್ತ ಸಾಗುತ್ತಾಳೆಯೆ? ಓದಿ ನೋಡಬೇಕು.\u003c\/p\u003e\n\u003cp\u003eಇದೊಂದು ವಿಜಯನಗರ ಸಾಮ್ರಾಜ್ಯದ ಕತೆ... ಅಲ್ಲವೇ ಅಲ್ಲ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50498779185435,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chandiranillada-irulugalu-4167270.png?v=1767530585","url":"https:\/\/beetlebookshop.com\/products\/chandiranillada-irulugalu","provider":"Beetle Book Shop","version":"1.0","type":"link"}